ದೇಶ ಲಾಕೌ ಡೌನ್ ಆಗಿರುವುದರಿಂದ ಅನೇಕರು ತಮ್ಮ ಹವ್ಯಾಸದ ಕಡೆಗೆ ಗಮನಹರಿಸಿದ್ದಾರೆ. ಕೆಲಸದ ಒತ್ತಡದಲ್ಲಿ ಕಳೆದು ಹೋಗಿದ್ದ ತಮ್ಮ ಹಳೆಯ ಹವ್ಯಾಸಗಳನ್ನು ಮರೆತಿದ್ದ ಜನ ಈ ಲಾಕೌ ಡೌನ್ ಸಮಯದಲ್ಲಿ ಮತ್ತೆ ತಮ್ಮ ಹವ್ಯಾಸಗಳತ್ತ ಮುಖ ಮಾಡಿದ್ದಾರೆ. ಇದರಲ್ಲಿ ಸಿನಿಮಾ ನಟರು ಕೂಡಾ ಹೊರತಾಗಿಲ್ಲ. ಈ ಬಿಡುವಿನ ವೇಳೆಯಲ್ಲಿ ತಮಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಿದ್ದಾರೆ.
ನಟಿ ಹರಿಪ್ರಿಯಾ ಕೂಡಾ ಕಳೆದು ಹೋಗಿದ್ದ ತಮ್ಮ ಹವ್ಯಾಸವನ್ನು ಮತ್ತೆ ಶುರುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಅವರ ಹವ್ಯಾಸ ಏನು ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಬರವಣಿಗೆ. ಹೌದು, ಹರಿಪ್ರಿಯಾ ಬರವಣಿಗೆ ಎಂದರೆ ಮೊದಲಿನಿಂದಲೂ ತುಂಬಾ ಆಸಕ್ತಿ ಹೊಂದಿದ್ದಾರೆ. ಕೆಲಸದ ಒತ್ತಡದಿಂದಾಗಿ ಬರವಣಿಗೆಯನ್ನು ಬದಿಗಿಟ್ಟಿದ್ದ ಹರಿಪ್ರಿಯಾ ಈಗ ಮತ್ತೆ ಬರವಣಿಗೆಯನ್ನು ಶುರುವಿಟ್ಟುಕೊಂಡಿದ್ದಾರೆ. ಅದಕ್ಕೊಂದು ವೇದಿಕೆ ಕೂಡಾ ಕಲ್ಪಿಸಿದ್ದಾರೆ. ಅದು ಬ್ಲಾಗ್ ಕ್ರಿಯೇಟ್ ಮಾಡುವ ಮೂಲಕ. ಬೇಬ್ ನೋಸ್-ನಾಟ್ ಎವರಿಥಿಂಗ್ ಎಂಬ ಬ್ಲಾಗ್‌ವೊಂದನ್ನು ಆರಂಭಿಸಿದ್ದಾರೆ. ಈ ಮೂಲಕ ತಮ್ಮ ಬರಹಗಳಿಗೊಂದು ವೇದಿಕೆ ಸೃಷ್ಟಿಸಿದ್ದಾರೆ. ಹರಿಪ್ರಿಯಾ ಅವರಿಗೆ ತಾವು ಬರೆಯಬಲ್ಲೆ ಎಂಬುದು ಗೊತ್ತಿರಲಿಲ್ಲವಂತೆ. ಆದರೆ ಈಗ ಬರವಣಿಗೆ ಅವರ ಹೊಸ ಪ್ಯಾಶನ್ ಆಗಿದೆ.
ಅಷ್ಟಕ್ಕೂ ಹರಿಪ್ರಿಯಾ ಅವರು ಬರವಣಿಗೆ ಶುರು ಮಾಡಿದ್ದು ಯಾವಾಗ ಎಂದರೆ ಅದಕ್ಕೆ ಉತ್ತರ ಬೇಸರದಲ್ಲಿ. ಹರಿಪ್ರಿಯಾಗೆ ಸಾಕಷ್ಟು ವಿಷಯಗಳಲ್ಲಿ ಬೇಸರವಾಗುತ್ತಿತ್ತಂತೆ. ಆದರೆ ಆ ಬೇಸರವನ್ನು ಬೇರೆಯರಲ್ಲಿ ಹೇಳಿಕೊಂಡರೂ ಕಷ್ಟ. ಒಬ್ಬ ಸೆಲೆಬ್ರೆಟಿಯಾಗಿ ತಮ್ಮ ಬೇಸರವನ್ನು ಮತ್ತೂಬ್ಬರಲ್ಲಿ ಹೇಳಿಕೊಂಡರೆ ಜನ ಎಲ್ಲಿ ತನ್ನ ನೋವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೋ ಎಂಬ ಭಯವಿತ್ತಂತೆ. ಆ ಸಮಯದಲ್ಲಿ ಹರಿಪ್ರಿಯಾ ಸಹಾಯಕ್ಕೆ ಬಂದಿದ್ದು ಪೆನ್ನು, ಪೇಪರ್. ತಮ್ಮ ಬೇಸರವನ್ನೆಲ್ಲಾ ಬರವಣಿಗೆಯಾಗಿಸುತ್ತಾ ಹೋದರಂತೆ. ಕ್ರಮೇಣ ಅವರಿಗೆ ಪೆನ್ನು-ಪೇಪರ್‌ಗಳೇ ಬೆಸ್ಟ್ ಫ್ರೆಂಡ್ ಆದವಂತೆ. ಹರಿಪ್ರಿಯಾಗೆ ಅವರ ತಾಯಿಯ ನಂತರ ಬೆಸ್ಟ್ ಫ್ರೆಂಡ್ ಯಾರೆಂದರೆ ಅದು ಪೆನ್ನು-ಪೇಪರ್.
ಬರೆಯುತ್ತಾ ಹೋದಂತೆ ಹರಿಪ್ರಿಯಾ ಅವರಿಗೆ ಖುವಿಗಿ-ನೆಮ್ಮದಿ ಸಿಕ್ಕಿತಂತೆ. ಹಾಗಾಗಿ ಹರಿಪ್ರಿಯಾ ಬರವಣಿಗೆಯನ್ನು ಹೆಚ್ಚು ಇಷ್ಟಪಡುತ್ತಿದ್ದಾರಂತೆ. ಹರಿಪ್ರಿಯಾ ಅವರ ಬ್ಲಾಗ್ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿದೆ. ಮುಂದಿನ ದಿನಗಳಲ್ಲಿ ಈ ಬ್ಲಾಗ್ ಮೂಲಕ ತಮ್ಮ ಬರವಣಿಗೆಯನ್ನು ಮತ್ತಷ್ಟು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
2019ರಲ್ಲಿ ಹರಿಪ್ರಿಯಾ ನಟಿಸಿದ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವರ್ಷ ಕೂಡಾ ಹರಿಪ್ರಿಯಾ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಉಪೇಂದ್ರ ಅವರ ಹೊಸ ಸಿನಿಮಾದಲ್ಲೂ ಹರಿಪ್ರಿಯಾ ನಾಯಕಿಯಾಗಿದ್ದಾರೆ.