ಬೆಂಗಳೂರು : ನಗರದಲ್ಲಿ ಯುವತಿಯರ ಪ್ರಷ್ಠ ಭಾಗಕ್ಕೆ ಹೊಡೆದು ಪರಾರಿಯಾಗುವ ವಿಕೃತ ಚಟ ಹೊಂದಿದ್ದ ಟೆಕ್ಕಿಯೊಬ್ಬನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿನೀತ್ ಎಂಬಾತನಾಗಿದ್ದು ಶ್ರೀಗಂಧ ಕಾವಲ್ ನಿವಾಸಿ ಮತ್ತು ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಎಂದು ತಿಳಿದು ಬಂದಿದೆ.
ಕೆಲಸ ಮುಗಿದ ಬಳಿಕ ಬೈಕ್‌ನಲ್ಲಿ ವೇಗವಾಗಿ ಬಂದು ಯುವತಿಯರಿ ಹಿಂಭಾಗಕ್ಕೆ ಹೊಡೆದು ವಿಕೃತ ಆನಂದ ಪಡೆಯುತ್ತಿದ್ದ ಮಾತ್ರವಲ್ಲದೆ ಜನದಟ್ಟನೆಯಿಂದ ಕೂಡಿರುವ ಬಸ್‌ಗಳಲ್ಲಿ ಸಂಚರಿಸಿ ಯುವತಿಯ ಮೈಗೆ ಮೈ ತಾಗಿಸಿ ವಿಕೃತ ಆನಂದ ಪಡೆಯುತ್ತಿದ್ದ ಎಂದು ಹೇಳಲಾಗಿದೆ.
ಏಪ್ರಿಲ್ 10 ರಂದು ನಾಗರಭಾವಿ ಸರ್ಕಲ್ ಬಳಿ ಈತನಿಂದ ಕಿರುಕುಳಕ್ಕೊಳಗಾದ ಯುವತಿ ಪ್ರಾಂಶುಪಾಲರ ಜೊತೆ ಬಂದು ಮೇ 3ರಂದು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಐಪಿಸಿ ಸೆಕ್ಷನ್ 354 ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.