Advertisement
“ಇದು ಕ್ರಿಕೆಟಿನ ಒಂದು ಭಾಗ. ಐಸಿಸಿ ನಿಯಮಾವಳಿಗೆ ಬದ್ಧವಾಗಿದೆ. ಈ ಸಂದರ್ಭದಲ್ಲಿ ನಮ್ಮ ಆಟಗಾರ್ತಿಯರನ್ನು ಬೆಂಬಲಿಸುವುದು ನನ್ನ ಕರ್ತವ್ಯ. ದೀಪ್ತಿ ಶರ್ಮ ಅವರ ಈ ಕ್ರಮ ಸರಿಯಾಗಿಯೇ ಇದೆ. ನನಗೆ ಬಹಳ ಖುಷಿಯಾಗಿದೆ’ ಎಂದು ಕೌರ್ ಹೇಳಿದರು.
170 ರನ್ನುಗಳ ಸಣ್ಣ ಮೊತ್ತದ ಚೇಸಿಂಗ್ ವೇಳೆ ಇಂಗ್ಲೆಂಡ್ ತೀವ್ರ ಕುಸಿತ ಅನುಭವಿಸಿ ಸೋಲನ್ನು ಖಾತ್ರಿಗೊಳಿಸಿತ್ತು. ಆಗ ಅಂತಿಮ ವಿಕೆಟಿಗೆ ಜತೆಗೂಡಿದ ಚಾರ್ಲೋಟ್ ಡೀನ್ ಮತ್ತು ಫ್ರೆàಯಾ ಡೇವಿಸ್ ಹೋರಾಟ ಸಂಘಟಿಸಿ ಗೆಲುವಿನ ಸಾಧ್ಯತೆಯೊಂದನ್ನು ತೆರೆದಿರಿಸಿದರು. ಕೊನೆಯಲ್ಲಿ 44ನೇ ಓವರ್ ಎಸೆಯಲು ಬಂದ ದೀಪ್ತಿ ಶರ್ಮ, 3ನೇ ಎಸೆತದಲ್ಲಿ ಡೀನ್ ಅವರನ್ನು “ಮಂಕಡ್’ ಮಾದರಿಯಲ್ಲಿ ರನೌಟ್ ಮಾಡಿದರು. ದೀಪ್ತಿ ಚೆಂಡನ್ನೆಸೆಯುವ ಮೊದಲೇ ನಾನ್ ಸ್ಟ್ರೈಕಿಂಗ್ ತುದಿಯಲ್ಲಿದ್ದ ಡೀನ್ ಕ್ರೀಸ್ ಬಿಟ್ಟು ಅದೆಷ್ಟೋ ಮುಂದಿದ್ದರು.
Related Articles
Advertisement
ಈ ತೀರ್ಪಿಗೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಬೌಂಡರಿ ಲೆಕ್ಕಾಚಾರದಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ “ಅದು ನಿಯಮಾವಳಿಯಲ್ಲಿದೆ’ ಎಂದು ಸಮರ್ಥಿಸಿಕೊಂಡ ಇಂಗ್ಲೆಂಡಿಗರು, ಈ ನಿಯಮಬದ್ಧ ರನೌಟ್ ವಿಧಾನವನ್ನು ಒಪ್ಪಿಕೊಳ್ಳುವುದಿಲ್ಲವೇಕೆ ಎಂಬುದೇ ಇಲ್ಲಿನ ಪ್ರಶ್ನೆ!