ಅಡಿಲೇಡ್: ಭಾರತ ವನಿತಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಹಿಳಾ ಬಿಗ್ಬಾಶ್ ಲೀಗ್ನ “ಟೂರ್ನಿಯ ತಂಡ’ದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಋತುವಿನಲ್ಲಿ ಮೆಲ್ಬರ್ನ್ ರೆನೆಗೆಡ್ಸ್ ಪರ ತೋರಿದ ಆಲ್ರೌಂಡರ್ ಸಾಮರ್ಥ್ಯದಿಂದಾಗಿ ಅವರು ಸ್ಥಾನ ಗಳಿಸಿದ್ದಾರೆ.
ಕೌರ್ ರೆನೆಗೆಡ್ಸ್ ಪರ ಈ ಆವೃತ್ತಿಯಲ್ಲಿ 399 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕ ಸೇರಿದೆ. 135.25ರ ಸರಾಸರಿಯಲ್ಲಿ ಅವರು ಬ್ಯಾಟ್ ಬೀಸಿದ್ದಾರೆ.
ಕಳೆದ ವಾರ ಸಿಡ್ನಿ ಥಂಡರ್ಸ್ ವಿರುದ್ಧ ಅಜೇಯ 81 ರನ್ ಗಳಿಸಿದ್ದು ಕೌರ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಇದುವರೆಗೆ ಟೂರ್ನಿಯಲ್ಲಿ ಅತ್ಯಧಿಕ 18 ಸಿಕ್ಸರ್ಗಳನ್ನು ಅವರು ಸಿಡಿಸಿದ್ದಾರೆ. ಜತೆಗೆ ಬೌಲಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದು 15 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇದನ್ನೂ ಓದಿ:ಸಂದೇಶ್ ನಾಗರಾಜ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರಿಂದ ಹೀಗೆ ಆಗಿದೆ: ಸಾ.ರಾ. ಮಹೇಶ್