ಮುಂಬಯಿ: ಮಹಾನಗರದಲ್ಲಿ ಶತಮಾನದ ಹಿರಿಮೆಗೆ ಪಾತ್ರವಾಗಿರುವ, ಹೆಸರಾಂತ ಧಾರ್ಮಿಕ ಸಂಘಟನೆ ಶ್ರೀಮದ್ಭಾರತ ಮಂಡಳಿಯು ಕಳೆದ ಹಲವಾರು ವರ್ಷಗಳಿಂದ ಪ್ರತಿವರ್ಷವೂ ವರ್ಷದ ಅತ್ತುÂತ್ತಮ ಕಾರ್ಯಕರ್ತರಿಗಾಗಿ ನೀಡುವ ಫಲಕವು ಪ್ರಸ್ತುತ ವರ್ಷ ಸಂಸ್ಥೆಯ ಕ್ರಿಯಾಶೀಲ ಕಾರ್ಯಕರ್ತರಾದ ಹರೀಶ್ ಸಿ. ಕಾಂಚನ್‌ರವರಿಗೆ ಲಭಿಸಿದೆ.
ಇತ್ತೀಚೆಗೆ ಅಂಧೇರಿಯಲ್ಲಿ ಜರಗಿದ ಮದ್ಭಾರತ ಮಂಡಳಿಯ 141ನೇ ಮಂಗಳ್ಳೋತ್ಸವದ ಸಂದರ್ಭದಲ್ಲಿ ಅತಿಥಿಗಳಾದ ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಎ. ಕೋಟ್ಯಾನ್ ಸಮಾಜ ಸೇವಕ, ಉದ್ಯಮಿ ಸುರೇಶ್ ಕಾಂಚನ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಖ್ಯಾತ ಸಂಘಟಕರಾದ ಐಕಳ ಹರೀಶ್ ಶೆಟ್ಟಿಯವರು ಹರೀಶ್ ಸಿ. ಕಾಂಚನ್ ರವರಿಗೆ ಫಲಕವನ್ನು ಪ್ರದಾನಿಸಿ ಗೌರವಿಸಿದರು.
ಕಳೆದ ಏಳೆಂಟು ವರ್ಷಗಳಿಂದ ಮದ್ಭಾರತ ಮಂಡಳಿಯ ಎಲ್ಲ ಧಾರ್ಮಿಕ , ಸಾಮಾಜಿಕ ಕಾರ್ಯ ಕ್ರಮಗಳಲ್ಲಿ ಅತ್ಯಂತ ಶ್ರದ್ದೆಯಿಂದ ತೊಡಗಿಸಿಕೊಂಡು ಮುಂಚೂಣಿಯಲ್ಲಿ ನಿಂತು ಸೇವೆಗೈಯುತ್ತಾ ಬಂದಿರುವ ಹರೀಶ್ ಸಿ ಕಾಂಚನ್‌ರಿಗೆ ದೊರಕಿರುವ ಫಲಕವು ಕ್ಷೇತ್ರದ ಲಕ್ಷ್ಮೀನಾರಾಯಣ ದೇವರ ಅನುಗ್ರಹದ ಪ್ರಸಾದವಾಗಿದೆ ಎಂದು ನಂಬಿದ್ದೇನೆ. ಇದು ಯುವ ಕಾರ್ಯಕರ್ತರಲ್ಲಿ ಶಕ್ತಿ ಮತ್ತು ಸ್ಫೂರ್ತಿಯನ್ನು ತುಂಬುತ್ತದೆ ಎಂದು ನುಡಿದರು.
ವೃತ್ತಿಯಲ್ಲಿ ಮೊಗವೀರ ಬ್ಯಾಂಕಿನ ಮುಖ್ಯ ಪ್ರಬಂಧಕರಾಗಿ ನಿವೃತ್ತರಾಗಿರುವ ಹರೀಶ್ ಸಿ. ಕಾಂಚನ್‌ರವರು ಹಲವಾರು ದಶಕಗಳಿಂದಲೂ ಮುಂಬಯಿಯ ವಿವಿಧ ಸಂಘಟನೆಗಳಲ್ಲಿ ನಿರಂತರವಾಗಿ ಸಮಾಜ ಸೇವೆಗೈಯುತ್ತಾ ಬಂದಿದ್ದಾರೆ.
ಹಲವು ವರ್ಷಗಳ ಕಾಲ ಫಲಿಮಾರು ಮೊಗವೀರ ಸಭಾ ಮುಂಬಯಿ ಇದರ ಗೌರವ ಕಾರ್ಯದರ್ಶಿಯಾಗಿ, ಸೀತಾರಾವå ಭಜನ ಮಂಡಳಿ ಫಲಿಮಾರ್ ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಸುವರ್ಣ ಮೂಲಸ್ಥಾನ ಬಜೆ, ಮುಂಬಯಿ ಸಮಿತಿಯ ಜತೆ ಕಾರ್ಯದರ್ಶಿಯಾಗಿ ಸೇವೆಗೈಯುತ್ತಿದ್ದಾರೆ. ಮೊಗವೀರ ಬ್ಯಾಂಕಿನ ಕಾರ್ಮಿಕ ಸಂಘಟನೆ ಮತ್ತು ಪೂಜಾ ಸಮಿತಿಯ ಸ್ಥಾಪಕ ಸದಸ್ಯರಾಗಿಯೂ ಹಲವಾರು ವರ್ಷಗಳ ಕಾಲ ಅನುಪಮವಾದ ಸೇವೆಗೈದಿದ್ದಾರೆ. ಮಾನವೀಯ ಕಳಕಳಿ, ಸಾಮಾಜಿಕ ಚಿಂತನೆಯ ವ್ಯಕ್ತಿತ್ವವನ್ನು ಹೊಂದಿರುವ ಹರೀಶ್ ಸಿ. ಕಾಂಚನ್ ರವರಿಗೆ ಬಾಲ್ಯದ ದಿನದಿಂದಲೇ ತನ್ನೂರ ನೆಲದ ಸಮಾಜ ಸೇವೆಯ ನಂಟು ಇದ್ದು, ಅದು ಮುಂಬಯಿಯ ಸಂಕೀರ್ಣ ಬದುಕಲ್ಲೂ ಸಮಾಜಸೇವೆಗೈಯುವ ಧ್ಯೇಯವನ್ನು ಅವರೊಳಗೆ ಪಡಿಮೂಡಿಸಿದೆ.