Advertisement

ಫಸ್ಟ್ ಕಿಸ್ ಕಥೆ ಹೇಳಿದ ಹರಿಪ್ರಿಯಾ

02:50 PM Apr 11, 2023 | Team Udayavani |

“ನನ್ನ ಫ‌ಸ್ಟ್‌ ಕಿಸ್‌ ತುಂಬಾ ಕಂಫ‌ರ್ಟಬಲ್‌ ಇರಲಿಲ್ಲ…’ ನಟಿ ಹರಿಪ್ರಿಯಾ ಹೀಗೆ ಹೇಳಿರುವ ಕಟ್‌ ಮಾಡಲಾದ ಪ್ರೋಮೋ ವಿಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Advertisement

ಅಂದಹಾಗೆ, ಹರಿಪ್ರಿಯಾ ಇಂಥದ್ದೊಂದು ವಿಷಯದ ಬಗ್ಗೆ ಮಾತನಾಡುತ್ತಿರುವುದು ತಮ್ಮದೇ ಆದ ಯು-ಟ್ಯೂಬ್‌ ಚಾನೆಲ್‌ನಲ್ಲಿ. ಕೆಲ ದಿನಗಳ ಹಿಂದಷ್ಟೇ “ಹರಿಪ್ರಿಯಾ ಸಿಂಹ’ ಎಂಬ ಹೆಸರಿನಡಿಯಲ್ಲಿ ನಟಿ ಹರಿಪ್ರಿಯಾ ತಮ್ಮದೇ ಆದ ಹೊಸ ಯು-ಟ್ಯೂಬ್‌ ಚಾನೆಲ್‌ ಆರಂಭಿಸಿದ್ದರು. ಈ ಯು-ಟ್ಯೂಬ್‌ ಚಾನೆಲ್‌ ನಲ್ಲಿ ತಮ್ಮ ನಿಶ್ಚಿತಾರ್ಥದ ವಿಡಿಯೊಗಳನ್ನು ಹರಿಪ್ರಿಯಾ ಹಂಚಿಕೊಂಡಿದ್ದು, ಇದೀಗ ಮತ್ತೂಂದು ಹೊಸ ವಿಡಿಯೊವನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ:Karnataka poll; ಪುತ್ತೂರು ಅಭ್ಯರ್ಥಿಯಾಗಿ ಕೋಡಿಂಬಾಡಿ ಅಶೋಕ್ ಕುಮಾರ್ : ಘೋಷಣೆಯೊಂದೇ ಬಾಕಿ

ಈ ಬಾರಿ ತನ್ನ ಬಗ್ಗೆ ಯಾರಿಗೂ ತಿಳಿಯದ ಹತ್ತು ವಿಷಯಗಳ ಬಗ್ಗೆ ಹರಿಪ್ರಿಯಾ ಮಾತನಾಡಿದ್ದು, ಈ ವಿಡಿಯೋ ಆದಷ್ಟು ಬೇಗ ತಮ್ಮ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ನನ್ನ ಫ‌ಸ್ಟ್‌ ಕಿಸ್‌ ಬಗ್ಗೆ ಇಷ್ಟೊಂದು ಕುತೂಹಲನಾ? ನಾನು ತುಂಬಾ ಕಂಫ‌ರ್ಟಬಲ್‌ ಇರಲಿಲ್ಲ…’ ಎಂದು ಹೇಳಿರುವ ಕಟ್‌ ಮಾಡಲಾದ ಪ್ರೋಮೋವನ್ನು ಹಂಚಿಕೊಂಡಿರುವ ಹರಿಪ್ರಿಯಾ ಶೀಘ್ರ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next