Advertisement

ಹರಿಪ್ರಿಯಾ ಬಿಚ್ಚಿಟ್ಟ 3ಡಿ ಅನುಭವ

04:13 PM Sep 03, 2017 | Team Udayavani |

ನಟಿ ಹರಿಪ್ರಿಯಾ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಒಂದು ಹಾಡು ಮುಗಿಸಿಕೊಂಡು ಬಂದಿದ್ದಾರೆ. ಹರಿಪ್ರಿಯಾ ಹಾಗೂ ದರ್ಶನ್‌ ಅವರ ಹಾಡಿನೊಂದಿಗೆ “ಕುರುಕ್ಷೇತ್ರ’ ಚಿತ್ರೀಕರಣ ಆರಂಭವಾಗಿದೆ. ಹರಿಪ್ರಿಯಾ ಇಲ್ಲಿ ಮಾಯೆ ಎಂಬ ಪಾತ್ರ ಮಾಡಿದ್ದಾರೆ. ದುರ್ಯೋಧನನ್ನು ತನ್ನ ರೂಪ, ವೈಯ್ನಾರ, ನೃತ್ಯದ ಮೂಲಕ ಮರುಳು ಮಾಡುವ ಪಾತ್ರ. ಮೈಮೇಲೆ ಹತ್ತು ಕೆಜಿಗೂ ಅಧಿಕ ಆಭರಣಗಳೊಂದಿಗೆ ಡ್ಯಾನ್ಸ್‌ ಮಾಡಿದ ಖುಷಿ ಹರಿಪ್ರಿಯಾಗಿದೆ.

Advertisement

ಇದಕ್ಕಿಂತ ಹೆಚ್ಚಿನ ಖುಷಿ ಹಾಗೂ ಹೊಸ ಅನುಭವ ಹರಿಪ್ರಿಯಾಗೆ “ಕುರುಕ್ಷೇತ್ರ’ದಿಂದ ಸಿಕ್ಕಿದೆ. ಅದು ಥ್ರಿಡಿ. ಹೌದು, “ಕುರುಕ್ಷೇತ್ರ’ ಥ್ರಿಡಿಯಲ್ಲಿ ಮೂಡಿಬರುತ್ತಿರುವ ಸಿನಿಮಾ. ಇಂತಹ ಥ್ರಿಡಿ ಸಿನಿಮಾದಲ್ಲಿ ಭಾಗವಾಗಿರುವ ಹಾಗೂ ಹೊಸ ಅನುಭವ ಪಡೆದ ಖುಷಿಯನ್ನು ಹರಿಪ್ರಿಯಾ ಹಂಚಿಕೊಳ್ಳುತ್ತಾರೆ.

“ಕುರುಕ್ಷೇತ್ರ ನನ್ನ ಮೊದಲ ಥ್ರಿàಡಿ ಸಿನಿಮಾ. ನನಗೆ ಅದೊಂದು ಹೊಸ ಅನುಭವ. ಸಾಮಾನ್ಯವಾಗಿ ನಾವು ಥಿಯೇಟರ್‌ಗೆ ಹೋಗಿ ಥ್ರಿಡಿ ಕನ್ನಡಕ ಹಾಕಿಕೊಂಡು ಸಿನಿಮಾ ನೋಡ್ತೀವಿ. ಆದರೆ, “ಕುರುಕ್ಷೇತ್ರ’ ಚಿತ್ರದಲ್ಲಿ ಮೇಕಿಂಗ್‌ನಲ್ಲಿ ಶಾಟ್‌ ನೋಡುವಾಗಲೂ ಮಾನಿಟರ್‌ ಮುಂದೆ ಕುಳಿತು ಥ್ರಿàಡಿ ಕನ್ನಡಕ ಹಾಕಿಕೊಂಡೇ ನೋಡುತ್ತಿದ್ದೆವು. ಮೂರು ಕ್ಯಾಮರಾ ಇಟ್ಟು ಶೂಟ್‌ ಮಾಡಲಾಗಿದೆ. ನಾನಂತೂ ತುಂಬಾ ಎಕ್ಸೆ„ಟ್‌ ಆಗಿದ್ದೆ’ ಎಂದು ತಮ್ಮ ಮೊದಲ ಥ್ರಿಡಿ ಅನುಭವ
ಬಿಚ್ಚಿಡುತ್ತಾರೆ ಹರಿಪ್ರಿಯಾ.

ಸದ್ಯ ಹರಿಪ್ರಿಯಾ ಸಿಕ್ಕಾಪಟ್ಟೆ ಬಿಝಿ. ರಾತ್ರಿ-ಹಗಲು ಎನ್ನದೇ ಚಿತ್ರೀಕರಣದಲ್ಲಿ ಬಿಝಿಯಾಗುತ್ತಿದ್ದಾರೆ. ಅವರ ಕೈಯಲ್ಲಿ ಈಗ ಬರೋಬ್ಬರಿ ಏಳು ಸಿನಿಮಾಗಳಿವೆ. “ಭರ್ಜರಿ’, “ಕನಕ’, “ಸಂಹಾರ’, “ಕುರುಕ್ಷೇತ್ರ’, “ಅಂಜನಿಪುತ್ರ’, “ಸೂಜಿದಾರ’, “ಲೈಫ್ ಜೊತೆಗೆ ಒಂದು ಸೆಲ್ಫಿ’ ಸಿನಿಮಾಗಳಲ್ಲಿ ಹರಿಪ್ರಿಯಾ ಇದ್ದಾರೆ. ಇಷ್ಟೆಲ್ಲಾ ಸಿನಿಮಾಗಳಿಗೆ ಡೇಟ್ಸ್‌ ಹೇಗೆ ಹೊಂದಿಸುತ್ತೀರಿ ಎಂದರೆ, “ನನಗೆ ಮ್ಯಾನೇಜರ್‌ ಇಲ್ಲ ಅಲ್ವಾ, ಅದಕ್ಕೆ ಮ್ಯಾನೇಜ್‌ ಹಾಕ್ತಾ ಇದೆ’ ಎಂದೇಳಿ ನಗುತ್ತಾರೆ. ಹೌದು, ಹರಿಪ್ರಿಯಾ ಮ್ಯಾನೇಜರ್‌ ಇಟ್ಟುಕೊಂಡಿಲ್ಲ. ಆದರೂ ಯಾವುದೇ ಸಿನಿಮಾಗಳಿಗೂ ತೊಂದರೆಯಾಗದಂತೆ ಡೇಟ್ಸ್‌ ಹೊಂದಿಸುತ್ತಿರುವ ಖುಷಿ ಅವರಿಗಿದೆ.

ಹರಿಪ್ರಿಯಾ ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಹರಿಪ್ರಿಯಾ ಪ್ಲ್ರಾನ್‌ ಏನು ಎಂದರೆ ಬಿಜಿನೆಸ್‌ ಎನ್ನುತ್ತಾರೆ. ಹೌದು, ಚಿತ್ರರಂಗದಲ್ಲಿರುವ ಬಹುತೇಕ ಮಂದಿ ತಮ್ಮ ಭವಿಷ್ಯದ ದೃಷ್ಟಿಯಿಂದ ಯಾವುದಾದರೊಂದು ಬಿಜಿನೆಸ್‌ ಆರಂಭಿಸುತ್ತಾರೆ.

Advertisement

ಅಂತಹ ಯೋಚನೆ ಹರಿಪ್ರಿಯಾ ಅವರಿಗೂ ಇದೆ. “ಚಿತ್ರರಂಗ ಬಿಟ್ಟು ಹೋಗಲು ಸಾಧ್ಯವಿಲ್ಲ. ಆದರೆ, ಏನಾದರೂ ಬಿಜಿನೆಸ್‌ ಮಾಡಬೇಕೆಂಬ ಆಸೆ ಇದೆ. ಹಾಗಂತ ಚಿತ್ರರಂಗಕ್ಕೂ ಆ ಬಿಜಿನೆಸ್‌ಗೂ ಸಂಬಂಧ ಇರಬಾರದೆಂದುಕೊಂಡಿದ್ದೇನೆ. ಸದ್ಯಕ್ಕೆ ಬಿಜಿನೆಸ್‌ ಮಾಡೋ ಐಡಿಯಾ ಇದೆಯಷ್ಟೇ. ಹಾಗಂತ ಏನು ಎಂಬುದು ಗೊತ್ತಿಲ್ಲ. ನಾನು ಕಾಲೇಜಿನಲ್ಲಿದ್ದಾಗ ಬಿಜಿನೆಸ್‌ ಮಾಡ್ತೀನಿ ಅಥವಾ ಡಾಕ್ಟರ್‌ ಆಗ್ತಿàನಿ ಅಂದುಕೊಂಡಿದ್ದೆ. ಆದರೆ ನನಗೆ ಗೊತ್ತಿಲ್ಲದೇ ನಾನು ನಟಿಯಾದೆ.

ನನಗೆ ಜೀವನಪೂರ್ತಿ ಆ್ಯಕ್ಟೀವ್‌ ಆಗಿರಲು ಇಷ್ಟ. ಯಾರನ್ನೂ ಅವಲಂಭಿಸದೇ ಕೊನೆವರೆಗೂ ದುಡಿಯುತ್ತಿರಬೇಕೆಂಬ ಆಸೆ ಇದೆ. ಆ ನಿಟ್ಟಿನಲ್ಲಿ ಬಿಜಿನೆಸ್‌ ಬಗ್ಗೆ ಯೋಚಿಸಿದ್ದೇನೆ’ ಎಂದು ತಮ್ಮ ಭವಿಷ್ಯದ ಕನಸನ್ನು ಬಿಚ್ಚಿಡುತ್ತಾರೆ ಹರಿಪ್ರಿಯಾ. 
 

Advertisement

Udayavani is now on Telegram. Click here to join our channel and stay updated with the latest news.

Next