Advertisement

ಹರಿಪ್ರಿಯಾ ಕೈಯಲ್ಲಿ ಐದು ಸಿನಿಮಾ

01:11 PM Oct 19, 2020 | Suhan S |

ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದ ಹರಿಪ್ರಿಯಾ ಈಗ ಮತ್ತೆ ಸಿನಿಮಾ ಮೂಡ್‌ಗೆ ಬಂದಿದ್ದಾರೆ. ಮೊದಲ ಹಂತವಾಗಿ ಇತ್ತೀಚೆಗೆ ಕಿರುತೆರೆಯಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದ ಹರಿಪ್ರಿಯಾ, ಮುಂದಿನ ದಿನಗಳಲ್ಲಿ ಮತ್ತೆ ಬಿಝಿಯಾಗಲಿದ್ದಾರೆ.

Advertisement

ಸದ್ಯ ಹರಿಪ್ರಿಯಾ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಉಪೇಂದ್ರ ನಾಯಕರಾಗಿರುವ “ಲಗಾಮ್‌’, ದಿಗಂತ್‌ ನಟನೆಯ “ಎವರು’ ರೀಮೇಕ್‌ ಇದರ ಜೊತೆಗೆ ಇನ್ನೆರಡು ಹೊಸ ಸಿನಿಮಾಗಳನ್ನು ಹರಿಪ್ರಿಯಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಗಳು ಯಾವುದೆಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಹೇಳುತ್ತಾರೆ ಹರಿಪ್ರಿಯಾ. ಇದರ ಜೊತೆಗೆ ಗುರುನಂದನ್‌ ನಾಯಕರಾಗಿರುವ “ಹ್ಯಾಪಿ ಎಂಡಿಂಗ್‌’ ಚಿತ್ರದ ಬಹುತೇಕ ಚಿತ್ರೀರಣ ಮುಗಿದಿದೆ.

ಈ ನಡುವೆಯೇ ಯೋಗರಾಜ್‌ ಭಟ್‌, ಶಿವರಾಜ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲೂ ಹರಿಪ್ರಿಯಾ ನಟಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಚಿತ್ರವನ್ನೂ ಸೇರಿಸಿಕೊಂಡರೆ ಹೊಸದಾಗಿ ಐದು ಚಿತ್ರಗಳು ಹರಿಪ್ರಿಯಾ ಅಕೌಂಟ್‌ ಸೇರಿದಂತಾಗುತ್ತದೆ.

ಮತ್ತೆ ಚಿತ್ರೀಕರಣದತ್ತ ಮುಖ ಮಾಡಿರುವ ಹರಿಪ್ರಿಯಾ ಅವರಿಗೆ ಮೊದಲ ದಿನದ ಚಿತ್ರೀಕರಣ ಸ್ವಲ್ಪ ಸುಸ್ತು ಎನಿಸಿತಂತೆ. “ಶೂಟಿಂಗ್‌ ಮಾಡದೇ ಏಳೆಂಟು ತಿಂಗಳಾಗಿದ್ದಕಾರಣ ಮೊದಲ ದಿನ ಚಿತ್ರೀಕರಣ ತುಂಬಾ ಸುಸ್ತಾಗುತ್ತಿತ್ತು. ಈ ಹಿಂದೆ ದಿನಕ್ಕೆ ಎರಡೆರಡು ಚಿತ್ರಗಳ ಶೂಟಿಂಗ್‌ನಲ್ಲಿ ಭಾಗವಹಿಸಿದರೂ ಈ ಅನುಭವ ಆಗಿರಲಿಲ್ಲ. ಆದರೆ, ಈಗ ಶೂಟಿಂಗ್‌ ಟಚ್‌ ಬಿಟ್ಟು ಹೋಗಿ ಸ್ವಲ್ಪ ಸುಸ್ತಾದಂತಾಯಿತು. ಈಗಕೈ ತುಂಬಾ ಸಿನಿಮಾಗಳಿವೆ. ಪ್ರತಿ ಸಿನಿಮಾದಲ್ಲೂ ಪಾತ್ರಗಳು ಭಿನ್ನವಾಗಿವೆ’ ಎನ್ನುತ್ತಾರೆ ಹರಿಪ್ರಿಯಾ. ­

Advertisement

Udayavani is now on Telegram. Click here to join our channel and stay updated with the latest news.

Next