Advertisement
ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ನಿಮಿತ್ತ ನಗರದ ರಾಮಕೃಷ್ಣ ವಿವೇಕಾನಂದಾಶ್ರಮದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿ ಹಿಂದೂ ಧರ್ಮದ ಅನನ್ಯತೆ ಹಾಗೂ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ ಮೂಲಕ ವಿವೇಕಾನಂದರು ಭಾರತದ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದರು.
ಸಾಧಿ ಸಬಹುದು ಎಂಬ ಆತ್ಮಸ್ಥೈರ್ಯ ಮೂಡುತ್ತದೆ ಎಂದರು. ಕಬ್ಬಿಣ ತರಹ ಮಾಂಸ ಖಂಡ, ಉಕ್ಕಿನಂತಹ ನರಮಂಡಲ, ಮಿಂಚಿನ ಬುದ್ಧಿ ಶಕ್ತಿ ಹಾಗೂ ಅಪಾರ ಅತ್ಮಸ್ಥೈರ್ಯದಿಂದ ಕೂಡಿರುವಂತ ವ್ಯಕ್ತಿಯೇ ನಿಜವಾದ ಯುವ ಶಕ್ತಿ ಎನ್ನುತ್ತಿದ್ದ ವಿವೇಕಾನಂದರು, ಇಂತಹ 100 ಯುವಕರು ಇದ್ದರೆ ದೇಶದ ಚಿತ್ರಣವನ್ನು ಬದಲಿಸುವ ವಿಶ್ವಾಸ ಹೊಂದಿದ್ದರು. ಆದರೆ ದೇಶದ ಇಂದಿನ ಪೀಳಿಗೆ ಗಾಂಜಾ ಮತ್ತು ಅಫೀಮ್ ಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಮೊಬೈಲ್ ಬಳಕೆಯಿಂದ ತಮ್ಮ ಅಮೂಲ್ಯವಾದ ಚಿಂತನಾಶಕ್ತಿಯನ್ನು ಕಳೆದುಕೊಂಡು ಅವನತಿಯ ಹಾದಿಯತ್ತ ಸಾಗುತ್ತಿದೆ. ಆದ್ದರಿಂದ ಮಹಾ ಸಂತರ ಆದರ್ಶ ಮತ್ತು ಚಿಂತನೆಗಳನ್ನು ತಮ್ಮ ಜೀವನದಲ್ಲಿ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೊಳ್ಳಲು ವಿವೇಕಾನಂದರ ಪ್ರೇರಣೆಯೇ ಮೂಲ ಕಾರಣ ಎಂದ ಅವರು, ಸರ್ಕಾರವು ಮಹನೀಯರ ಜಯಂತಿಗಳಿಗೆ ರಜಾ ನೀಡದೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವುದು ಇಂದಿನ ಅವಶ್ಯಕತೆ ಎಂದು ಹೇಳಿದರು. ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ. ಜನರ ನಡುವೆ ಇದ್ದುಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೊಗಿಸುವುದು ಎಂದು ಸಾರಿದರು. ಜಗತ್ತಿಗೆ ಹಿಂದೂ ಧರ್ಮದ ಸಾರವನ್ನು ಸಾರಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
Related Articles
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಯುಕ್ತೆ ಎಸ್.ಲಕ್ಷ್ಮೀ, ಮಾಜಿ ಶಾಸಕ ಬಿ.ಪಿ.ಹರೀಶ್, ಸಿಪಿಐ ಶಿವಪ್ರಸಾದ್ ಎಂ, ಡಾ| ಶಾರಾದದೇವಿ, ಡಾ| ರಾಮಪ್ರಸಾದ, ತುಕಾಮಣಿ ಸಾ ಭೂತೆ, ಡಾ|ಖಮೀತ್ಕರ್ ಮತ್ತಿತರರಿದ್ದರು.
Advertisement