Advertisement

ಕುಷ್ಠರೋಗ ನಿವಾರಣೆಗೆ ಮೌಡ್ಯವೇ ಅಡ್ಡಿ

05:02 PM Feb 01, 2020 | Naveen |

ಹರಿಹರ: ಜನರಲ್ಲಿ ಮೌಡ್ಯತೆಯ ಮನೋಭಾವ ಇನ್ನೂ ದಟ್ಟವಾಗಿರುವುದರಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲಾಗುತ್ತಿಲ್ಲ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿ ಕಾರಿ ಡಾ| ಎ.ಮುರುಳಿಧರ ಹೇಳಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ನಗರದ ಟಿಎಚ್‌ಒ ಮುಂಭಾಗ ಆಯೋಜಿಸಿದ್ದ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಹುತೇಕರು ಕುಷ್ಠರೋಗ ನಿವಾರಣೆಗೆ ಮೂಢನಂಬಿಕೆಗಳ ಮೊರೆ ಹೋಗುತ್ತಿದ್ದು, ವೈಜ್ಞಾನಿಕ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ಇದರಿಂದ ರೋಗ ನಿವಾರಣೆ ಕಷ್ಟಸಾಧ್ಯವಾಗುತ್ತಿದೆ ಎಂದರು.

ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಕುಷ್ಠರೋಗದ ವಿರುದ್ಧ ಕೊನೆಯ ಯುದ್ಧ ಎಂಬ ಘೋಷ ವಾಕ್ಯದೊಂದಿಗೆ ಜ.30ರಿಂದ ಫೆ.13ರವರೆಗೆ ರೋಗ ಅರಿವು ಆಂದೋಲನ ಆಯೋಜಿಸಲಾಗಿದೆ ಎಂದರು. ಮಹತ್ಮಾ ಗಾಂ ಧೀಜಿ ದೇಶವನ್ನು ಕುಷ್ಠ ಮುಕ್ತವಾಗಿಸುವ ಕನಸು ಹೊಂದಿದ್ದರು. ತದನಂತರ 7-8 ದಶಕಗಳೇ ಕಳೆದರೂ ಗಾಂ ಧೀಜಿ ಕನಸನ್ನು ನನಸು ಮಾಡಲಾಗಿಲ್ಲ. ಕಾಯಿಲೆ ಪೀಡಿತರಲ್ಲಿರುವ ಮೌಡ್ಯ ಹೋಗಲಾಡಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕಿದೆ. ಆಂದೋಲನದಲ್ಲಿ ಇಲಾಖೆಯ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ಆಂದೋಲನ ಉದ್ಘಾಟಿಸಿದ ತಹಶೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಇತರೆ
ಕಾಯಿಲೆಗಳಂತೆಯೆ ಕುಷ್ಠರೋಗವೂ ವೈರಸ್‌ ಮೂಲಕ ಹರಡುವ ಒಂದು ಕಾಯಿಲೆಯಾಗಿದೆ. ಇದು ಸಂಪೂರ್ಣ ನಿವಾರಣೆ ಮಾಡಬಹುದಾಗಿದೆ. ಆದರೆ ರೋಗಿ ನಿಯಮಿತವಾಗಿ ಪೂರ್ಣ ಚಿಕಿತ್ಸೆ ಪಡೆಯಬೇಕು. ಈ ಕಾಯಿಲೆಗೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದರು.

ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಆರೋಗ್ಯ ಸಹಾಯಕ ಎಂ.ವಿ.ಹೊರಕೇರಿ ಮಾತನಾಡಿ, ಚರ್ಮದ ಮೇಲ್ಭಾಗದಲ್ಲಿ ಮಚ್ಛೆಗಳಿದ್ದರೆ, ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಹಲವಾರು ಮಚ್ಛೆಗಳಿದ್ದರೆ ಅದು ಕುಷ್ಠರೋಗದ ಆರಂಭಿಕ ಲಕ್ಷಣವೆಂದು ಪರಿಗಣಿಸಿ ಪರೀಕ್ಷಿಸಬೇಕೆಂದರು.

Advertisement

ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ ಮಾತನಾಡಿ, ದೇಹದ ಮೇಲಿನ ಮಚ್ಛೆಗಳನ್ನು ನಿರ್ಲಕ್ಷಿಸದೆ, ಗುಪ್ತವಾಗಿರಿಸದೆ ವೈದ್ಯರಲ್ಲಿ ಪರೀಕ್ಷಿಸಬೇಕು. ರೋಗದ ಆರಂಭಿಕ ಹಂತದಲ್ಲಿ ಬಹುವಿಧ ಔಷ  ಚಿಕಿತ್ಸೆ (ಎಂಡಿಟಿ)ಯಿಂದ ಗುಣಪಡಿಸಬಹುದು ಹಾಗೂ ದೇಹ ವಿಕಲತೆಯನ್ನು ತಡೆಗಟ್ಟಬಹುದು. ಇದಕ್ಕೆ 6ರಿಂದ 12 ತಿಂಗಳವರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಬಿಇಒ ಯು.ಬಸವರಾಜಪ್ಪ, ಟಿಎಚ್‌ಒ ಡಾ| ಚಂದ್ರಮೋಹನ್‌, ವೈದ್ಯಾಧಿ ಕಾರಿ ನಟರಾಜ, ಡಾ| ರೇಣುಕಾರಾಧ್ಯ, ಸಿಡಿಪಿಒ ಜಫ್ರುನ್ನಿಸಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿ ಕಾರಿ ಕಚೇರಿ ಸಿಬ್ಬಂದಿಗಳಾದ ರವಿಶಂಕರ, ಆಂಜನೇಯ, ಸಂದೀಪ್‌, ಡಾ| ಶಶಿಕಲಾ, ಡಾ| ಲಕ್ಷ್ಮೀ, ಡಾ| ಖಾದರ್‌, ಡಾ| ಪ್ರಶಾಂತ್‌, ಆರೋಗ್ಯ ಶಿಕ್ಷಣಾಧಿಕಾರಿ ಯಶೋದಮ್ಮ, ಹಿರಿಯ, ಕಿರಿಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next