ಮುಂಬಯಿ: ನಗರದ ಪ್ರಖ್ಯಾತ ಫ್ಯಾಶನ್ ಡಿಸೈನಿಂಗ್ ಮತ್ತು ಎವಿಯೇಶನ್ ಟೂರಿಸಂ ಸಂಸ್ಥೆಯಾದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಸಂಸ್ಥಾಪಕ ಎಸ್. ಕೆ. ಉರ್ವಾಳ್ ಮತ್ತು ಪ್ರಫುಲ್ಲಾ ಎಸ್. ಉರ್ವಾಳ್ ಹಾಗೂ ಬಿ. ಆರ್. ಹೊಟೇಲ್ ಸಮೂಹದ ಆಡಳಿತ ನಿರ್ದೇಶಕ ಬಿ. ಆರ್. ಶೆಟ್ಟಿ ಮತ್ತು ಚಂಚಲಾ ಆರ್. ಶೆಟ್ಟಿ ಪರಿವಾರದ ಪ್ರಾಯೋಜಕತ್ವ ಹಾಗೂ ಪೇಜಾವರ ಮಠದ ಮುಂಬಯಿ ಶಾಖೆ ಇದರ ಸಹಕಾರದೊಂದಿಗೆ ಮಾ. 23 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯ ಪೇಜಾವರ ಮಠದ ಸಭಾಗೃಹದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪುರಂದರದಾಸ ಪ್ರಸಿದ್ಧಿಯ ಸಂಗೀತಕಾರ ಪುತ್ತೂರು ನರಸಿಂಹ ನಾಯಕ್ ಬಳಗದ ಹರಿದಾಸ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಳ್ ಹಾಗೂ ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್. ಕಟೀಲು ಅವರು ಪುತ್ತೂರು ನರಸಿಂಹ ನಾಯಕ್ ಅವರಿಗೆ ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕಾರ್ಯಕ್ರಮದಲ್ಲಿ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ರೆಂಜಾಳ ರಾಮದಾಸ ಉಪಾಧ್ಯಾಯ, ಪುರೋಹಿತ ಅಶೋಕ್ ಭಟ್ ದಂಪತಿ, ಶ್ರೀಧರ ರಾವ್, ಮುರಳಿ ಭಟ್ ಡೊಂಬಿವಿಲಿ ಮೊದಲಾದವರು ಉಪಸ್ಥಿತರಿದ್ದರು.
ಪೇಜಾವರ ಮಠದ ಪ್ರಬಂಧಕ ಶ್ರೀಹರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಆಚಾರ್ಯ ರಾಮಕುಂಜ ವಂದಿಸಿದರು. ಸಂಗೀತಾಭಿಮಾನಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.
ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.