Advertisement

ಹರೇಕಳ: ಮತದಾನಕ್ಕೆ ಆಮಿಷ ಆರೋಪ, ಕಾಂಗ್ರೆಸ್- ಎಸ್ ಡಿಪಿಐ ಕಾರ್ಯಕರ್ತರ ಮಾತಿನ ಚಕಮಕಿ

05:06 PM Dec 22, 2020 | keerthan |

ಉಳ್ಳಾಲ: ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವ ಉಳ್ಳಾಲದ ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿಪಿಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

Advertisement

ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರೇಕಳ ರಾಮಕೃಷ್ಣ ಶಾಲೆ ಮತಗಟ್ಟೆತಯಲ್ಲಿ ಈ ಘಟನೆ ನಡೆದಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯು ಮತದಾನದ ಚಿಹ್ನೆಯನ್ನು ನಕಲು ಪ್ರತಿ ಮಾಡಿಸಿ ಮತಗಟ್ಟೆಗೆ ಹೋಗುವ ಜನರಿಗೆ ಹಂಚುತ್ತಿದ್ದಾರೆ ಎಂದು ಎಸ್ ಡಿಪಿಐ ಆರೋಪಿಸಿದೆ. ಚಿಹ್ನೆಯ ಚಿತ್ರವಿರುವ ಚೀಟಿಯನ್ನು ಯುವಕನೋರ್ವ ಮತಗಟ್ಟೆಯ ಬಳಿ ಕೊಂಡೊಯ್ದ ಮತದಾರರಿಗೆ ನೀಡುತ್ತಿದ್ದ ಎಂದು ಎಸ್ ಡಿಪಿಐ ಕಾರ್ಯಕರ್ತರ ಆರೋಪ.

ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಎಸ್ ಡಿಪಿಐ ಕಾರ್ಯಕರ್ಯತರ ನಡವೆ ಮಾತಿನ ಚಕಮಕಿ ನಡೆಯಿತು. ಇದರ ವಿಡಿಯೋ ರೆಕಾರ್ಡ್ ಮಾಡಲು ಹೋದ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೊಬೈಲ್ ನ್ನು ಎಸ್ ಡಿಪಿಐ ಕಾರ್ಯಕರ್ತರು ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

ಇದನ್ನೂ ಓದಿ:ಮತದಾರರ ಪಟ್ಟಿ ಅದಲು ಬದಲು: ದಾವಣಗೆರೆಯ ಎರಡು ವಾರ್ಡ್ ಗಳ ಮತದಾನ ಮುಂದೂಡಿಕೆ

ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮೂವರು ಎಸ್ ಡಿಪಿಐ ಕಾರ್ಯಕರ್ತರ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಿಗುವಿನ ವಾತಾವರಣ: ಹರೇಕಳ ರಾಮಕೃಷ್ಣ ಪ್ರೌಢಶಾಲೆ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಕಾರ್ಯಕರ್ತರ ದಟ್ಟಣೆ ಹೆಚ್ಚಾಗಿತ್ತು. ವಾಹನಗಳು ಸಾಲುಗಟ್ಟು ನಿಂತಿದ್ದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಆಗಾಗ ಲಾಠಿ ಬೀಸಬೇಕಾಗದ ಪರಿಸ್ಥಿತಿಯೂ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next