Advertisement

ಅಕ್ಷರಸಂತನ ಕನಸು ನನಸು: ಪಿಯು ಕಾಲೇಜು ಮಂಜೂರು 

12:31 AM Nov 04, 2022 | Team Udayavani |

ಮಂಗಳೂರು: ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ದಶಕದ ಕನಸಾಗಿದ್ದ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ಹರೇಕಳದ ನ್ಯೂಪಡ್ಪಿವಿಗೆ ಕಷ್ಟಪಟ್ಟು ಸರಕಾರಿ ಶಾಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅವರು ಬಳಿಕ ನಿರಂತರ ಪ್ರಯತ್ನದಿಂದ ಪ್ರೌಢಶಾಲೆ ವರೆಗೆ ಗಳಿಸಿದ್ದರು.

Advertisement

ಹಾಜಬ್ಬ ಅನಕ್ಷರಸ್ಥರಾಗಿದ್ದರೂ ತನ್ನೂರಿನ ಎಲ್ಲ ಮಕ್ಕಳೂ ಅಕ್ಷರಸ್ಥರಾಗಿರಬೇಕು ಎಂಬ ಕನಸು ಕಂಡವರು. ಮಂಗಳೂರಿನ ಹಂಪನಕಟ್ಟೆ ಬಳಿ ಬುಟ್ಟಿ ಯಲ್ಲಿ ಕಿತ್ತಳೆ ಹಣ್ಣುಗಳ ಮಾರಾಟ ಮಾಡುತ್ತಿದ್ದ ಹಾಜಬ್ಬ ನಿರಂತರವಾಗಿ ಶಾಸಕರು, ಸಚಿವರು, ಇಲಾಖೆ ಅಧಿಕಾರಿಗಳ ಬೆನ್ನುಬಿದ್ದ ಪರಿಣಾಮ 1999-2000ರ ಸಾಲಿಗೆ ನ್ಯೂಪಡು³ವಿಗೆ ಪ್ರಾಥಮಿಕ ಶಾಲೆ ಮಂಜೂರಾಗಿತ್ತು. ಅವರ ಈ ಅಪರೂಪದ ಯಶಸ್ಸಿನ ಹಾದಿ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಹಾಜಬ್ಬರಿಗೆ ವಿವಿಧ ಪ್ರಶಸ್ತಿಗಳು ಬಂದವು. ಅನಂತರ ಪ್ರೌಢ ಶಾಲೆ ಮಂಜೂರಾಯಿತು. ಒಂದು ಎಕರೆ 33 ಸೆಂಟ್ಸ್‌ನಲ್ಲಿ ಈಗಲೂ ಹಾಜಬ್ಬರ ಶಾಲೆ ನಡೆಯು ತ್ತಿದೆ. ಆದರೆ ಅವರ ಕನಸಿನ ಪಿಯು ಕಾಲೇಜು ಮಾತ್ರ ಇದುವರೆಗೆ ಕೈಗೂಡಿರಲಿಲ್ಲ. ಈಗ  ಅವರ ಪ್ರಯತ್ನದಿಂದ ಹಾಜಬ್ಬರ ಊರಿಗೆ ಪಿಯು ಕಾಲೇಜು ಮಂಜೂರಾಗಿದೆ.

ಸಂಸದರು, ಶಾಸಕರೆಲ್ಲರೂ ನೆರವಾಗಿದ್ದಾರೆ, ಕೆಲವು ಬಾರಿ ಬೆಂಗಳೂರಿಗೂ ತೆರಳಿದ್ದೇನೆ. ಪತ್ರಕರ್ತರೂ ಸಹಕಾರ ನೀಡಿದ್ದಾರೆ. ಅಂತೂ ನನ್ನೂರಿಗೆ ಪ.ಪೂ.ಕಾಲೇಜು ಮಂಜೂರಾಗಿದ್ದು, ತುಂಬಾ ಖುಷಿ ಯಾಗಿದೆ ಎಂದು ಹಾಜಬ್ಬ  ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next