ಅಹಮದಾಬಾದ್/ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಪಟೇಲ್ ಮೀಸಲು ಹೋರಾಟದ ನಾಯಕ ಹಾರ್ದಿಕ್ ಪಟೇಲ್ ನಡುವೆ ಮುನಿಸು ಕಾಣಿಸಿಕೊಂಡಿದೆ. ಮೀಸಲು ಹಂಚಿಕೆ ವಿವರ ಘೋಷಣೆ ಮಾಡಲು ರಾಜ್‌ಕೋಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ರ್ಯಾಲಿ ರದ್ದಾಗಿದೆ. ಹೋರಾಟ ಸಮಿತಿಯ ಕೇವಲ ಇಬ್ಬರು ಸದಸ್ಯರಿಗೆ ಮಾತ್ರ 78 ಮಂದಿಯ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದು ಉಭಯ ಪಕ್ಷಗಳ ನಡುವೆ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಹಾರ್ದಿಕ್ 30 ಸ್ಥಾನ ಗಳನ್ನು ಕೇಳಿದ್ದರು. ಪಟ್ಟಿ ಘೋಷಣೆ ಯಾಗು ತ್ತಿದ್ದಂ ತೆಯೇ ಸೂರತ್‌ನಲ್ಲಿ ಮೀಸಲು ಹೋರಾಟ ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಇದರಿಂದ ಕ್ರುದ್ಧಗೊಂಡ ಹಾರ್ದಿಕ್ ಇಬ್ಬರು ನಾಯಕರಿಗೆ ನಾಮಪತ್ರ ಸಲ್ಲಿಸದಂತೆ ಸೂಚಿಸಿದ್ದಾರೆ.
ಮೂರನೇ ಪಟ್ಟಿ: ಈ ಗೊಂದಲದ ನಡು ವೆಯೇ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕ ಟಿಸಿದೆ. ಅದರಲ್ಲಿ ಮೂವರು ಸಚಿವರು ಸೇರಿ 16 ಹಾಲಿ ಶಾಸಕರನ್ನು ಕೈಬಿಡಲಾಗಿದೆ.
ನಾಮಪತ್ರ ಸಲ್ಲಿಕೆ: ಹಾಲಿ ಸಿಎಂ ವಿಜಯ ರುಪಾಣಿ ರಾಜ್‌ಕೋಟ್ ಪಶ್ಚಿಮ ಕ್ಷೇತ್ರದಿಂದ ಮತ್ತೂಮ್ಮೆ ಆಯ್ಕೆ ಬಯಸಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಸಂದರ್ಭ ದಲ್ಲಿ 9.08 ಕೋಟಿ ರೂ. ಮೊತ್ತದ ಆಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಂದ್ರಾಣಿ ರಾಜ್ಯಗುರು 141.22 ಕೋಟಿ ರೂ.ಆಸ್ತಿ ಇದೆ ಎಂದು ಘೋಷಿಸಿ ಕೊಂಡಿದ್ದಾರೆ.