Advertisement

ಹಾರ್ದಿಕ್‌ ಪಾಂಡ್ಯ ಟೆಸ್ಟ್‌ ಪಾದಾರ್ಪಣೆ?

07:30 AM Jul 26, 2017 | Team Udayavani |

ಗಾಲೆ: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಲೆಯಲ್ಲಿ ಟೆಸ್ಟ್‌ ಪಾದಾರ್ಪಣೆ ಮಾಡಲಿದ್ದಾರೆಯೇ? ನಾಯಕ ವಿರಾಟ್‌ ಕೊಹ್ಲಿ ಇಂಥದೊಂದು ಸುಳಿವು ನೀಡಿದ್ದಾರೆ.

Advertisement

“ಕಳೆದ ಸಲ ಗಾಲೆಯಲ್ಲಿ ನಾವು ಒಬ್ಬ ಬ್ಯಾಟ್ಸ್‌ಮನ್‌ನ ಕೊರತೆ ಅನುಭವಿಸಿದೆವು. 5ನೇ ಸ್ಪೆಷಲಿಸ್ಟ್‌ ಬೌಲರ್‌ ಅಗತ್ಯವಿರಲಿಲ್ಲ. ಈ ಸಲವೂ ಇಂಥದೇ ಅವಕಾಶ ನಮ್ಮ ಮುಂದಿದೆ. ಆದರೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಂದಾಗಿ ತಂಡ ಹೆಚ್ಚಿನ ಸಮತೋಲನ ಸಾಧಿಸಿದೆ. ಅವರೋರ್ವ ವಿಕೆಟ್‌ ಉರುಳಿಸಬಲ್ಲ ಬೌಲರ್‌. ಯಾವುದೇ ಟ್ರ್ಯಾಕ್‌ನಲ್ಲೂ ವಿಕೆಟ್‌ ಕೀಳಬಲ್ಲೆನೆಂದು ಸಾಧಿಸಿ ತೋರಿಸಿದ್ದಾರೆ. ಬ್ಯಾಟಿಂಗ್‌ನತ್ತ ಬಂದಾಗ ಬಿಗ್‌ ಹಿಟ್ಟರ್‌ ಆಗಿ ಗೋಚರಿಸುತ್ತಾರೆ. ಅವರಿಲ್ಲಿ ಟೆಸ್ಟ್‌ ಆಡುವ ಉತ್ತಮ ಅವಕಾಶ ಹೊಂದಿದ್ದಾರೆ’ ಎಂದು ಕೊಹ್ಲಿ ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next