ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಸ್ಟಾನ್ಕೊವಿಕ್ ಅವರ ವಿವಾಹ ಮುರಿದು ಬಿದ್ದಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ರೆಡ್ಡಿಟ್ ಪೋಸ್ಟ್ ಇತ್ತೀಚೆಗೆ ಇಬ್ಬರ ಸಂಬಂಧದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದೆ. ರೆಡ್ಡಿಟ್ ಪೋಸ್ಟ್ ಪ್ರಕಾರ, ನತಾಶಾ ಇನ್ಸ್ಟಾಗ್ರಾಮ್ ನಲ್ಲಿ ಹಾರ್ದಿಕ್ ನೊಂದಿಗಿನ ತನ್ನ ಕೆಲವು ಹಳೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ ತನ್ನ ಯೂಸರ್ ನೇಮ್ ನಲ್ಲಿ ಕೂಡಾ ಹಾರ್ದಿಕ್ ಹೆಸರನ್ನು ತೆಗೆದುಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಅವರ ಸಂಬಂಧದ ಬಗ್ಗೆ ಮಾತನಾಡಿಲ್ಲ. ಆದರೆ ದಂಪತಿಗಳು ತಮ್ಮ ಮಗ ಅಗಸ್ತ್ಯ ಜೊತೆಗಿನ ಫೋಟೋಗಳು ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿದೆ.
ಮಾರ್ಚ್ 4 ರಂದು ನತಾಶಾ ಹುಟ್ಟುಹಬ್ಬವಿತ್ತು, ಆ ದಿನ ಹಾರ್ದಿಕ್ ಯಾವುದೇ ಪೋಸ್ಟ್ ಮಾಡಿಲ್ಲ, ಅವರು ಅಗಸ್ತ್ಯ ಜತೆಗಿರುವ ಪೋಸ್ಟ್ ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಅವರ ಎಲ್ಲಾ ಇತ್ತೀಚಿನ ಪೋಸ್ಟ್‌ಗಳನ್ನು ಸಹ ತೆಗೆದುಹಾಕಿದ್ದಾರೆ. ಈ ಐಪಿಎಲ್ ಸ್ಟ್ಯಾಂಡ್ ಗಳಲ್ಲಿ ಅಥವಾ ತಂಡಕ್ಕೆ ಸಂಬಂಧಿಸಿದ ಪೋಸ್ಟ್ ಸ್ಟೋರಿಗಳಲ್ಲಿ ಆಕೆ ಕಾಣಿಸಿಕೊಂಡಿಲ್ಲ ಎಂದು ರೆಡ್ಡಿಟ್ ಪೋಸ್ಟ್ ಹೇಳಿದೆ.
ಈಗ, ಇತ್ತೀಚಿನ ವದಂತಿಗಳ ಪ್ರಕಾರ ಪಾಂಡ್ಯ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶದ ಕಾರಣದಿಂದಾಗಿ 70% ಆಸ್ತಿಯನ್ನು ಕಳೆದುಕೊಳ್ಳಬಹುದು ಎನ್ನಲಾಗಿದೆ. ಆದರೆ ಇದುವರೆಗೆ ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಅವರಾಗಲಿ, ಅವರ ಕುಟುಂಬವಾಗಲಿ ಯಾವುದೇ ಮಾಹಿತಿ ನೀಡಿಲ್ಲ.