Advertisement

Mumbai Indians: ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಆಗಿಲ್ಲ…: ಆ್ಯಡಂ ಗಿಲ್ ಕ್ರಿಸ್ಟ್ ಟೀಕೆ

10:59 AM Apr 15, 2024 | Team Udayavani |

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲು ಕಂಡಿದೆ. ಮಾಜಿ ನಾಯಕ ರೋಹಿತ್ ಶರ್ಮಾ ಅವರ ಶತಕದ ಹೊರತಾಗಿಯೂ ಮುಂಬೈ ತಂಡವು 20 ರನ್ ಅಂತರದ ಸೋಲನುಭವಿಸಿದೆ.

Advertisement

ಆಸೀಸ್ ವಿಕೆಟ್ ಕೀಪಿಂಗ್ ದಿಗ್ಗಜ ಆ್ಯಡಂ ಗಿಲ್ ಕ್ರಿಸ್ಟ್ ಅವರು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ನ್ನು ಪ್ರಶ್ನಿಸಿದ್ದಾರೆ. ಚೆನ್ನೈ ಇನ್ನಿಂಗ್ಸ್ ನ ಕೊನೆಯ ಓವರ್ ಎಸೆದ ಹಾರ್ದಿಕ್ ಅವರು ಕೊನೆಯ ನಾಲ್ಕು ಎಸೆತಗಳಲ್ಲಿ 20 ರನ್ ಬಿಟ್ಟುಕೊಟ್ಟರು. ಮಹೇಂದ್ರ ಸಿಂಗ್ ಧೋನಿ ಅವರು ಹಾರ್ದಿಕ್ ಪಾಂಡ್ಯರ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ಇದು ಕೊನೆಯಲ್ಲಿ ಮುಂಬೈಗೆ ಮುಳುವಾಯಿತು.

ಆಸ್ಟ್ರೇಲಿಯಾದ ಕ್ರೀಡಾ ಪದಗಳನ್ನು ಬಳಸಿದ ಗಿಲ್‌ಕ್ರಿಸ್ಟ್, ಪಾಂಡ್ಯ ಅವರನ್ನು “ಪ್ರಾಪಿ” ಎಂದು ಕರೆದರು. ಅವರು ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ ಎಂದು ಸೂಚಿಸುತ್ತದೆ. ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಚದುರಿದಂತೆ ಕಂಡುಬಂದಿದ್ದು, ಈ ಮಟ್ಟದಲ್ಲಿ ನಿರೀಕ್ಷಿತ ತೀಕ್ಷ್ಣತೆ ಮತ್ತು ಸ್ಥಿರತೆಯ ಕೊರತೆಯಿದೆ ಎಂದು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ. ಅವರು ದೇಹ 100 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ, ಇದು ಅವರ ಒಟ್ಟಾರೆ ಸಿದ್ಧತೆಯ ಬಗ್ಗೆ ಅನುಮಾನಗಳನ್ನು ಉಂಟುಮಾಡುತ್ತದೆ ಎಂದರು.

ಹಾರ್ದಿಕ್ ಪಾಂಡ್ಯ ಅವರು ಮಾಜಿ ಭಾರತೀಯ ನಾಯಕ ಸುನಿಲ್ ಗವಾಸ್ಕರ್ ರಿಂದಲೂ ಟೀಕೆಗಳನ್ನು ಎದುರಿಸಿದರು. ಗವಾಸ್ಕರ್ ಅವರು ಬೌಲಿಂಗ್ ಮತ್ತು ನಾಯಕತ್ವವನ್ನು “ಸಾಮಾನ್ಯ” ಎಂದು ಕರೆದರು. ಅಲ್ಲದೆ ಹಾರ್ದಿಕ್ ಎಸೆತಗಳ ಗುಣಮಟ್ಟವನ್ನೂ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next