Advertisement

ಭಾರತ ಕಂಡ ಶ್ರೇಷ್ಠ ಮ್ಯಾಚ್ ವಿನ್ನರ್ ಇವರೇ ಎಂದ ಹರ್ಭಜನ್ ಸಿಂಗ್

04:15 PM Jun 21, 2020 | keerthan |

ಮುಂಬೈ: ಕ್ರಿಕೆಟ್ ಎಂದರೆ ಅದು ಪ್ರಮುಖವಾಗಿ ಬ್ಯಾಟ್ಸಮನ್ ಗಳ ಆಟ ಎಂದೇ ಜನಜನಿತವಾಗಿದೆ. ಟಿ20 ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚಿನ ಮಹತ್ವವೂ ಸಿಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲರ್ ಗಳು 20 ವಿಕೆಟ್ ಪಡೆಯದೇ ಜಯ ಗಳಿಸಲು ಅಸಾಧ್ಯ ಎಂಬ ಮಾತಿದೆ. ಇದಕ್ಕೆ ಆಧಾರವೆಂಬಂತೆ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾರತ ಕಂಡ ಶ್ರೇಷ್ಠ ಮ್ಯಾಚ್ ವಿನ್ನರ್ ರನ್ನು ಹೆಸರಿಸಿದ್ದಾರೆ. ಅದು ಸಚಿನ್ ತಂಡೂಲ್ಕರ್, ಸುನೀಲ್ ಗಾವಸ್ಕರ್, ಮಹೇಂದ್ರ ಸಿಂಗ್ ಧೋನಿ ಅಥವಾ ವಿರಾಟ್ ಕೊಹ್ಲಿ ಅಲ್ಲ. ಬಜ್ಜಿ ಪ್ರಕಾರ ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಅನಿಲ್ ಕುಂಬ್ಳೆ.

Advertisement

ಪಿಚ್ ಎಂತಹುದೇ ಇರಲಿ, ಸ್ಪಿನ್ ಆಗಲಿ ಅಥವಾ ಆಗದೇ ಇರಲಿ, ಬ್ಯಾಟ್ಸಮ್ ಗಳನ್ನು ಹೇಗೆ ಔಟ್ ಮಾಡಬೇಕು ಎಂದು ವಿಶ್ವಕ್ರಿಕೆಟ್ ಗೆ ತೋರಿಸಿಕೊಟ್ಟವರು ಅನಿಲ್ ಕುಂಬ್ಳೆ ಎಂದು ಹರ್ಭಜನ್ ಸಿಂಗ್ ಹೇಳಿದರು.

ಕುಂಬ್ಳೆ ಚೆಂಡನ್ನು ಸಂಪೂರ್ಣ ಸ್ಪಿನ್ ಮಾಡುವುದಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಹೇಗೆ ವಿಕೆಟ್ ತೆಗೆಯಬೇಕೆಂದು ಹೇಳಿಕೊಟ್ಟವರು ಅವರು. ಕುಂಬ್ಳೆಯ ಸ್ಪರ್ಧಾತ್ಮಕ ಮನೋಭಾವದ ಅರ್ಧದಷ್ಟು ಯಾರಲ್ಲಿ ಇದ್ದರೂ ಆತ ಚಾಂಪಿಯನ್ ಆಗಬಲ್ಲ ಎಂದು ಹರ್ಭಜನ್ ಹೇಳಿದ್ದಾರೆ.

ಕುಂಬ್ಳೆ 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ ಕಬಳಿಸಿದ್ದಾರೆ. ವಿಶ್ವಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆಗೆ ಮೂರನೇ ಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next