Advertisement

ಹರ್ಭಜನ್‌ ಮುಂದೆ ಉತ್ತರ ಸಿಗದ ಪ್ರಶ್ನೆಗಳು!

10:32 PM Jan 01, 2022 | Team Udayavani |

ಹೊಸದಿಲ್ಲಿ: ಇತ್ತಿಚೆಗಷ್ಟೇ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಟರ್ಬನೇಟರ್‌ ಖ್ಯಾತಿಯ ಹರ್ಭಜನ್‌ ಸಿಂಗ್‌ ಬಿಸಿಸಿಐ, ಧೋನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ ಭಜ್ಜಿ, “ಕಳೆದ 7-8 ವರ್ಷಗಳಿಂದ, ಅಂದರೆ 2011ರ ವಿಶ್ವಕಪ್‌ ಬಳಿಕ ಬಿಸಿಸಿಐ ನನಗೆ ಸರಿಯಾಗಿ ಅವಕಾಶವನ್ನೇ ನೀಡಲಿಲ್ಲ.

ಆ ಹೊತ್ತಿಗಾಗಲೇ ನಾನು ಟೆಸ್ಟ್‌ನಲ್ಲಿ 400 ವಿಕೆಟ್‌ ಉರುಳಿಸಿದ್ದೆ. ಸೂಕ್ತ ಅವಕಾಶ ನೀಡಿದ್ದರೆ 500 ವಿಕೆಟ್‌ ಗಡಿ ದಾಟುತ್ತಿದ್ದೆ. ತಂಡದಿಂದ ನನ್ನನ್ನು ಕೈ ಬಿಟ್ಟಿದ್ದಕ್ಕೆ ಬಿಸಿಸಿಐ, ನಾಯಕ ಧೋನಿ ಸೇರಿ ಯಾರೂ ಸೂಕ್ತ ವಿವರಣೆ ನೀಡಲೇ ಇಲ್ಲ. ಹಲವು ಬಾರಿ ಈ ಕುರಿತು ಕೇಳಿದರೂ ಇಂದಿಗೂ ಉತ್ತರ ಸಿಕ್ಕಿಲ್ಲ’ ಎಂದು ಹರ್ಭಜನ್‌ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್‌-ಟೈಟಾನ್ಸ್‌, ಮುಂಬಾ-ಯೋಧ ಟೈ ರೋಮಾಂಚನ

Advertisement

Udayavani is now on Telegram. Click here to join our channel and stay updated with the latest news.

Next