Advertisement

ಅಧಿಕಾರಿಗೆ ಕಿರುಕುಳ: ಕುಲಸಚಿವರಿಗೆ ದೂರು

10:46 AM Aug 19, 2017 | Team Udayavani |

ಕಲಬುರಗಿ: ಗುಲಬರ್ಗಾ ವಿಶ್ವ ವಿದ್ಯಾಲಯದ ಅಧಿಕಾರಿ ಒಬ್ಬರಿಗೆ ಸಿಂಡಿಕೇಟ್‌ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶೋಷಿತ ಜನಜಾಗೃತಿ ಸಮಿತಿ ವಿವಿ ಕುಲಸಚಿವ ಪ್ರೊ| ದಯಾನಂದ ಅಗಸರ್‌ ಅವರಿಗೆ ದೂರು ಸಲ್ಲಿಸಿತು. ಇಂಜಿನಿಯರ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯುತ್‌ ಸಹಾಯಕರ ಕಾರ್ಯನಿವಾರ್ಹಕ ಅಭಿಯಂತರ ಶಂಕರ ವೈದ್ಯ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಾಲ್ವರು ಸಿಂಡಿಕೇಟ್‌ ಸದಸ್ಯರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಅಧಿಕಾರಿ
ಖನ್ನತೆ ಒಳಗಾಗಿದ್ದಾರೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ. ಜಿಲ್ಲಾಧ್ಯಕ್ಷ ಲಕ್ಕಪ್ಪ ಜವಳಿ, ರಾಜು ಎಸ್‌. ಕಟ್ಟಿಮನಿ,ಮಂಜುನಾಥ ಜೆ ಲೇಂಗಟಿ, ರಾಹುಲ್‌ ಮೇತ್ರೆ. ಸೂರ್ಯಕಾಂತ ಕಾಂಬಳೆ, ನರಸಿಂಹ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next