ಬೆಂಗಳೂರು: ಸ್ಯಾಂಡಲ್‌ವುಡ್‌ನ ಮತ್ತೂಂದು ವಿವಾದದಲ್ಲಿ ರಂಗಿತರಂಗ ಖ್ಯಾತಿಯ ನಟಿ ಆವಂತಿಕಾ ಶೆಟ್ಟಿ ಅವರು ನಿರ್ಮಾಪಕ ಕೆ.ಎ.ಸುರೇಶ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆರೋಪ ಮಾಡಿದ್ದಾರೆ.
ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಸುರೇಶ್ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬರೆದುಕೊಂಡಿದ್ದು, ನಿರಂತರವಾಗಿ ಲೈಂಗಿಕ ಕ್ರಿಯೆಗಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಸುರೇಶ್ ನಿರ್ಮಾಣದ ರಾಜು ಕನ್ನಡ ಮಿಡೀಯಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ವೇಳೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಆವಂತಿಕಾ ಹೇಳಿಕೊಂಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಚಿತ್ರದಿಂದ ಆವಂತಿಕಾ ಅವರನ್ನು ಕೈಬಿಡಲಾಗಿದ್ದು ಇದೇ ಕಾರಣಕ್ಕೆ ನನ್ನ ಮೇಲೆ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.
ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಬರುತ್ತಿರದೇ ಇದ್ದ ಕಾರಣಕ್ಕೆ, ಸೆಟ್‌ನಲ್ಲಿ ಗಲಾಟೆ ಮಾಡಿಕೊಂಡ ಹಿನ್ನಲೆ ಮತ್ತು ಸರಿಯಾಗಿ ನಟನೆ ಮಾಡಿಕೊಂಡ ಹಿನ್ನಲೆಯಲ್ಲಿ ಮಾರ್ಚ್ ತಿಂಗಳಿನಲ್ಲೇ ಚಿತ್ರದಿಂದ ಆವಂತಿಕಾರನ್ನು ಕೈಬಿಡಲಾಗಿತ್ತು ಎಂದು ಸುರೇಶ್ ಹೇಳಿದ್ದಾರೆ.
ಸುರೇಶ್ ಶ್ರಾವಣಿ ಸುಬ್ರಹ್ಮಣ್ಯ,ಶಿವಲಿಂಗ,ಆರ್‌ಎಕ್ಸ್ ಸೂರಿ,ಶಿವಲಿಂಗ,ಗೋವಿಂದಾಯ ನಮಃ ದಂತಹ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.