Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲು ಆಗ್ರಹ

04:47 PM Jun 12, 2020 | Naveen |

ಹರಪನಹಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಆಮ್‌ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ಎ.ಟಿ. ದಾದಾ ಖಲಂದರ್‌ ಮಾತನಾಡಿ, ಮಕ್ಕಳಲ್ಲಿ ಮತ್ತು ವಯೋವೃದ್ಧರಲ್ಲಿ ಕೋವಿಡ್ ಸೋಂಕು ಬೇಗ ಹರಡುತ್ತದೆ ಎಂಬ ವೈಜ್ಞಾನಿಕ ನಿಲುವಿದೆ. ಇದರಿಂದಾಗಿ ಎಚ್ಚರಿಕೆ ಅನುಸರಿಸುವ ಅಗತ್ಯ ಇದೆ. ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳ ಆರೋಗ್ಯ ಬಹುಮುಖ್ಯ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಸುವುದರಿಂದ ಮಕ್ಕಳಲ್ಲಿ ಸೋಂಕು ಉಂಟಾಗುವ ಸಂಭವ ಹೆಚ್ಚಿರುತ್ತದೆ. ಪರೀಕ್ಷೆಗಿಂತ ಮಕ್ಕಳ ಜೀವ ಅಮೂಲ್ಯ. ಆದರೆ ಮಕ್ಕಳ ಜೀವಕ್ಕಿಂತ ಪರೀಕ್ಷೆ ಮುಖ್ಯ ಎಂಬಂತೆ ಸರ್ಕಾರ ವರ್ತಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ವೈರಸ್‌ ಭಯದಿಂದ ಮಕ್ಕಳು ಕಲಿತ ವಿಷಯ ಮರೆತು ಹೋಗಿದೆ. ಅಲ್ಲದೇ ಖನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ. ಸ್ಕ್ರೀನಿಂಗ್‌, ಸ್ಯಾನಿಟೈಸರ್‌, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪರೀಕ್ಷಾ ಪೂರಕ ಜಾಗರುಕತೆ ವಹಿಸುವುದಾಗಿ ಶಿಕ್ಷಣ ಸಚಿವರು ಹೇಳುತ್ತಾರೆ. ಆದರೆ ಮಕ್ಕಳು ಪರೀಕ್ಷಾ ಅವಧಿಯಲ್ಲಿ ಸತತ ಮೂರು ತಾಸು ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಿ ಉಸಿರಾಟ ನಡೆಸಿದರೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದರಿಂದ ಕೂಡಲೇ ಸರಕಾರ ಎಚ್ಚೆತ್ತು ಪರೀಕ್ಷೆ ಮುಂದೂಡಬೇಕೆಂದು ಒತ್ತಾಯಿಸಿದರು.  ಮುಖಂಡರಾದ ಕೆ.ಸೇತುರಾಮ್‌, ಜುಬೇರಾ, ಅಸ್ಲಾಂಭಾಷಾ, ಕೆ.ಪರುಶುರಾಮ, ಇರ್ಫಾನ್‌, ಸಲೀಂ, ಮಹ್ಮದ್‌, ಹ್ಯಾಸೀನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next