Advertisement

ದೇವದಾಸಿ ಕುಟುಂಬಕ್ಕೆ ಕಿಟ್‌ ವಿತರಣೆ

03:42 PM May 23, 2020 | Naveen |

ಹರಪನಹಳ್ಳಿ: ಕೋವಿಡ್‌-19 ಮಹಾಮಾರಿ ಲಾಕ್‌ಡೌನ್‌ ಹಿನ್ನಲೆಯಲ್ಲಿ ಸಮಾನ ಮನಸ್ಕರ ವೇದಿಕೆವತಿಯಿಂದ ತಾಲೂಕಿನ ಮೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೈದೂರು, ಬಳಿಗನೂರು, ಗೌರಿಪುರ, ಗಜಾಪುರ, ಕೆಸರಹಳ್ಳಿ ಗ್ರಾಮಗಳ ದೇವದಾಸಿ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಲಾಯಿತು.

Advertisement

ಕಿಟ್‌ ವಿತರಿಸಿದ ಮಾತನಾಡಿದ ನಂದಿಬೇವೂರು ತಾ.ಪಂ ಸದಸ್ಯ ಓ.ರಾಮಪ್ಪ ಅವರು, ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ವೈರಸ್‌ ತಡೆಗಟ್ಟುವ ಹಿನ್ನಲೆಯಿಂದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಹಾಗೂ ಸ್ಯಾನೀಟೈಸರ್‌ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೋವಿಡ್ ವೈರಸ್‌ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯರಾದ ಎಚ್‌.ದಿವಾಕರ್‌ ಮಾತನಾಡಿದರು. ತಾ.ಪಂ ಮಾಜಿ ಅಧ್ಯಕ್ಷ ಕೆ.ಕುಬೇರಪ್ಪ, ವಿ.ಎಸ್‌.ಎನ್‌ ನಿರ್ದೇಶಕ ಎಂ.ಡಿ.ನಿಂಗನಗೌಡ, ಶಿರಸಾಚಾರಿ, ಬಳಿಗನೂರು ಯೋಗೀಶಗೌಡ, ಪರಶುರಾಮ, ವಿಜಯಕುಮಾರ್‌, ಗೌರಿಪುರ ನಾರನಗೌಡ, ದುರುಗಪ್ಪ, ಕೆಸರಹಳ್ಳಿ ಬಿ.ನಾಗರಾಜ್‌, ಜಿ.ಪಿ.ಎಂ. ನಾಗರಾಜ್‌, ಕೆಂಚಪ್ಪ, ಗಜಾಪುರ ಅಂಜಿನಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next