Advertisement

ಬೆಳೆ ಹಾನಿ: ಜಂಟಿ ಸಮೀಕ್ಷೆಗೆ ಶಾಸಕರ ಸೂಚನೆ

06:27 PM Apr 25, 2020 | Naveen |

ಹರಪನಹಳ್ಳಿ: ಈಚೆಗೆ ಸುರಿದ ಅಕಾಲಿಕ ಮಳೆಯಿಂದ ನದಿಪಾತ್ರದ ಗ್ರಾಮಗಳಲ್ಲಿ ಹಾನಿಯಾಗಿರುವ ಬೆಳೆಗಳ ಕುರಿತು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಶಾಸಕ ಜಿ.ಕರುಣಾಕರರೆಡ್ಡಿ ಸೂಚಿಸಿದರು.

Advertisement

ತಾಲೂಕಿನ ಹಲುವಾಗಲು, ನಿಟ್ಟೂರು, ಕಡತಿ, ನಂದ್ಯಾಲ, ನಿಟ್ಟೂರು ಬಸಾಪುರ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾಗಿರುವ ಬೆಳೆಗಳನ್ನು ವೀಕ್ಷಿಸಿದ ಅವರು, ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಹಲುವಾಗಲು ಮತ್ತು ನಿಟ್ಟೂರು, ಬಸಾಪುರ ಗ್ರಾಮದಲ್ಲಿ ಬಾಳೆ ಮತ್ತು ಎಲೆ ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದ್ದು ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಕುಂಚೂರು ಗ್ರಾಮದಲ್ಲಿ ಗಾಳಿಗೆ ಮೇಲ್ಛಾವಣೆ ಹಾರಿದ ಮತ್ತು ಮನೆ ಬಿದ್ದ ಎರಡು ಫಲಾನುಭವಿಗಳಿಗೆ ಶಾಸಕರು ಪರಿಹಾರದ ಚೆಕ್‌ ವಿತರಿಸಿದರು. ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌, ಸಹಾಯಕ ಕೃಷಿ ನಿರ್ದೇಶಕ ಗೊಂದಿ ಮಂಜುನಾಥ, ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಆರ್‌. ಜಯಸಿಂಹ, ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನೆ, ಸಿಪಿಐ ಕೆ. ಕುಮಾರ್‌, ತಾಪಂ
ಉಪಾಧ್ಯಕ್ಷ ಎಲ್‌. ಮಂಜ್ಯಾನಾಯ್ಕ, ಸತ್ತೂರು ಹಾಲೇಶ್‌, ಎಂ.ಪಿ. ನಾಯ್ಕ, ಆರ್‌.ಲೋಕೇಶ್‌, ಸಣ್ಣಹಾಲಪ್ಪ, ಬಾಗಳಿ ಕೋಟ್ರಪ್ಪ, ಕರೇಗೌಡ, ಎಂ.ಮಲ್ಲೇಶ್‌, ಸಹಾಯಕ ಕೃಷಿ ಅಧಿಕಾರಿ ಸಾಲಿಯನ್‌, ಕೃಷಿ ಅಧಿಕಾರಿ ರಫೀ, ಕಂದಾಯ ನಿರೀಕ್ಷಕ ರಾಜಪ್ಪ, ಹಲುವಾಗಲು ಪಿಎಸ್‌ಐ ಕೃಷ್ಣಪ್ಪ, ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next