Advertisement
ಕೃಷಿಭಾಗ್ಯ ಯೋಜನೆಯಡಿ ತಾಲೂಕಿನಾದ್ಯಾಂತ 2014-15ರಿಂದ ಇಲ್ಲಿಯವರೆಗೆ ಒಟ್ಟು 3035 ಕೃಷಿ ಹೊಂಡ ನಿರ್ಮಾಣಗೊಂಡಿವೆ. ಪ್ರಸಕ್ತ ವರ್ಷ ಇನ್ನೂ ಕೆಲವು ಕಾಮಗಾರಿ ಹಂತದಲ್ಲಿಯೇ ಇವೆ. ಯೋಜನೆಯ ಆರಂಭದಲ್ಲಿ ನಿರಾಸಕ್ತಿ ತೋರಿದ ರೈತರು ನಂತರದ ದಿನಗಳಲ್ಲಿ ಸ್ವತಃ ತಾವೇ ಮುಂದೆ ಬಂದು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಅತೀ ಹೆಚ್ಚು ಚಿಗಟೇರಿ ಹೋಬಳಿಯಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಮೈದೂರು, ಚಿಗಟೇರಿ, ಹರಪನಹಳ್ಳಿ ಭಾಗದ ಸುಮಾರು 50ಕ್ಕೂ ಹೆಚ್ಚು ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿದೆ. ಬೆಳೆಗಳ ಸಂದಿಗ್ಧ ಹಂತಗಳಲ್ಲಿ ನೀರುಣಿಸಿ ಹೆಚ್ಚು ಇಳುವರಿ ಪಡೆಯಲು ಮತ್ತು ಅಂತರ್ಜಲ ವೃದ್ಧಿಗೂ ಹೊಂಡಗಳು ಸಹಕಾರಿಯಾಗಿವೆ.
Related Articles
ಬೆಳೆ ಪಡೆಯಲು ಸಹಕಾರಿ
ಕೃಷಿ ಹೊಂಡಗಳು ಮತ್ತು ಬದುಗಳ ಬಳಿ ಕಂದಕಗಳ ನಿರ್ಮಾಣ ರೈತರಿಗೆ ಸಾಕಷ್ಟು ಸಹಕಾರಿಯಾಗಿವೆ. ಮುಂಗಾರು ಆರಂಭದಲ್ಲಿ ಬಂದ ಮಳೆ ಮತ್ತೆ ಬಾರದ ಹಿನ್ನೆಲೆಯಲ್ಲಿ ಕೃಷಿ ಹೊಂಡದಲ್ಲಿರುವ ನೀರು ಹರಿಸುವ ಮೂಲಕ ಅಲ್ಪಾವಧಿಯ ಬೆಳೆ ಪಡೆಯಲು ಸಹಕಾರಿಯಾಗಿದೆ. ಕೃಷಿ ಹೊಂಡ ನಿರ್ಮಾಣದ ಬಳಿಕ ನಮ್ಮ ಬೆಳೆಗೆ ನೀರು ದೊರೆಯುವಂತಾಗಿದೆ. ಸರ್ಕಾರದ ಈ ಯೋಜನೆ ಉತ್ತಮವಾಗಿದೆ.
•ಎಚ್.ದೇವರಾಜ್,
ಮೈದೂರು ಗ್ರಾಮದ ರೈತ.

ತರಕಾರಿ, ಸೊಪ್ಪು ಬೆಳೆಯಬಹುದು
ರೈತರು ಹೊಂಡಕ್ಕೆ ನೀರು ಹರಿದು ಬರುವ ದಾರಿಯಲ್ಲಿರುವ ನಿರ್ಮಿಸಿರುವ ಹೂಳು ಬೋನುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸ, ಕಡ್ಡಿ ಇರದಂತೆ ನೋಡಿಕೊಂಡಲ್ಲಿ ನೀರು ಸರಗವಾಗಿ ಹರಿದು ಬರುತ್ತದೆ. ಹೊಂಡದಲ್ಲಿರುವ ಗಿಡ, ಗಂಟೆ ತೆಗೆದು ತಾಡುಪಾಲುಗಳನ್ನು ಅಳವಡಿಕೊಳ್ಳಬೇಕು. ಸದ್ಯ ಹೊಂಡದಲ್ಲಿ ಸಂಗ್ರಹವಾಗಿರುವ ನೀರಿನಿಂದ ಅಲ್ಪಾವಧಿಯ ತರಕಾರಿ, ಸೊಪ್ಪ್ಪು ಬೆಳೆಯಬಹುದು. ಹೊಂಡದಿಂದ ನೀರು ಎತ್ತಲು ಈಗಾಗಲೇ ರಿಯಾಯಿತಿ ದರದಲ್ಲಿ ನೀಡಿರುವ ಸಕರಣೆಗಳನ್ನು ರೈತರು ಬಳಕೆ ಮಾಡಿಕೊಳ್ಳಬೇಕು.
•ನಾಗರಾಜ್ ಸಕ್ಕರೆಗೌಡರ್,
ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ.

ಎಸ್.ಎನ್.ಕುಮಾರ್ ಪುಣಬಗಟ್ಟಿ
Advertisement