Advertisement

ಭಾರತೀಯ ಸಂಸ್ಕೃತಿಯಿಂದ ಪ್ರಪಂಚಕ್ಕೆ ಸಂತಸ

06:36 PM Mar 22, 2022 | Nagendra Trasi |

ಶಿವಮೊಗ್ಗ: ಪ್ರಪಂಚಕ್ಕೆ ಸಂತೋಷ ಕೊಡುವುದು ಭಾರತೀಯ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ಹೇಳಿದರು.

Advertisement

ನಗರದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ 40ನೇ ವಾರ್ಷಿಕೋತ್ಸವ, ರುದ್ರಪೂಜೆ, ಸತ್ಸಂಗ ಮತ್ತು ಜ್ಞಾನಕ್ಷೇತ್ರ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಆಶೀವರ್ಚನ ನೀಡಿದ ಅವರು,  ಎಲ್ಲರನ್ನು ಒಂದುಗೂಡಿಸುವ ಶಕ್ತಿ ಭಾರತಕ್ಕಿದೆ. ಹಾಗಾಗಿ, ನಾವೆಲ್ಲರೂ ಒಂದೇ ಎಂದು ಸೇವೆ ಮೈಗೂಡಿಸಿಕೊಳ್ಳಬೇಕು. ಮನಸ್ಸಿನಲ್ಲಿರುವ ಒತ್ತಡವನ್ನು ದೂರ ಮಾಡಬೇಕು. ಪ್ರೀತಿ, ವಿಶ್ವಾಸ, ನಮ್ಮ ಸ್ವಭಾವವಾಗಿದೆ. ಅದನ್ನು ಅಭಿವ್ಯಕ್ತಪಡಿಸಬೇಕಿದೆ. ಆಧ್ಯಾತ್ಮಿಕ ಉನ್ನತಿಯನ್ನು ಪಡೆದುಕೊಳ್ಳಬೇಕಿದೆ.

ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಉತ್ಸವ (ಸತ್ಸಂಗ) ನಡೆಯುತ್ತಿದ್ದು, ಜೀವನದಲ್ಲಿ ಅಧ್ಯಾತ್ಮವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು. ಪ್ರಜ್ಞೆ ಹೆಚ್ಚಿಸಿಕೊಳ್ಳಲು ಜ್ಞಾನ ಅವಶ್ಯಕ. ಒತ್ತಡ ಇದ್ದಾಗ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಸುಖ ಹಾಗೂ ಸಂತೋಷವಾಗಿರಲು ಶಾಂತಿ ಬೇಕು. ಶಾಂತವಾಗಿರಲು ಜ್ಞಾನ ಬೇಕು. ಜ್ಞಾನದ ಮೂಲಕ ಮನಸ್ಸಿನಲ್ಲಿರುವ ಒತ್ತಡವನ್ನು ದೂರ ಮಾಡಬಹುದಾಗಿದೆ ಎಂದರು.

ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, 176 ರಾಷ್ಟ್ರಗಳ ಕೋಟ್ಯಧೀಶರು ಮಾತ್ರವಲ್ಲದೇ ಎಲ್ಲ ವರ್ಗದವರು ಶ್ರೀ ರವಿಶಂಕರ್‌ ಗುರೂಜಿ ಅವರನ್ನು ಸ್ಮರಿಸಿಕೊಂಡು ವೈಯಕ್ತಿಕ ಜೀವನದಲ್ಲೂ ಸಂತೃಪ್ತಿ ಕಾಣುತ್ತಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮವಿಲ್ಲ. ಯಾವುದೇ ಊರು, ರಾಜ್ಯ, ದೇಶಕ್ಕೆ ಹೋದರೂ ನೆಮ್ಮದಿ ಸಿಗಲು ಸತ್ಸಂಗ ಕಾರಣವಾಗಿದೆ. ಗುರೂಜಿ ಅವರ ಜೀವನ ವ್ಯವಸ್ಥೆಯೇ ಆಯಸ್ಕಾಂತವಿದ್ದಂತೆ.ಶಿವಮೊಗ್ಗದಲ್ಲಿ ಜ್ಞಾನಕ್ಷೇತ್ರ ಉದ್ಘಾಟನೆಗೊಂಡಿದ್ದು, ಸಮಾಜ ಸೇವೆ ಮಾಡುವುದಕ್ಕೆ ನಮ್ಮೆಲ್ಲರಿಗೂ ಸ್ಫೂರ್ತಿ, ಪ್ರೇರಣೆ ಸಿಕ್ಕಿದೆ ಎಂದರು.

ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಮಾತನಾಡಿ, ರವಿಶಂಕರ್‌ ಗುರೂಜಿ ದೇಶಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಮಾರ್ಗದರ್ಶನ ಮುಂದೆಯೂ ಇಡೀ ನಾಡಿಗೆ ಬೇಕಿದೆ ಎಂದರು. ಎಂಎಲ್ಸಿ ಡಿ.ಎಸ್‌.ಅರುಣ್‌, ಮೇಯರ್‌ ಸುನೀತಾ ಅಣ್ಣಪ್ಪ ಮಾತನಾಡಿದರು. ಕುವೆಂಪು ವಿವಿ ಕುಲಪತಿ ಡಾ|ಬಿ.ಪಿ.ವೀರಭದ್ರಪ್ಪ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ|ಮಂಜುನಾಥ ನಾಯ್ಕ, ಪಾಲಿಕೆ ಸದಸ್ಯ ಧೀರರಾಜ್‌ ಹೊನ್ನವಿಲೆ, ಟಿ.ಎಂ.ಸೋಮಶೇಖರ್‌, ರಮೇಶ್‌ ಬಾಬು ಇತರರಿದ್ದರು.

Advertisement

ನಾಡು-ನುಡಿ-ಜಲ ಸಂರಕ್ಷಣೆ 
ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಅದೇ ರೀತಿ, ತುಂಗಾ ಸ್ನಾನದಿಂದಲೂ ಮನುಷ್ಯ ಜೀವನದಲ್ಲಿ ಪುಣ್ಯ ಸಿಗಲಿದೆ. ಗಂಗಾ-ಯಮುನಾ ಸಂಗಮದಂತೆ  ತುಂಗ-ಭದ್ರಾ ನದಿಗಳು ಸಂಗಮವಾಗಿವೆ ಎಂದ ಶ್ರೀ ರವಿಶಂಕರ್‌ ಗುರೂಜಿ, ನಾಡು-ನುಡಿ, ಜಲವನ್ನು ಸಂರಕ್ಷಿಸಲು ಹಲವಾರು ಯೋಜನೆ ಹಮ್ಮಿಕೊಂಡಿದ್ದು, ಅದನ್ನು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.

ರವಿಶಂಕರ್‌ ಗುರೂಜಿ ದೇಶದ ದೊಡ್ಡ ಸ್ವಾಭಿಮಾನ ಮತ್ತು ಗೌರವದ ಸಂಕೇತವಾಗಿದ್ದಾರೆ. ಅದರಲ್ಲೂ ಮಲೆನಾಡು ಭಾಗದಿಂದ ಸತ್ಸಂಗ ಶುರುವಾಗಿದೆ. ಈ ಮೂಲಕ ಶಿವಮೊಗ್ಗದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ಸಾರಬೇಕಿದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆ ಇಡೀ ದೇಶಕ್ಕೆ ಸಂಪತ್ತಾಗಬೇಕಿದೆ.
ಯು.ಟಿ.ಖಾದರ್‌, ಮಾಜಿ ಸಚಿವ

ಮನುಷ್ಯನಿಗೆ ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ. ನೆಮ್ಮದಿಯೊಂದೇ ಶಾಶ್ವತ. ಅದು ಸತ್ಸಂಗದಿಂದ ಸಿಗುತ್ತದೆ. ರವಿಶಂಕರ್‌ ಗುರೂಜಿ ನಡೆದಾಡುವ ದೇವರಾಗಿದ್ದಾರೆ. ಶಿಸ್ತು, ಸಮಯ ಪ್ರಜ್ಞೆಯೊಂದಿಗೆ ಜೀವನ ಶೈಲಿ ತೋರಿಸಿಕೊಟ್ಟಿದ್ದಾರೆ.
ಬಿ.ಕೆ.ಸಂಗಮೇಶ್ವರ್‌, ಭದ್ರಾವತಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next