ಇ ಕಾಮರ್ಸ್ ತಾಣಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್ ಡೀಲ್ ಹಾಗೂ ಪೇಟಿಎಂ ಮಾಲ್, ಇದುವರೆಗೂ ಸರ್ಕಾರದ ಆಣತಿಯಂತೆ ಅಗತ್ಯ ವಸ್ತುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದವು. ನಾನ್ ಎಸೆನ್ಶಿಯಲ್ ವಸ್ತುಗಳ ಮಾರಾಟದ ಮೇಲಿನ ನಿರ್ಬಂಧವನ್ನು, ಈಗ ತೆರವುಗೊಳಿಸಲಾಗಿದೆ. ಇ ಕಾಮರ್ಸ್ ಸಂಸ್ಥೆಗಳು ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಮಾತ್ರವೇ ನಾನ್ ಎಸೆನ್ಶಿಯಲ್ ವಸ್ತುಗಳ ಮಾರಾಟದಲ್ಲಿ ತೊಡಗಲಿವೆ. ರೆಡ್ ಝೋನಿನಲ್ಲಿ, ಎಂದಿನಂತೆ ಅಗತ್ಯ ವಸ್ತುಗಳನ್ನು ಮಾತ್ರವೇ ಡೆಲಿವರಿ ಮಾಡಲಿದೆ. ಆನ್ ಲೈನ್ ಖರೀದಿಗೆ ಅವಕಾಶ ನೀಡುವುದರಿಂದ, ಜನರು ಅಂಗಡಿ ಮಳಿಗೆಗಳಿಗೆ ತೆರಳುವುದು ಕಡಿಮೆಯಾಗುತ್ತದೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಲಿದೆ ಎನ್ನುವುದು, ಇ ಕಾಮರ್ಸ್ ಸಂಸ್ಥೆಗಳ ವಾದ. ಹೀಗಾಗಿ, ರೆಡ್ ಝೊನ್‌ಗಳಲ್ಲೂ ನಾನ್ ಎಸೆನ್ಶಿಯಲ್ ವಸ್ತುಗಳ ಖರೀದಿಗೆ ಅನುವು ಮಾಡಿಕೊಡಬೇಕೆಂದು ಸಂಸ್ಥೆಗಳು ಮನವಿ ಸಲ್ಲಿಸಿವೆ. ಅದಕ್ಕಾಗಿ, ಎಲ್ಲಾ ರೀತಿಯ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಅವು ತಯಾರಾಗಿವೆ. ಪರಿಸ್ಥಿತಿಗೆ ತಕ್ಕಂತೆ, ಯಾವುದೇ ಝೊàನ್ ಗಳ ಬಣ್ಣ ಬದಲಾಗಬಹುದು. ಕೋವಿಡ್ ರಿಸ್ಕ್ ಹೆಚ್ಚಾಗುತ್ತಿದೆ ಎಂದು ಕಂಡುಬಂದಲ್ಲಿ, ಝೊನ್‌ಗಳ ಹಣೆಪಟ್ಟಿ ಬದಲಾಗುವುದು. ಇ ಕಾಮರ್ಸ್ ಸಂಸ್ಥೆಗಳ ಕೆಲಸಗಾರರ ಸುರಕ್ಷತೆ, ಅವರ ಫೋನ್‌ಗಳಲ್ಲಿ ಆರೋಗ್ಯಸೇತು ಆ್ಯಪ್ ಅಳವಡಿಕೆ ಹಾಗೂ ಶುಚಿತ್ವ ಪಾಲನೆಗೆ ಸಂಸ್ಥೆಯ ಚೀಫ್ ಆಪರೇಟಿಂಗ್ ಆಫೀಸರ್ ಜವಾಬ್ದಾರಿ-ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಜೊತೆಗೆ, ಕ್ಯಾಶ್ ಆನ್ ಡೆಲಿವರಿಗೆ ಬದಲಾಗಿ ಆನ್‌ಲೈನ್ ಪೇಮೆಂಟ್ ಮತ್ತು ಕಾರ್ಡ್ ಪೇಮೆಂಟ್ ಅನ್ನು ಆಯ್ಕೆಯಾಗಿ ನೀಡಬೇಕೆಂಬ ಷರತ್ತನ್ನೂ ವಿಧಿಸಿದೆ.