Advertisement

ಸೋನಿಯಾ ಗಾಂಧಿ ನಿವೃತ್ತಿ? ಖರ್ಗೆಗೆ ಯುವ ತಲೆಮಾರನ್ನು ಮುನ್ನಡೆಸುವ ಹೊಣೆ

01:07 AM Feb 26, 2023 | Team Udayavani |

ನವರಾಯ್ಪುರ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ನಿಧನದ ಬಳಿಕ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದು ಪಕ್ಷವನ್ನು ಮುನ್ನಡೆಸುತ್ತಾ ಬಂದಿದ್ದ ಸೋನಿಯಾ ಗಾಂಧಿ ನಿವೃತ್ತಿ ಘೋಷಿಸಿದರೇ?

Advertisement

ಛತ್ತೀಸ್‌ಗಡದ ನವ ರಾಯ್ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಸ್ವತಃ ಸೋನಿಯಾ ಅವರೇ ಇಂಥದ್ದೊಂದು ಸುಳಿವು ನೀಡಿದ್ದಾರೆ. ಶನಿವಾರ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, “ಭಾರತ್‌ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್‌ ಕೂಡ ಮುಕ್ತಾಯವಾಗಬಹುದು’ ಎಂದು ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ, ಸೋನಿಯಾ ಹೇಳಿಕೆ ಪಕ್ಷದ ಅಧ್ಯಕ್ಷೆಯಾಗಿ ಅವರ ಅವಧಿ ಪೂರ್ಣಗೊಂಡಿದ್ದರ ಕುರಿತಾಗಿ ಹೊರತು ಅವರು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಅಲ್ಲದೆ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸಿದ ಸೋನಿಯಾ, “ಸುದೀರ್ಘ‌ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಯುವ ನಾಯಕರು ಮುಂದೆ ಬರಬೇಕು. ಅವರೇ ಯುವ ತಲೆಮಾರನ್ನು ಮುನ್ನಡೆಸಲಿದ್ದಾರೆ’ ಎಂದೂ ಸೋನಿಯಾ ಹೇಳಿದರು.

ನಿವೃತ್ತಿ ಸುಳಿವು ನೀಡಿªದರೂ ಸೋನಿಯಾ ಸಕ್ರಿಯ ರಾಜಕಾರಣದಿಂದಲೇ ನಿವೃತ್ತಿ ಪಡೆಯುತ್ತಿದ್ದಾರಾ, 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ, ಸ್ಪರ್ಧಿಸದಿದ್ದರೆ ರಾಯ್‌ಬರೇಲಿಯಲ್ಲಿ ಯಾರು ಕಣಕ್ಕಿಳಿಯುತ್ತಾರೆ ಮುಂತಾದ ಪ್ರಶ್ನೆಗಳೂ ಎದ್ದಿವೆ.

Advertisement

ಸಂತಸವೂ, ನಿರಾಸೆಯೂ
1998ರಲ್ಲಿ ಮೊದಲ ಬಾರಿಗೆ ಪಕ್ಷದ ಅಧ್ಯಕ್ಷೆಯಾಗುವಂಥ ಅಪೂರ್ವ ಗೌರವ ನನಗೆ ದಕ್ಕಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 25 ವರ್ಷಗಳ ಕಾಲ ನಮ್ಮ ಪಕ್ಷವು ದೊಡ್ಡ ಮಟ್ಟದ ಸಾಧನೆಯನ್ನೂ, ತೀವ್ರ ನಿರಾಸೆಯನ್ನೂ ಅನುಭವಿಸಿದೆ. ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರ ನೇತೃತ್ವದಲ್ಲಿ 2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ನಾವು ಸಾಧಿಸಿದ ಗೆಲುವು ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಆದರೆ ನಿರ್ಣಾಯಕ ಘಟ್ಟದಲ್ಲಿ ನಡೆದಿರುವ ಭಾರತ್‌ ಜೋಡೋ ಯಾತ್ರೆ ಯೊಂದಿಗೆ ನನ್ನ ಇನ್ನಿಂಗ್ಸ್‌ ಕೂಡ ಮುಕ್ತಾಯವಾಗುತ್ತಿದೆ ಎಂದು ಸೋನಿಯಾ ಹೇಳಿದ್ದಾರೆ.

ತಮ್ಮ ಭಾಷಣದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ರಾಹುಲ್‌ ಗಾಂಧಿಯನ್ನೂ ಸೋನಿಯಾ ಶ್ಲಾಘಿಸಿದರು. ಭಾರತೀಯರು ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಿದ್ದಾರೆ ಎಂಬುದು ಜೋಡೋ ಯಾತ್ರೆ ಯಿಂದ ಸಾಬೀತಾಗಿದೆ. ಜತೆಗೆ, ಕಾಂಗ್ರೆಸ್‌ ಸದಾ ಜನರೊಂದಿಗೆ ನಿಲ್ಲುತ್ತದೆ ಮತ್ತು ಜನರಿಗಾಗಿ ಹೋರಾಡಲು ಸಿದ್ಧ ವಾಗಿದೆ ಎಂಬುದನ್ನೂ ತೋರಿಸಿದೆ. ಯಾತ್ರೆಯ ಯಶಸ್ಸಿಗೆ ಶ್ರಮಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ಸೋನಿಯಾ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಅವರು, ಬಿಜೆಪಿಯು ದ್ವೇಷದ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಮಹಿಳೆ ಯರು, ದಲಿತರು, ಅಲ್ಪಸಂಖ್ಯಾಕರು ಮತ್ತು ಬುಡಕಟ್ಟು ಜನಾಂಗದ ಮೇಲೆ ದಾಳಿ ಮಾಡುತ್ತಿದೆ ಎಂದೂ ಆರೋಪಿಸಿದರು. “ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ನೋಡಿ ನಿಮಗೇನನಿಸಿತು’ ಎಂಬ ಸುದ್ದಿಗಾರರ ಪ್ರಶ್ನೆಗೆ ಮುಗುಳ್ನಕ್ಕು ಪ್ರತಿಕ್ರಿಯಿಸಿದ ಸೋನಿಯಾ, “ನಾನು ದೀರ್ಘ‌ಕಾಲದಿಂದ ಇದಕ್ಕಾಗಿ ಕಾಯುತ್ತಿದ್ದೆ’ ಎಂದರು.

ಎದ್ದು ನಿಂತು ಚಪ್ಪಾಳೆ
2004ರಲ್ಲಿ ಪ್ರಧಾನಿ ಹುದ್ದೆಯನ್ನು ನಯವಾಗಿ ತಿರಸ್ಕರಿಸಿದ್ದು ಸಹಿತ 20 ವರ್ಷಗಳ ಕಾಲ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರ ಪಯಣ ಕುರಿತು ಪುಟ್ಟದಾದ, ಭಾವ ನಾತ್ಮಕ ಸಾಕ್ಷ éಚಿತ್ರ ವೊಂದನ್ನು ಅಧಿ ವೇಶನ ದಲ್ಲಿ ಪ್ರದರ್ಶಿಸ ಲಾಯಿತು. ಪ್ರದರ್ಶನ ಮುಗಿದು ಸೋನಿಯಾ ಗಾಂಧಿ ಭಾಷಣಕ್ಕೆ ಅಣಿ ಯಾಗು  ತ್ತಿದ್ದಂತೆ, ಅಲ್ಲಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.

ಮುಂದೇನು?
ಕಾಂಗ್ರೆಸ್‌ ನೇತೃತ್ವದ ಯುಪಿಎಗೆ ಈಗಲೂ ಸೋನಿಯಾ ಅಧ್ಯಕ್ಷರಾಗಿ ದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಮುಂದೆ ಸಾಗುವಂಥ ಹೊಣೆ ಈಗಲೂ ಸೋನಿಯಾ ಮೇಲಿದೆ. ಎಐಸಿಸಿ ಮಾಜಿ ಅಧ್ಯಕ್ಷರಿಗೆ ಸಿಡಬ್ಲ್ಯೂಸಿಯಲ್ಲಿ ಖಾಯಂ ಸದಸ್ಯತ್ವ ನೀಡಿ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಕಾರಣ ಪಕ್ಷದ ಮೇಲಿನ ಸೋನಿಯಾ ಗಾಂಧಿ ಹಿಡಿತ ಮುಂದುವರಿಯಲಿದೆ.

ಮೈತ್ರಿಗೆ ಸಿದ್ಧ :
ಖರ್ಗೆ ಘೋಷಣೆ
2024ರ ಲೋಕಸಭಾ ಚುನಾವಣೆಯಲ್ಲಿ “ಜನ ವಿರೋಧಿ’ ಬಿಜೆಪಿ ಸರಕಾರವನ್ನು ಕಿತ್ತೂಗೆ ಯಲು ಸಮಾನಮನಸ್ಕ ಪಕ್ಷ ಗಳೊಂದಿಗೆ ಕೈಜೋಡಿಸಲು ಸಿದ್ಧ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ. ಈ ಮೂಲಕ ಮುಂಬರುವ ಸಾರ್ವತ್ರಿಕ ಚುನಾ ವಣೆಯಲ್ಲಿ ಬಿಜೆಪಿ ವಿರುದ್ಧ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಸೃಷ್ಟಿಸುವ ಸುಳಿವು ನೀಡಿದ್ದಾರೆ. ಜತೆಗೆ, ದಿಲ್ಲಿಯಲ್ಲಿ ಕುಳಿ ತಿರು ವವರದ್ದು ಬಡವರ ವಿರೋಧಿ ಡಿಎನ್‌ಎ. ಅವರು ದೇಶದ ಪ್ರಜಾಸತ್ತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿ ಸಿದ ಖರ್ಗೆ, ಅಧಿಕಾರ ದಲ್ಲಿರು ವವರು ಜನಸಾಮಾನ್ಯರ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂಥ ಪ್ರಯತ್ನಗಳ ವಿರುದ್ಧ ಜನಾಂದೋಲನ ನಡೆಯಬೇಕು ಎಂದು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next