Advertisement

ಆದಷ್ಟು ಬೇಗ ನೇಣು ಶಿಕ್ಷೆ ಜಾರಿಯಾಗಲಿ: ನಿರ್ಭಯಾ ತಾಯಿ ಆಗ್ರಹ

04:23 PM Jul 09, 2018 | Team Udayavani |

ಹೊಸದಿಲ್ಲಿ : ‘ನಿರ್ಭಯಾ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವವರನ್ನು ಆದಷ್ಟು ಬೇಗನೆ ನೇಣಿಗೆ ಏರಿಸಬೇಕು ಮತ್ತು ಆ ಮೂಲಕ ನಿರ್ಭಯಾಳಂತಹ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯು ನೆರವಾಗಬೇಕು’ ಎಂದು ನಿರ್ಭಯಾಳ ತಾಯಿ ಆಶಾ ದೇವಿ ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. 

Advertisement

“ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ; ನಿರ್ಭಯಾ ಗ್ಯಾಂಗ್‌ ಪ್ರಕರಣದಲ್ಲಿ ನ್ಯಾಯ ವಿಳಂಬಿತವಾಗುತ್ತಿದೆ. ಇದು ಸಮಾಜದಲ್ಲಿನ  ನಮ್ಮ ಹೆಣ್ಣು ಮಕ್ಕಳನ್ನು ಬಾಧಿಸುತ್ತದೆ. ಆದುದರಿಂದ ನನ್ನ ಕಳಕಳಿಯ ವಿನಂತಿ ಏನೆಂದರೆ ನ್ಯಾಯಾಂಗ ತನ್ನ ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು; ನಿರ್ಭಯಾ ಗ್ಯಾಂಗ್‌ ರೇಪ್‌ ಅಪರಾಧಿಗಳನ್ನು ಆದಷ್ಟು ಬೇಗನೆ ನೇಣಿಗೇರಿಸಬೇಕು’ ಎಂದು ಆಶಾದೇವಿ ಒತ್ತಾಯಿಸಿದರು. 

‘ಸುಪ್ರೀಂ ಕೋರ್ಟಿನ ಇಂದಿನ ತೀರ್ಪಿನಿಂದ ನ್ಯಾಯಾಂಗದಲ್ಲಿನ ನಮ್ಮ ವಿಶ್ವಾಸವನ್ನು ಇನ್ನಷ್ಟು ಭದ್ರಗೊಳಿಸಿದೆ. ನಿರ್ಭಯಾ ಗ್ಯಾಂಗ್‌ ರೇಪ್‌ ಅಪರಾಧಿಗಳು ಅಪ್ತಾಪ್ತ ವಯಸ್ಕರಲ್ಲ. ಇಂತಹ ಹೀನ ಮತ್ತು ಅಮಾನುಷ ಅಪರಾಧವನ್ನು ಅವರು ಎಸಗಿರುವುದು ದುರದೃಷ್ಟಕರ. ನಿರ್ಭಯಾ ಅಪರಾಧಿಗಳಿಗೆ ಆದಷ್ಟು ಬೇಗನೆ ನೇಣು ಶಿಕ್ಷೆ ಜಾರಿಗುವ ಮೂಲಕ ನಮಗೆ ನ್ಯಾಯ ಸಿಗುವುದೆಂಬ ವಿಶ್ವಾಸ ಇದೆ’ ಎಂದು ಆಶಾದೇವಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next