Advertisement

Happy Birthday Virat: ವಿರಾಟ್ ಹೆಸರಿನಲ್ಲಿರುವ ಕೆಲವು ಅಪರೂಪದ ದಾಖಲೆಗಳು ಇಲ್ಲಿದೆ

09:40 AM Nov 05, 2023 | Team Udayavani |

ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ ನ ಮಹತ್ವದ ಪಂದ್ಯದಲ್ಲಿಂದು ಟೀಂ ಇಂಡಿಯಾವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಸತತ ಏಳು ಪಂದ್ಯಗಳನ್ನು ಗೆದ್ದ ಭಾರತ ಇಂದಿನ ಪಂದ್ಯವನ್ನೂ ಅಜೇಯವಾಗಿ ಉಳಿಯುವ ಇರಾದೆಯಲ್ಲಿದೆ. ಮತ್ತೊಂದು ವಿಶೇಷ ಇಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಹುಟ್ಟಿದ ದಿನ. ತನ್ನ ಬರ್ತ್ ಡೇಯನ್ನು ಶತಕದ ಮೂಲಕ ಆಚರಿಸಬೇಕು ಎನ್ನುವುದು ವಿರಾಟ್ ಅಭಿಮಾನಿಗಳ ಆಶಯ.

Advertisement

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಕೆಲವು ದಾಖಲೆಗಳು ಮತ್ತು ಅಪರೂಪದ ಸಂಗತಿಗಳು ಇಲ್ಲಿದೆ.

ಚೇಸ್ ಮಾಸ್ಟರ್ ಎಂದೇ ಹೆಸರು ಪಡೆದಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಚೇಸಿಂಗ್ ವೇಳೆ 66.41 ಸರಾಸರಿ ಹೊಂದಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್ ನಲ್ಲಿ 48 ಶತಕ ಸಿಡಿಸಿ ಅತೀ ಹೆಚ್ಚು ಶತಕ ಹೊಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಎರಡು ದೇಶಗಳ ವಿರುದ್ಧದ ತಲಾ ಸತತ ಮೂರು ಶತಕ ಸಿಡಿಸಿದ ಏಕೈಕ ಬ್ಯಾಟರ್ ವಿರಾಟ್. ಅವರು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸತತ ಮೂರು ಪಂದ್ಯಗಳಲ್ಲಿ ಶತಕ ಹೊಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕನಾಗಿ ಕಡಿಮೆ ಇನ್ನಿಂಗ್ಸ್ ನಲ್ಲಿ 4000 ರನ್ ಪೇರಿಸಿದ ದಾಖಲೆ ಹೊಂದಿದ್ದಾರೆ. ವಿರಾಟ್ 65 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ರಿಯಾನ್ ಲಾರಾ ಅವರು ಈ ಹಿಂದೆ 71 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ ದಾಖಲೆ ಹೊಂದಿದ್ದರು.

Advertisement

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಹೆಸರಲ್ಲಿದೆ. (4008 ರನ್) ಅಲ್ಲದೆ ಅತೀ ಹೆಚ್ಚು ಅರ್ಧಶತಕ ಹೊಡೆದ ದಾಖಲೆಯು ವಿರಾಟ್ ಅವರದ್ದಾಗಿದೆ (38).

ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಒಂದೇ ದೇಶದ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ಸಾಧನೆ ವಿರಾಟ್ ಮಾಡಿದ್ದಾರೆ. ಅವರು ಶ್ರೀಲಂಕಾ ವಿರುದ್ಧ 10 ಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿ ಆರು ದ್ವಿಶತಕ ಗಳಿಸಿದ್ದಾರೆ. ಈ ಹಿಂದೆ ಬ್ರಿಯಾನ್ ಲಾರಾ ಐದು ದ್ವಿಶತಕಗಳನ್ನು ಟೆಸ್ಟ್ ನಾಯಕನಾಗಿ ಗಳಿಸಿದ್ದರು.

2012ರಲ್ಲಿ ವಿಶ್ವದಲ್ಲಿ ಅತ್ಯಂತ ಸುಂದರವಾಗಿ ಡ್ರೆಸ್ ಮಾಡುವ ಪುರುಷರ ಟಾಪ್ 10ರ ಪಟ್ಟಿಯಲ್ಲಿ ವಿರಾಟ್ ಸ್ಥಾನ ಪಡೆದಿದ್ದರು. ಹೆಸರಾಂತ ಜಿಕ್ಯೂ ಮ್ಯಾಗಜೀನ್ ಪ್ರಕಟಿಸಿದ ಪಟ್ಟಿಯಲ್ಲಿ ಕೊಹ್ಲಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್‌ ಗಾಗಿ ಮೂರನೇ ಸ್ಥಾನ ಪಡೆದಿದ್ದರು. ಈ ಪಟ್ಟಿಯಲ್ಲಿ ಆಗಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಇದ್ದರು.

ವಿರಾಟ್ ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನು ಪಡೆದಿರುವ ಭಾರತೀಯ ಸೆಲೆಬ್ರೆಟಿಯಾಗಿದ್ದಾರೆ. 262 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಅವರು ವಿಶ್ವದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ಕ್ರೀಡಾಪಟು. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next