Advertisement

ಹಾಪ್‌ಕಾಮ್ಸ್‌ನಿಂದ ಸಾವಯವ ದ್ರಾಕ್ಷಿ, ಕಲ್ಲಂಗಡಿ, ಕಿತ್ತಳೆ ಮೇಳ

11:42 AM Feb 09, 2017 | Team Udayavani |

ಬೆಂಗಳೂರು: ರಾಸಾಯನಿಕ ಮುಕ್ತ ದ್ರಾಕ್ಷಿ, ಕಲ್ಲಂಗಡಿ, ಕಿತ್ತಳೆ ಹಣ್ಣುಗಳನ್ನು ನಗರದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಲು ಫೆಬ್ರವರಿ ಮೂರನೇ ವಾರದಲ್ಲಿ ಹಾಪ್‌ಕಾಮ್ಸ್‌ ಸಾವಯವ ದ್ರಾಕ್ಷಿ, ಕಲ್ಲಂಗಡಿ, ಕಿತ್ತಳೆ ಮೇಳ ಆಯೋಜಿಸಿದೆ. 

Advertisement

ಕೃಷ್ಣ ಶರದ್‌, ಥಾಮ್ಸನ್‌ ಸೀಡ್‌ಲೆಸ್‌, ಬೆಂಗಳೂರು ನೀಲಿ, ದಿಲ್‌ಖುಷ್‌, ಆಸ್ಟ್ರೇಲಿಯಾ ರೆಡ್‌ಗೊಬ್‌, ಬ್ಲ್ಯಾಕ್‌ಗೊಬ್‌, ಪ್ಲೇಮ್‌, ಬಿಯಾಂಕ, ತಾಜಾ ಎ ಗಣೇಶ್‌, ಸೋನಾಕ ಇತ್ಯಾದಿ ದ್ರಾಕ್ಷಿ ತಳಿಗಳು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಲಭ್ಯವಾಗಲಿವೆ. ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿಯೊಂದಿಗೆ ಕಲ್ಲಂಗಡಿ ತಳಿಗಳಾದ ನಾಮಧಾರಿ, ಕಿರಣ್‌ ಹಾಗೂ ನಾಗಪುರ್‌ ಆರೆಂಜ್‌, ಸ್ಥಳೀಯ ಕಿತ್ತಳೆ ತಳಿಗಳು ಮತ್ತು ದಕ್ಷಿಣ ಆಫ್ರಿಕಾದ ಚಕ್ಕೋತಾ, ದೇವನಹಳ್ಳಿಯ ಚಕ್ಕೋತಾ ಹಣ್ಣುಗಳ ಮಾರಾಟಕ್ಕೆ ಹಾಪ್‌ಕಾಮ್ಸ್‌ ಮುಂದಾಗಿದೆ.

ಈ ಬಾರಿ ದ್ರಾಕ್ಷಿ ಫ‌ಸಲು ಉತ್ತಮವಾಗಿದ್ದು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಹಾಪ್‌ಕಾಮ್ಸ್‌ ಗ್ರಾಹಕರಿಗೆ ದ್ರಾಕ್ಷಿ ಹಣ್ಣು ಸಿಗುವಂತೆ ಮಾಡುವ ಉದ್ದೇಶವಿದೆ. ಜತೆಗೆ ಕಿತ್ತಳೆ, ಚಕ್ಕೋತಾ, ಕಲ್ಲಂಗಡಿ ಹಣ್ಣುಗಳಿಗೂ ಕೂಡ ಇದು ಅನ್ವಯವಾಗಲಿದ್ದು, ಶೇ.5ರಿಂದ 10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡುವ ಕುರಿತು ಹಾಪ್‌ಕಾಮ್ಸ್‌ ಚಿಂತನೆ ನಡೆಸಿದೆ. ದ್ರಾಕ್ಷಿ ಮೇಳದಲ್ಲಿ ಈ ಬಾರಿ ಸುಮಾರು 1000ಕ್ಕೂ ಅಧಿಕ ಟನ್‌ ದ್ರಾಕ್ಷಿ ಹಣ್ಣು ಮಾರಾಟ ಮಾಡುವ ಗುರಿ ಹೊಂದಲಾಗಿದೆ.

ಕಿತ್ತಳೆ 50 ಟನ್‌, ಚಕ್ಕೋತ 10 ಟನ್‌ ಹಾಗೂ 100 ಟನ್‌ ಕಲ್ಲಂಗಡಿ ಮಾರಾಟ ಮಾಡುವ ಗುರಿಯಿದೆ. ಲಾಲ್‌ಬಾಗ್‌, ಹೈಕೋರ್ಟ್‌ ಆವರಣ, ಬಸ್‌ನಿಲ್ದಾಣಗಳು ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಸುಲಭವಾಗಿ ಹಣ್ಣುಗಳು ಸಿಗುವಂತೆ ವ್ಯವಸ್ಥೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ.  ಕಳೆದ ದ್ರಾಕ್ಷಿ ಮೇಳದಲ್ಲಿ 600 ಟನ್‌ ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣುಗಳು ಮಾರಾಟ ಮಾಡಿದ್ದು 30 ಲಕ್ಷ ವಹಿವಾಟು ನಡೆದಿತ್ತು ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next