ಬೆಂಗಳೂರು/ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಗುರುವಾರಕ್ಕೆ ಆರು ದಿನ.
ದೇಶಾದ್ಯಂತ ನಿಯಮಗಳು, ಗೊಂದಲಗಳು ಮುಂದುವರಿದಿವೆ.
ಗ್ರಾಹಕರು ಮತ್ತು ಸಣ್ಣ ಉದ್ಯಮಿಗಳಲ್ಲಿನ ಆತಂಕ ಇನ್ನೂ ಪರಿಹಾರವಾಗಿಲ್ಲ. ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಬಿಲ್ ನೀಡುವಿಕೆಯಲ್ಲಿ ವ್ಯಾಪಾರಿಗಳು ಕೈಯಲ್ಲಿ ಬರೆದ ಬಿಲ್ ನೀಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿದೆ. ಕೆಲವೆಡೆ ಹೋಟೆಲ್‌ಗಳಲ್ಲಿ ಕೇಂದ್ರದ ಜಿಎಸ್‌ಟಿ ಮತ್ತು ರಾಜ್ಯಗಳು ವಿಧಿಸುವ ಜಿಎಸ್‌ಟಿ ಎಂದು ಬಿಲ್‌ನಲ್ಲಿ
ಮುದ್ರಿಸುವುದರಿಂದ ಗ್ರಾಹಕರು ಗೊಂದಲಕ್ಕೆ ಈಡಾಗಿದ್ದಾರಲ್ಲದೆ, ಸಿಬ್ಬಂದಿ ಜತೆಗೆ ವಾಗ್ವಾದ ನಡೆಸುವ ಘಟನೆಗಳೂ ನಡೆದಿವೆ.
ವಾಣಿಜ್ಯೋದ್ಯಮ ಕ್ಷೇತ್ರದ ತಜ್ಞರು ಹೇಳುವ ಪ್ರಕಾರ ತೆರಿಗೆ ಪದಟಛಿತಿಯಲ್ಲಿ ತುಂಬ ಸಂಕೀರ್ಣ ವ್ಯವಸ್ಥೆ ಜಾರಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಲೋಕಲ್‌ಸರ್ಕಲ್ಸ್.ಕಾಂ ಕಳೆದವಾರ ನಡೆಸಿದ ಸಮೀಕ್ಷೆಯ ಪ್ರಕಾರ ಶೇ.31 ಮಂದಿ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ನಿಗದಿತ ಸರಕಿನ ಮೇಲೆ ಪಾವತಿ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.23 ಮಂದಿ ವ್ಯಕ್ತಪಡಿಸಿದ ಅಭಿಪ್ರಾಯ ಪ್ರಕಾರ ಎಂಆರ್‌ಪಿಯನ್ವಯ ಮಾತ್ರ ತಾವು ದರ ಪಾವತಿಸಿದ್ದಾಗಿ ಹೇಳಿದ್ದಾರೆ. ಇನ್ನು ಇತರ ಶೇ.20 ಮಂದಿ ಕಡಿತಗೊಳಿಸಲಾಗದ ಬೆಲೆಯ ಮೇಲೆ ಜಿಎಸ್‌ಟಿ ಪಾವತಿ ಮಾಡಿದ್ದೇವೆಂದು ಹೇಳಿದ್ದಾರೆ. ಶೇ.26 ಮಂದಿ ಯಾವುದೇ ಬಿಲ್ ಇಲ್ಲದೆ ವಸ್ತುಗಳನ್ನು ಖರೀದಿಸಿದ್ದಾಗಿ ಹೇಳಿದ್ದಾರೆ.
ಮಾತ್ರವಲ್ಲದೆ ಖರೀದಿಯ ಪ್ರಮಾಣದಲ್ಲಿ ಕೂಡ ಕಡಿಮೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಕೋಲ್ಕತಾ ನಿವಾಸಿಯೊಬ್ಬರು ಮಾಧ್ಯಮಗಳ ಜತೆ ಮಾತನಾಡಿ, ಮನೆಯ ಸಮೀಪದ ಮೆಡಿಕಲ್ ಶಾಪ್‌ನಿಂದ ಔಷಧಗಳನ್ನು ಖರೀದಿಸಿದ ಬಳಿಕ ಬಿಲ್ ಕೇಳಿದಾಗ ಅದನ್ನು ನೀಡಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.ಎಂಆರ್‌ಪಿಗಿಂತ ಹೆಚ್ಚಿನ ಮೊತ್ತ ಪಾವತಿ ಮಾಡುವಂತೆ ಅವರು ಪಟ್ಟುಹಿಡಿದರು ಎಂದು ಆರೋಪಿಸಿದ್ದಾರೆ.
ಸರ್ಕಾರದಿಂದ ಎಚ್ಚರಿಕೆ: ಕೆಲ ವ್ಯಾಪಾರಿಗಳು ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಂಥವರ ವಿರುದಟಛಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇಂದು ಘೋಷಣೆ: ದೇಶಾದ್ಯಂತ ಹಲವು ರೀತಿಯ ಸಮಸ್ಯೆಗಳು ಎದುರಾಗಿರುವುದರಿಂದ ಕೇಂದ್ರ ಸರ್ಕಾರ ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಶುಲ್ಕ ರಹಿತ ದೂರವಾಣಿ ಸಂಖ್ಯೆ ಆರಂಭಿಸುವ ಸಾಧ್ಯತೆಗಳಿವೆ.
ರಿಯಲ್ ಎಸ್ಟೇಟ್‌ಗೂ ಸಮಸ್ಯೆ?
ಶೇ.12ರಷ್ಟು ಜಿಎಸ್‌ಟಿ ದರದಿಂದಾಗಿ ರಿಯಲ್ ಎಸ್ಟೇಟ್‌ಗೂ ಸಮಸ್ಯೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಅಪನಗದೀಕರಣದಿಂದ ರಿಯಲ್ ಎಸ್ಟೇಟ್ ವಲಯ ಆಘಾತ ಅನುಭವಿಸಿದ್ದು, ಇದೀಗ ಜಿಎಸ್‌ಟಿ ಪರಿಣಾಮ ತಪ್ಪಿಸಲು ಉದ್ಯಮ ಪರ್ಯಾಯ ಮಾರ್ಗಗಳತ್ತ ಚಿಂತಿಸತೊಡಗಿದೆ.