Advertisement
ಸಂಗಬೆಟ್ಟು ಗ್ರಾಮದ ನಿವಾಸಿ ರಾಮ ಶೆಟ್ಟಿಗಾರ್ (72) ಕೈಮಗ್ಗ ಕೆಲಸವನ್ನು 54 ವರ್ಷಗಳಿಂದ ನಡೆಸುತ್ತಿದ್ದು, ಕಳೆದ 3 ವರ್ಷಗಳಿಂದ ಮಾರುಕಟ್ಟೆಯಲ್ಲಿ ನೂಲು ಪೂರೈಕೆಯಿಲ್ಲದೆ ಮೂಲ ಕಸುಬನ್ನು ನಿಲ್ಲಿಸಿದ್ದಾರೆ. ಅಂದು ಇವರ ಕೈಮಗ್ಗದ ನವೀನ ವಿನ್ಯಾಸದ ಸೀರೆಗಳಿಗೆ ಹಲವು ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಬೇಡಿಕೆಯಿತ್ತು. 5 ಮೀ. ಉದ್ದದ ಸೀರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ, 6 ಮೀ. ಉದ್ದದ ಸೀರೆಗೆ ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಆಧುನಿಕತೆ ಮುಂದುವರಿದಂತೆ ಕೈಮಗ್ಗದಿಂದ ತಯಾರಿಸುವ ವಸ್ತ್ರಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾಯಿತು.
ಕಳೆದ 54 ವರ್ಷಗಳಿಂದ ಕೈಮಗ್ಗ ಕಸುಬು ನಡೆಸುತ್ತಿದ್ದೆ, ಬಟ್ಟೆ ತಯಾರಿಕೆಗೆ ಬೇಕಾಗಿರುವ ನೂಲು ಮಾರುಕಟ್ಟೆಯಲ್ಲಿ ಸಿಗದಿದ್ದ ಕಾರಣದಿಂದಾಗಿ ಕಳೆದ 3 ವರ್ಷಗಳಿಂದ ಕಸುಬು ನಿಲ್ಲಿಸಬೇಕಾಯಿತು. ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳಿಗೆ ನೈಸರ್ಗಿಕವಾದ ಬಣ್ಣ ಉಪಯೋಗಿಸ ಲಾಗುತ್ತಿದ್ದು, ಇದು ಬಳಕೆಗೆ ಉತ್ತಮವಾಗಿದೆ. ಪ್ರತಿನಿತ್ಯ 1ರಿಂದ 2 ಸೀರೆ ತಯಾರಿಸಬಹುದು. ಆಧುನಿಕ ತಂತ್ರಜ್ಞಾನದಿಂದ ತಯಾರಿಕೆ ಅತಿ ವೇಗವಾಗುತ್ತಿದೆ.ಹೀಗಾಗಿ ಕೈಮಗ್ಗದ ಕೆಲಸ ಮರೆಯಾಗುತ್ತಿದೆ.
– ರಾಮ ಶೆಟ್ಟಿಗಾರ
ಕೈಮಗ್ಗ ಕೆಲಸಗಾರರು