Advertisement

ಹುಬ್ಬಳ್ಳಿಯಲ್ಲಿ ಕರಕುಶಲತೆ ಸಂಶೋಧನೆಗೆ ಹೊಸ ಕಳೆ

03:19 PM Apr 02, 2021 | Team Udayavani |

ಹುಬ್ಬಳ್ಳಿ: ಕರಕುಶಲತೆ ಸಂರಕ್ಷಣೆ, ಹೊಸತನದ ಸಂಶೋಧನೆ, ನಾವೀನ್ಯ ವಿನ್ಯಾಸ, ಗುಣಮಟ್ಟದ ಉತ್ಪಾದನೆ ಉದ್ದೇಶದೊಂದಿಗೆಕರಕುಶಲತೆಯ ಆರ್‌ ಆ್ಯಂಡ್‌ ಡಿ (ಸಂಶೋಧನೆ ಮತ್ತುಅಭಿವೃದ್ಧಿ) ಕೇಂದ್ರವನ್ನು ನಗರದಲ್ಲಿ ಆರಂಭಿಸಲು ಭೂಮಿಕೆ ಸಿದ್ಧಗೊಳ್ಳುತ್ತಿದೆ.

Advertisement

ಪಾರಂಪರಿಕವಾಗಿ ಬಂದಿರುವಕರಕುಶಲತೆಯ ಕೊಂಡಿ ಕಳಚುತ್ತಿದೆ.ಕರಕುಶಲತೆ ಕೌಶಲ ಉಳಿಸಿ-ಬೆಳೆಸುವ,ಯುವಕರನ್ನು ಕರಕುಶಲತೆ ವೃತ್ತಿಗಳತ್ತಸೆಳೆಯುವ, ಇದ್ದ ಕರಕುಶಲಕರ್ಮಿಗಳನ್ನು ಬದಲಾದ ಸ್ಥಿತಿಗೆ ತಕ್ಕಂತೆ ತಯಾರುಗೊಳಿಸುವ ಅನಿರ್ವಾಯತೆಯಿದೆ.ಅದಕ್ಕೆ ಪೂರಕವಾಗಿಯೇ ಆರ್‌ ಆ್ಯಂಡ್‌ ಡಿ ಕಾರ್ಯ ನಿರ್ವಹಿಸುವಂತಾಗಬೇಕೆಂಬ ಉದ್ದೇಶದೊಂದಿಗೆ ಮಹತ್ವದಕಾರ್ಯಕ್ಕೆ ಮುಂದಡಿ ಇರಿಸಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರೇರಿತ “ಲಘು ಉದ್ಯೋಗ ಭಾರತಿ’ ಇಂತಹ ಸಾಹಸಕ್ಕೆ ಮುಂದಾಗಿದೆ.

ಕರಕುಶಲಕರ್ಮಿಗಳಿಗೆತರಬೇತಿ, ಸಂಶೋಧನೆ, ಹೊಸತನ ನಿಟ್ಟಿನಲ್ಲಿಸಹಕಾರಿಯಾಗುವಂತೆ ಹುಬ್ಬಳ್ಳಿಯಲ್ಲಿ ಆರ್‌ ಆ್ಯಂಡ್‌ಡಿ ಕೇಂದ್ರ ಆರಂಭಿಸುವ ಕುರಿತಾಗಿ ಯತ್ನಗಳುನಡೆಯುತ್ತಿವೆ. ಇದು ಸಾಧ್ಯವಾದರೆ ರಾಜ್ಯದಲ್ಲೇಮಹತ್ವದ ಮೈಲಿಗಲ್ಲು ಆಗಲಿದೆ. ವಿಶೇಷವಾಗಿಉತ್ತರ ಕರ್ನಾಟಕ ಗ್ರಾಮಶಿಲ್ಪಿಗಳಿಗೆ ಮಹತ್ವದ ವೇದಿಕೆ ದೊರೆತಂತಾಗಲಿದೆ.

ಕೇಂದ್ರದಲ್ಲಿ ಏನಿರಲಿದೆ? :ಕರಕುಶಲತೆ ಬಲವರ್ಧನೆಗೆ ಬೇಕಾದ ವಿವಿಧ ಸೌಲಭ್ಯಗಳು ಇರಲಿವೆ. ಇನ್‌ಕ್ಯುಬೇಷನ್‌ ಕೇಂದ್ರ ಇರಲಿದ್ದು, ಕರಕುಶಲತೆ ಕುರಿತ ದತ್ತಾಂಶಗಳು, ಮಾಹಿತಿಗಳ ದಾಖಲೀಕರಣ, ಉತ್ಪನ್ನಗಳ ಪ್ರಯೋಗಕ್ಕೆ ಪ್ರಯೋಗಾಲಯ, ಉತ್ಪನ್ನಗಳ ಮಾದರಿ ತಯಾರಿಕೆ ಸೌಲಭ್ಯ,ಮಾರುಕಟ್ಟೆ ಸಂಪರ್ಕ ಮಾಹಿತಿ, ತರಬೇತಿ ಹೀಗೆ ವಿವಿಧ ಸೌಲಭ್ಯ ಹೊಂದಲಿದೆ. ಕೇಂದ್ರವು ಉತ್ಪನ್ನಗಳ ತಯಾರಿಕೆ, ಉತ್ಪನ್ನಗಳ ಪ್ರದರ್ಶನ, ಮಾರಾಟ ಸೌಲಭ್ಯ ಹೊಂದಲು ಯೋಜಿಸಲಾಗಿದೆ. ಕರಕುಶಲಕರ್ಮಿಗಳ ಉತ್ಪನ್ನಗಳದಾಖಲೀಕರಣ ಮತ್ತು ಬ್ರ್ಯಾಂಡ್‌ ರೂಪ ನೀಡುವ ಕೆಲಸ ಕೈಗೊಳ್ಳಲಾಗುತ್ತದೆ.ತಮ್ಮ ಕಲೆ ಅಭಿವೃದ್ಧಿಗೆ ಆಸಕ್ತಿ ಹೊಂದಿರುವ ಕರಕುಶಲಕರ್ಮಿಗಳ ಪ್ರತಿಭೆಬಳಸಿಕೊಳ್ಳಲು, ಅದನ್ನು ಇತರರಿಗೂ ನೀಡಲು ಯೋಜಿಸಲಾಗಿದೆ.ಹವ್ಯಾಸಕ್ಕಾಗಿ ಉತ್ಪನ್ನಗಳನ್ನು ತಯಾರಿಸುತ್ತಿರುವವರನ್ನು ಗುರುತಿಸಿಅವರ ಉತ್ಪನ್ನಗಳಿಗೆ ವಾಣಿಜ್ಯರೂಪ ನೀಡುವುದು ಸಹ ಕೇಂದ್ರದ ಉದ್ದೇಶವಾಗಿದೆ. ಜತೆಗೆ ಕರಕುಶಲಕರ್ಮಿಗಳಿಗೆ ಸರಕಾರದ ಯೋಜನೆ, ಸೌಲಭ್ಯ-ನೆರವು ಮಾಹಿತಿ ನೀಡಲಾಗುತ್ತದೆ.

ಹತ್ತು ವಿಭಾಗಗಳ ಚಿಂತನೆ : ಆರ್‌ ಆ್ಯಂಡ್‌ ಡಿ ಕೇಂದ್ರದಲ್ಲಿ 10 ವಿಭಾಗಗಳಲ್ಲಿ ಕಾರ್ಯ ಕೈಗೊಳ್ಳಲು ಯೋಜಿಸಲಾಗಿದೆ. ಕಟ್ಟಿಗೆ, ಕಲ್ಲು, ಲೋಹ, ಮಣ್ಣು, ಕೈಮಗ್ಗ, ಗೋ ಉತ್ಪನ್ನಗಳುಮತ್ತು ನಾಟಿ ವೈದ್ಯ, ಚರ್ಮ, ಸಾಂಪ್ರದಾಯಿಕ ಗೊಂಬೆಗಳು, ಆಟಿಕೆ ಹಾಗೂವಾದ್ಯ, ಗಾಜು, ಖಾದಿ-ಹ್ಯಾಂಡಿಕ್ರಾಫ್ಟ್‌ ಹೀಗೆ ಹತ್ತು ವಿಭಾಗಗಳನ್ನು ಸದ್ಯಕ್ಕೆಗುರುತಿಸಲಾಗಿದೆ. ಕಟ್ಟಿಗೆ ವಿಭಾಗದಲ್ಲಿ ಬಾಂಬೂ, ಕಸಬರಿಗೆ, ಎಲೆ, ಅಡಿಗೆ ತಟ್ಟೆ ತಯಾರಿ, ಬಡಿಗಾರಿಕೆ ಇತ್ಯಾದಿಗಳ ಮೇಲೆ ಸಂಶೋಧನೆ-ಅಭಿವೃದ್ಧಿ, ಹೊಸತನಬಗ್ಗೆ ಕಾರ್ಯ  ನಿರ್ವಹಿಸಲಾಗುತ್ತದೆ. ಅದೇ ರೀತಿ ಕಲ್ಲು ಬಳಸಿ ಬೀಸುವ ಕಲ್ಲು, ಒರಳು ಕಲ್ಲು, ಮೂರ್ತಿಗಳು ಇತ್ಯಾದಿ. ಲೋಹದಿಂದ ತಯಾರಿಸುವ ವಿವಿಧ ವಸ್ತು, ಪಂಚಲೋಹದಿಂದ ಮೂರ್ತಿಗಳ ತಯಾರಿಕೆ, ಮಣ್ಣಿನ ವಿವಿಧ ಉತ್ಪನ್ನಗಳು, ಅಲಂಕಾರಕವಸ್ತುಗಳು, ಟೇರಾಕೋಟಾ, ಕೈಮಗ್ಗದಡಿ ವಿವಿಧ ವಸ್ತ್ರಗಳು, ಚರ್ಮದಿಂದ ತಯಾರಿಸುವ ವಿವಿಧ ಉತ್ಪನ್ನಗಳು, ಗಾಜು ಬಳಸಿ ಬಳೆ, ವಿವಿಧ ಅಲಂಕಾರಿಕ ವಸ್ತುಗಳು, ಖಾದಿ ಮತ್ತುಗ್ರಾಮೋದ್ಯೋಗ ಉತ್ಪನ್ನಗಳು, ಹ್ಯಾಂಡಿಕ್ರಾಫ್ಟ್‌ ಅಡಿಯಲ್ಲಿ ಕೌದಿಗಳ ತಯಾರಿಕೆ, ಕಸೂತಿ ಕಲೆಇನ್ನಿತರೆ ವಸ್ತುಗಳ ಮೇಲೆ ಪ್ರಯೋಗ, ಹೊಸ ತಂತ್ರಜ್ಞಾನ ಬಳಕೆ, ಉತ್ಪನ್ನಗಳ ತಯಾರು, ಶಿಕ್ಷಣ, ಕೌಶಲ ಮೇಲ್ದರ್ಜೆಗೇರಿಸುವ ಕಾರ್ಯಗಳನ್ನು ಕೇಂದ್ರದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.

Advertisement

ಏನಿದು ಲಘು ಉದ್ಯೋಗ ಭಾರತಿ? : ದೇಸಿ ಉತ್ಪನ್ನಗಳ ಉಳಿವು-ಉತ್ತೇಜನ ಉದ್ದೇಶದೊಂದಿಗೆ 1994ರಲ್ಲಿ ನಾಗ್ಪುರದಲ್ಲಿ ಜನ್ಮತಳೆದ ಲಘು ಉದ್ಯೋಗ ಭಾರತಿ, ಇದೀಗ ಹುಬ್ಬಳ್ಳಿಯನ್ನು ಕೇಂದ್ರವಾ ಗಿಟ್ಟುಕೊಂಡು ಉತ್ತರ ಕರ್ನಾಕದಲ್ಲಿನ ಕರಕುಶಲ ಕಲೆಯನ್ನುಉಳಿಸಿ-ಬೆಳೆಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಲಘು ಉದ್ಯೋಗ ಭಾರತಿ ಪ್ರಸ್ತುತ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ,ಸುಮಾರು 450ಕ್ಕೂ ಅಧಿಕ ಜಿಲ್ಲೆಗಳಲ್ಲಿ ತನ್ನ ಸಂಪರ್ಕ ಹೊಂದಿದೆ. ಆಯಾ ಪ್ರದೇಶಗಳಲ್ಲಿಕರಕುಶಲಕರ್ಮಿಗಳಿಗೆ ಉತ್ತೇಜನ, ಅವರ ಉತ್ಪನ್ನಗಳಿಗೆಮಾರುಕಟ್ಟೆ ವ್ಯವಸ್ಥೆ, ದೇಸಿ ಉತ್ಪನ್ನಗಳಿಗೆ ಪ್ರೋತ್ಸಾಹಕಾರ್ಯ ಮಾಡುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು,ವಿವಿಧ ಕಾರ್ಯ ಕೈಗೊಂಡಿದೆಯಾದರೂ ಇದೀಗ ಉತ್ತರದ 14 ಜಿಲ್ಲೆಗಳ ಕರಕುಶಲ ಕರ್ಮಿಗಳ ಉತ್ಪನ್ನಗಳಿಗೆ ವೇದಿಕೆ ಕಲ್ಪಿಸುವ ಯತ್ನ ಕೈಗೊಂಡಿದೆ.

14 ಜಿಲ್ಲೆಗಳು ಕೇಂದ್ರೀಕೃತ : ಉತ್ತರ ಕರ್ನಾಟಕದ 14 ಜಿಲ್ಲೆಗಳನ್ನು ಕೇಂದ್ರೀಕರಿಸಿ ಲಘು ಉದ್ಯೋಗ ಭಾರತಿ ಗ್ರಾಮಶಿಲ್ಪಿ ಉದ್ಯಮಿಪ್ರಕೋಷ್ಠ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದ ಕರಕುಲಶಕರ್ಮಿಗಳನ್ನುಹುಡುಕಿ ಅವರಿಗೆ ಬೇಕಾದ ಉತ್ತೇಜನ, ಪ್ರೋತ್ಸಾಹಮೂಲಕ ಅವರ ಬಲವರ್ಧನೆಗೆಯತ್ನಿಸುತ್ತಿದ್ದೇವೆ. ಅದರಭಾಗವಾಗಿಯೇ ಹುಬ್ಬಳ್ಳಿಯಲ್ಲಿಏ. 9-11ರಂದು ಪ್ರದರ್ಶನ-ಮಾರಾಟ ಮೇಳಹಮ್ಮಿಕೊಂಡಿದ್ದೇವೆ ಎಂದು ಪ್ರಕೋಷ್ಠದ ಡಾ| ಸುನಂದಾ ಕಳಕಣ್ಣವರ ತಿಳಿಸಿದ್ದಾರೆ.

ಲಘು ಉದ್ಯೋಗ ಭಾರತಿ ಕಳೆದ 20 ವರ್ಷಗಳಲ್ಲಿಕರಕುಶಲಕರ್ಮಿಗಳು, ದೇಸಿ ಉತ್ಪನ್ನಗಳ ನಿಟ್ಟಿನಲ್ಲಿಎಲ್ಲ ರೀತಿಯ ಪ್ರೋತ್ಸಾಹ, ಉತ್ತೇಜನ ನೀಡುತ್ತ ಬಂದಿದ್ದು, ಅದನ್ನು ಮುಂದುವರಿಸುತ್ತಿದೆ. ಕರಕುಶಲಕರ್ಮಿಗಳ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಾಗಿದೆ. ಅದಕ್ಕೆ ಬೇಕಾದ ತಯಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಕರಕುಶಲತೆ ಕ್ಷೇತ್ರದ ಸಮಸ್ಯೆಗಳ ಅಧ್ಯಯನಕ್ಕೆ ಮುಂದಾಗಿದ್ದೇವೆ. ಸಮಸ್ಯೆ ಅರಿಯುವುದಷ್ಟೇ ಅಲ್ಲ ಅದರಪರಿಹಾರಕ್ಕೂ ಒತ್ತು ನೀಡುತ್ತೇವೆ.  -ನಾರಾಯಣ ಪ್ರಸನ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ, ಲಘು ಉದ್ಯೋಗ ಭಾರತಿ

ಐಟಿ-ಬಿಟಿ, ರೊಬೊಟಿಕ್‌, ಜವಳಿ ಇತ್ಯಾದಿ ಕ್ಷೇತ್ರಗಳಿಗೆ ಆರ್‌ ಆ್ಯಂಡ್‌ ಡಿವ್ಯವಸ್ಥೆ ಇದೆ. ಆದರೆ, ಭಾರತೀಯ ಪರಂಪರೆ,ಕೌಶಲದ ಪ್ರತೀಕವಾಗಿರುವ ಕರಕುಶಲತೆಗೆ ಆರ್‌ ಆ್ಯಂಡ್‌ ಡಿ ಇಲ್ಲ ಎಂದರೆ ಹೇಗೆ ಎಂಬ ಚಿಂತನೆ ಯೊಂದಿಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಆರಂಭ ಚಿಂತನೆ ಚಿಗುರೊಡೆದಿದೆ. ಕರಕುಶಲತೆಗೆ ಕೌಶಲ, ತಂತ್ರಜ್ಞಾನ-ವೈಜ್ಞಾನಿಕ ಚಿಂತನೆಯ ಸ್ಪರ್ಶ ಅವಶ್ಯವಾಗಿದೆ. ಕರಕುಶಲಕರ್ಮಿಗಳಿಗೆ ಹೊಸ ಚಿಂತನೆ, ತರಬೇತಿ, ಮಾರುಕಟ್ಟೆ ಸೌಲಭ್ಯ ಇದೆಲ್ಲಕ್ಕೂ ಹೆಚ್ಚಾಗಿ ಯುವ ಸಮೂಹವನ್ನು ಈ ಕ್ಷೇತ್ರದತ್ತ ಆಕರ್ಷಿಸುವುದಾಗಿದೆ. –ಡಾ| ಸುನಂದಾ ಕಳಕಣ್ಣವರ, ಲಘು ಉದ್ಯೋಗ ಭಾರತಿ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next