Advertisement

ಅಂಗವಿಕಲ ಪ್ರತಿಭೆ ಶಮಿತಾ ಶಾಲೆಗೆ ಪ್ರಥಮ

06:50 AM May 18, 2018 | Team Udayavani |

ಉಡುಪಿ: ದೈಹಿಕ ಅಸಾಮರ್ಥ್ಯ ಹೊಂದಿರುವ ಶಮಿತಾ ಹೊಳ್ಳ ಗೃಹಾಧಾರಿತ ಶಿಕ್ಷಣ ಪಡೆದು ಎಸೆಸೆಲ್ಸಿ ಪರೀಕ್ಷೆಯಲ್ಲಿ 534 ಅಂಕಗಳೊಂದಿಗೆ (ಶೇ. 85.44) ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಈಕೆ ಹನುಮಂತನಗರ ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ.

Advertisement

ಈಕೆ ಹುಟ್ಟಿದಾರಭ್ಯದಿಂದ ಬೆನ್ನುಹುರಿಯ ಸಮಸ್ಯೆಯಿಂದ ಸೊಂಟದ ಕೆಳಗಿನ ಸ್ಪರ್ಶಜ್ಞಾನ ಕಳೆದುಕೊಂಡಿದ್ದಾಳೆ. 1ರಿಂದ 10ನೇ ತರಗತಿಯ ವರೆಗಿನ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದಿದ್ದು, ಸಮೀಪದ ಹನುಮಂತ ನಗರ ಸರಕಾರಿ ಪ್ರೌಢ ಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಳು.ಈಕೆ ಕೊಡಂಕೂರಿನ ಪ್ರಕಾಶ ಹೊಳ್ಳ ಹಾಗೂ ಸಂಧ್ಯಾ ಹೊಳ್ಳ ಅವರ ಪುತ್ರಿ.
 
ಹೆತ್ತವರು ಮಗಳ ಶೈಕ್ಷಣಿಕ ನೆರವಿಗಾಗಿ ಪದವೀಧರರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಅಲ್ಲದೆ ಶಾಲೆಯ ಶಿಕ್ಷಕ ವೃಂದದವರು ಇ-ಮೇಲ್‌ ಹಾಗೂ ವಾಟ್ಸಪ್‌ ಮೂಲಕ ಕಲಿಕಾ ಸಂಬಂಧ ಮಾಹಿತಿಗಳನ್ನು ನೀಡಿರುತ್ತಾರೆ.

ಅರಳಿದ ಹಂಬಲ
ನನ್ನ ಸಾಧನೆಗೆ ಹೆತ್ತವರು, ಮನೆಗೆ ಬಂದು ಪಾಠ ಹೇಳಿಕೊಟ್ಟ ಪದವೀಧರೆ ಹಾಗೂ ಶಾಲಾ ಶಿಕ್ಷಕವೃಂದ ಕಾರಣ. ಮುಂದೆ ವಾಣಿಜ್ಯ ವಿಭಾಗದಲ್ಲಿ ಶಿಕ್ಷಣವನ್ನು ಮುಂದುವರಿಸಿ, ಚಾರ್ಟರ್ಡ್‌ ಅಕೌಂಟೆಂಟ್‌ ಆಗಬೇಕೆಂಬ ಹಂಬಲ ಹೊಂದಿರುತ್ತೇನೆ.
– ಶಮಿತಾ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next