Advertisement

ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ

05:58 PM Oct 18, 2024 | Team Udayavani |

ಉದಯವಾಣಿ ಸಮಾಚಾರ
ಹಾನಗಲ್ಲ: ಸಾಂಸ್ಕೃತಿಕ ಪರಿಸರಕ್ಕೆ ವ್ಯಕ್ತಿತ್ವದ ಅನಾವರಣ ಮಾಡುವಂತಹ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ ಮಾನವ ಕುಲಕೋಟಿಗೆ ಆದರ್ಶವಾಗಿರುವುದಲ್ಲದೇ ಅನುಕರಣೀಯರು ಎಂದು ತಹಶೀಲ್ದಾರ್‌ ಎಸ್‌. ರೇಣುಕಮ್ಮ ತಿಳಿಸಿದರು.

Advertisement

ಗುರುವಾರ ಇಲ್ಲಿನ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ಮಹಾಪುರುಷರ ದಿನಾಚರಣೆಗಳು ಅವರ ವಕ್ತಿತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ, ಅವರ ಆದರ್ಶಗಳನ್ನು ಜ್ಞಾಪಿಸಿಕೊಂಡು ಆಚರಿಸುವ ಕಾರ್ಯಕ್ಕೆ ಪ್ರೇರಣೆಗಾಗಿ ಇವೆ. ಸರಕಾರ ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಸಾಮಾಜಿಕ ರೀತಿ ನೀತಿಗಳನ್ನು ಮಹಾಪುರುಷರ ನಡೆಯಲ್ಲಿ ಪರಿಚಯಿಸುವ ಕಾರ್ಯ ಕೈಗೊಂಡಿದೆ. ಇದು ಆದರ್ಶ ಹಾಗೂ ಮಾರ್ಗದರ್ಶಿ ಕಾರ್ಯ ಎಂದರು.

ವಾಲ್ಮೀಕಿ ಸಮಾಜದ ಮುಖಂಡ ಫಕ್ಕೀರಪ್ಪ ಓಲೆಕಾರ, ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ಮಾತನಾಡಿದರು. ಪರಸಪ್ಪ ಮುನಿಯಣ್ಣನವರ, ಹೊನ್ನಪ್ಪ ಅಕ್ಕಿವಳ್ಳಿ, ಸುಭಾಸ ತಳವಾರ, ಸತೀಶ ಅಂಕೋಲ, ಪ್ರಕಾಶ ನಂದಿಕೊಪ್ಪ, ಶಿವಕುಮಾರ ತಳವಾರ, ಮುಂಜುನಾಥ ಗುರಣ್ಣನವರ, ಬಸವರಾಜ ಓಲೇಕಾರ, ವಸಂತ ವೆಂಕಟಾಪುರ, ರೇಖಾ ಕರಿಭೀಮಣ್ಣನವರ, ಶಿವಕುಮಾರ ಭದ್ರಾವತಿ, ರಮೇಶ ಕರಿಭೀಮಣ್ಣನವರ, ಶ್ರೀಕಾಂತ ಬೈಚವಳ್ಳಿ, ಹೊನ್ನಪ್ಪ ದೊಡ್ಡಮನಿ, ರವಿಕುಮಾರ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ಗಂಗಾ ಹಿರೇಮಠ, ಅರವಿಂದ ಸುಗಂ , ಡಾ| ಗಿರೀಶ ರಡ್ಡೇರ, ವೈ.ಕೆ. ಜಗದೀಶ, ಬಿ.ಎನ್‌. ಸಂಗೂರ, ರವಿ ಅರ್ಕಸಾಲಿ ಮೊದಲಾದವರು ಇದ್ದರು.

ಕಾರಣ ಕೇಳಿ ನೋಟೀಸ್‌: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಿ ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಸಮಾಜ ಮುಖಂಡರು ತಹಶೀಲ್ದಾರ್‌ರನ್ನು ಒತ್ತಾಯಿಸಿದರು. ಕೂಡಲೇ ಗೈರು ಹಾಜರಾದ ಅಧಿ ಕಾರಿಗಳಿಗೆ ನೋಟಿಸ್‌ ನೀಡಲು ಸ್ಥಳದಲ್ಲೇ ತಾಲೂಕು ತಹಶೀಲ್ದಾರ್‌ ಎಸ್‌. ರೇಣುಕಮ್ಮ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next