Advertisement

ಗರಿ ಬಿಚ್ಚಲಿದೆ ಹಂಸಿಕಾ

10:10 PM Dec 13, 2019 | Lakshmi GovindaRaj |

ಹಂಕ್‌ ನನ್‌ ಇನ್‌ಸ್ಟಿಟ್ಯೂಟ್‌ ವತಿಯಿಂದ “ಹಂಸಿಕಾ’- ಒಡಿಸ್ಸಿ ಬ್ಯಾಲೆ ನೃತ್ಯ ನಡೆಯಲಿದೆ. ಸಂಜಲಿ ನೃತ್ಯ ಸಂಸ್ಥೆಯ ಶರ್ಮಿಳಾ ಮುಖರ್ಜಿ ಹಾಗೂ ಶಿಷ್ಯೆಯರು ಈ ಪ್ರದರ್ಶನ ನೀಡಲಿದ್ದಾರೆ. ಹಂಸಿಕಾ ನೃತ್ಯ ರೂಪಕವು, ರಷ್ಯಾದ ಬ್ಯಾಲೆ “ಸ್ವಾನ್‌ ಲೇಕ್‌’ನ ಒಡಿಸ್ಸಿ ನೃತ್ಯ ರೂಪಾಂತರವಾಗಿದೆ. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದ ಮೂಲಕ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ಪ್ರದರ್ಶಿಸಲಿರುವುದು ವಿಶೇಷ.

Advertisement

ರಾಜಕುಮಾರ ಸೀಗ್‌ ಫ್ರೆಡ್‌ ಮತ್ತು ಒಡೆಟ್‌(ಮಾಟಗಾತಿಯೊಬ್ಬಳ ಕುತಂತ್ರದಿಂದಾಗಿ ಹಂಸವಾಗಿ ಬದಲಾದ ರಾಜಕುಮಾರಿ) ನಡುವಿನ ಪ್ರೇಮಾಂಕುರದ ಕಥನವು ಇದರಲ್ಲಿದೆ. ರಷ್ಯಾದ ಬ್ಯಾಲೆಟ್‌ನ ಮನಮೋಹಕ ಚಲನೆ ಮತ್ತು ಕಣ್ಮನ ಸೆಳೆಯುವ ಭಂಗಿಗಳನ್ನು ಒಡಿಸ್ಸಿಗೆ ಹೊಂದುವಂತೆ ಹಂಸಿಕಾದಲ್ಲಿ ಮರುಸೃಷ್ಟಿಸಲಾಗಿದೆ. ಸಂಗೀತ ನಿರ್ದೇಶಕ ಪ್ರವೀಣ್‌ ಡಿ. ರಾವ್‌. ನೃತ್ಯಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು, ಮಾನಸಿಕ ರೋಗಿಗಳ ಪುನಶ್ಚೇತನ ಹಾಗೂ ಪೋಸ್ಟ್‌ ಟ್ರಾಮ್‌ ಕೇರ್‌ಗೆ ಬಳಸಲಾಗುವುದು. ಟಿಕೆಟ್‌ಗಳು ಬುಕ್‌ ಮೈ ಶೂನಲ್ಲಿ ಲಭ್ಯ.

ಯಾವಾಗ?: ಡಿ. 15, ಭಾನುವಾರ ಸಂಜೆ 6.30
ಎಲ್ಲಿ?: ಗುಡ್‌ ಶೆಫ‌ರ್ಡ್‌ ಸಭಾಂಗಣ, ಮ್ಯೂಸಿಯಂ ರಸ್ತೆ, ಪ್ಯಾಟ್ರಿಕ್ಸ್‌ ಚರ್ಚ್‌ ಮುಂಭಾಗ, ಶಾಂತಲಾ ನಗರ, ರಿಚ್ಮಂಡ್‌ ಟೌನ್‌
ಟಿಕೆಟ್‌ ದರ: ರೂ. 750 ರಿಂದ ಶುರು
ವಿವರ/ ಟಿಕೆಟ್‌ಗಾಗಿ: 98440 23538

Advertisement

Udayavani is now on Telegram. Click here to join our channel and stay updated with the latest news.

Next