Advertisement
ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ದಲಿತರು, ಅಸ್ಪೃಶ್ಯತೆ ವಿಚಾರಕ್ಕೆ ಸಂಬಂಧಿಸಿ ಮಾತಿಗಿಳಿದ ಹಂಸಲೇಖ ಅವರು, ಹಲವು ವಿಚಾರಗಳನ್ನು ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದರು. ಅವರ ಮಾತಿಗೆ ಹಲವರು ಬೆಂಬಲವನ್ನೂ ಸೂಚಿಸಿದ್ದು, ವ್ಯಾಪಕ ಆಕ್ರೋಶ ಎನ್ನುವುದು ಅವರನ್ನು ಕ್ಷಮೆ ಯಾಚಿಸುವಂತೆ ಮಾಡಿದೆ.
ಭಾಷಣದ ವೇಳೆ ಪೇಜಾವರ ಶ್ರೀಗಳ ದಲಿತರ ಕೇರಿ ಭೇಟಿಯನ್ನು ಪ್ರಸ್ತಾವಿಸಿ, ಶ್ರೀಗಳು ಅಲ್ಲಿ ಹೋಗಿ ಕುಳಿತುಕೊಳ್ಳಬಹುದಷ್ಟೆ, ಕೋಳಿ, ಕುರಿ ಮಾಂಸ ಕೊಟ್ಟರೆ ತಿನ್ನುತ್ತಿದ್ದರೆ, ದಲಿತರ ಮನೆಗೆ ಬಲಿತರು ಹೋಗುವುದು
ಏನು ದೊಡ್ಡ ವಿಷಯ ಎಂದು ಪ್ರಶ್ನಿಸಿದ್ದರು. ಹಂಸಲೇಖ ಅವರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಶ್ರೀಗಳ ಅಪಾರ ಭಕ್ತರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹಂಸಲೇಖ ಅವರು ಇಂತಹ ಹೇಳಿಕೆ ನೀಡುವುದು ಭೂಷಣವಲ್ಲ ಎಂದಿದ್ದರು. ಈಗಿನ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಪಾದರು ಹೇಳಿಕೆಯನ್ನು ಖಂಡಿಸಿದ್ದರು.
Related Articles
ಜನಪ್ರಿಯ ಕಾರ್ಯಕ್ರಮವಾದ ಗ್ರಾಮ ವಾಸ್ತವ್ಯವನ್ನೂ ಟೀಕಿಸಿದ್ದ ಹಂಸಲೇಖ ಅವರು, ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದರು. ಈಗ ನಗರದಲ್ಲಿರುವ ಆರ್. ಅಶೋಕ್ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ್ ಅವರೂ ಮಾಡುತ್ತಿದ್ದಾರೆ ಎಲ್ಲರೂ ಮಾಡುತ್ತಿದ್ದಾರೆ ಎಂದಿದ್ದರು. ಇದು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ.
Advertisement
ಇದನ್ನೂ ಓದಿ: ಪೇಜಾವರ ಶ್ರೀ ಮಾಂಸ ತಿನ್ನುತ್ತಿದ್ದರೇ ? :ತೀವ್ರ ಆಕ್ರೋಶ, ಕ್ಷಮೆ ಯಾಚಿಸಿದ ಹಂಸಲೇಖ
ಬಿಳಿಗಿರಿ ರಂಗನ ಕಥೆಬಿಳಿಗಿರಿ ರಂಗಯ್ಯ ಸೋಲಿಗ ಜನಾಂಗದ ಹೆಣ್ಣಿನೊಂದಿಗೆ ರಮಿಸಿದರೆ ಅದು ದೊಡ್ಡ ವಿಷಯವೇ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತಾಗುತ್ತಿತ್ತು.. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣಿನೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ ಎಂದು ಹಂಸಲೇಖ ಪೌರಾಣಿಕ ನಂಬಿಕೆಯನ್ನು ಪ್ರಶ್ನಿಸಿದ್ದರು, ಇದು ಹಲವು ಭಕ್ತರ ವಿರೋಧದ ಪ್ರತಿಕ್ರಿಯೆಗೆ ಕಾರಣವಾಗಿದೆ.