Advertisement

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

01:45 PM Dec 28, 2024 | Team Udayavani |

ಕೆಜಿಎಫ್ ಚಿತ್ರದ ನಂತರ ನಟ ಯಶ್‌ ಅವರ ಸ್ಟಾರ್‌ಡಮ್‌ ಎತ್ತರಕ್ಕೆ ಏರುತ್ತಲೇ ಇದೆ. ಈಗ ಅವರು ಪ್ಯಾನ್‌ ಇಂಡಿಯಾ ನಟ. ಬಹು ಬೇಡಿಕೆಯಲ್ಲಿರುವ ನಟ ಯಶ್‌ ಈಗ ಸಂಭಾವನೆ ವಿಚಾರದಲ್ಲೂ ದೊಡ್ಡ ಸದ್ದು ಮಾಡಿದ್ದಾರೆ.

Advertisement

ರಾಮಾಯಣ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕಾಗಿ ಅತಿಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆ ಈಗ ಇವರ ಹೆಗಲೇರಿದೆ. ಯಾವುದೇ ದೊಡ್ಡ ಚಿತ್ರವಿರಲಿ ಅಥವಾ ದೊಡ್ಡ ಸ್ಟಾರ್‌ ನಟರಿರಲಿ, ಅವರು ಖಳನಾಯಕರಾಗಿ ನಟಿಸುತ್ತಿದ್ದಾರೆ ಎಂದರೆ, 5-10 ಕೋಟಿ ರೂ. ಸಂಭಾವನೆ ನಿರೀಕ್ಷಿಸುತ್ತಾರೆ. ಆದರೆ, ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಯಶ್‌ ಬರೊಬ್ಬರಿ 200 ಕೋಟಿ ರೂ. ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ದೃಷ್ಟಿಯಿಂದ ನೋಡಿದರೆ, ಯಶ್‌ ಖಳನಟನಾಗಿ ನಟಿಸುತ್ತಿದ್ದಾರೆ. ಖಳನಟ ನೊಬ್ಬ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ “ರಾಮಾಯಣ’ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ನಿತೀಶ್‌ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್‌ ಸಹ ನಿರ್ಮಾಪಕರಾಗಿದ್ದಾರೆ ಕೂಡ.

Advertisement

Udayavani is now on Telegram. Click here to join our channel and stay updated with the latest news.

Next