Advertisement

ಹಂಪಿಯ ಪ್ರಸನ್ನ ವಿರೂಪಾಕ್ಷ

03:25 AM Nov 17, 2018 | |

ಹಂಪಿಯ ಪ್ರಮುಖ ಆಕರ್ಷಣೆಗಳಲ್ಲಿ ಪ್ರಸನ್ನ ವಿರೂಪಾಕ್ಷ ದೇವಾಲಯವೂ ಒಂದು. 14ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ನಂಬಲಾಗಿರುವ ಈ ದೇವಾಲಯಕ್ಕೆ ಶ್ರೀ ಕೃಷ್ಣದೇವರಾಯನು ಅಪಾರ ಪ್ರಮಾಣದಲ್ಲಿ ದಾನ ಮಾಡಿದ್ದನಂತೆ. ವಿಶ್ವವಿಖ್ಯಾತ ಕಲ್ಲಿನ ರಥ ಇರುವುದು, ಪ್ರಸನ್ನ ವಿರೂಪಾಕ್ಷ ದೇವಾಲಯದ ಅಂಗಳದಲ್ಲಿಯೇ.

Advertisement

 

ಹಿಂದೊಮ್ಮೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ಈಗ ಒಂದು ಪ್ರಮುಖ ಪ್ರವಾಸಿ ಕೇಂದ್ರ. ಇಲ್ಲಿ ಗತಕಾಲವನ್ನು ಕಣ್ಣ ಮುಂದೆ ತರುವ ಸಾಕಷ್ಟು ದೇವಸ್ಥಾನಗಳು, ಸ್ಮಾರಕಗಳು ಕಾಣಸಿಗುತ್ತವೆ.  ಅವುಗಳಲ್ಲಿ ಪ್ರಸನ್ನ ವಿರೂಪಾಕ್ಷ ದೇವಾಲಯವೂ ಒಂದು. ಈ ದೇವಸ್ಥಾನವನ್ನು 14 ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ.  ಇಲ್ಲಿರುವ ವಿಗ್ರಹ, ಶಿವನ ಅವತಾರವಾದ ಪ್ರಸನ್ನ ವಿರೂಪಾಕ್ಷ ಸ್ವಾಮಿಯಾಗಿದೆ. ಹಚ್ಚ ಹಸಿರು ಬಣ್ಣದ ಸುಂದರವಾದ ಹುಲ್ಲು ಹಾಸಿನ ನಡುವೆ ಈ ದೇವಸ್ಥಾನ ನೆಲೆಗೊಂಡಿದೆ.

ಸುಮಾರು ನಾಲ್ಕು ನೂರು ವರ್ಷಗಳ ಕಾಲ ಭೂಗರ್ಭದಲ್ಲಿ ಅಡಗಿದ್ದ ಈ ದೇವಸ್ಥಾನವನ್ನು 1980ರ ದಶಕದಲ್ಲಿ ಹೊರತೆಗೆಯಲಾಗಿದೆ. ವಿಜಯನಗರ ಅರಸ ಕೃಷ್ಣದೇವರಾಯ ವ್ಯಾಪಕವಾಗಿ ದಾನ- ಧರ್ಮ ಮಾಡುವ ಮೂಲಕ ಈ ದೇವಾಲಯದ ಜೀರ್ಣೋದ್ದಾರಕ್ಕೆ ನೆರವಾದರೆಂದು ನಂಬಲಾಗಿದೆ.

ಪ್ರಸನ್ನ ವಿರೂಪಾಕ್ಷ$ದೇವಾಲಯದ ವಿಶೇಷ ಏನೆಂದರೆ, ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣಗೊಂಡಿದ್ದು, ನೆಲ ಮಟ್ಟಕ್ಕಿಂತ ಕೆಳಗೆ ಇದೆ. ದೇವಾಲಯದ ಮೇಲ್ಛಾವಣಿ ನೆಲಮಟ್ಟದಲ್ಲಿರುವುದರಿಂದ ಅಂತರ್ಜಲಕ್ಕೂ, ದೇವಾಲಯಕ್ಕೂ ನಂಟಿದೆ.  ಗರ್ಭಗುಡಿ ವರ್ಷಪೂರ್ತಿ ನೀರಿನಲ್ಲಿ ಮುಳುಗಿರುತ್ತದೆ.  ಜೂನ್‌ನಿಂದ ಆಗÓr…ವರೆಗೆ ಅಣೆಕಟ್ಟಿನಿಂದ ನೀರು ಬಿಡುವುದರಿಂದ, ದೇವಾಲಯದ ಒಳಗೆ ನೀರಿನ ಮಟ್ಟವು ಏರುವುದರಿಂದ, ಮಂಟಪಗಳೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿರುತ್ತವೆ.  ಈ ಕಾರಣದಿಂದಾಗಿ, ಮಳೆಗಾಲದಲ್ಲಿ ದೇವಾಲಯದ ಹೆಚ್ಚಿನ ಭಾಗಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. 

Advertisement

ದೇವಾಲಯದ ವಾಸ್ತುಶಿಲ್ಪ 
ಪ್ರಸನ್ನ ವಿರೂಪಾಕ್ಷ$ ದೇವಾಲಯವು ದೊಡ್ಡ ಆವರಣ ಹೊಂದಿದ್ದು, ದೇವಾಲಯದ ಅಂಗಳದಲ್ಲಿ ನೀರಿನ ಕಾಲುವೆ ಇದೆ. ಈ ದೇವಾಲಯವು ಸಮತಟ್ಟಾದ ಛಾವಣಿ, ಮುಖ್ಯ ಗೋಪುರವನ್ನು ಹೊಂದಿದೆ. ಮುಖ್ಯ ಗೋಪುರದಿಂದ ಕಂಬದ ಕೋಣೆಗೆ ಸಾಗಲು ಹಾದಿಗಳಿವೆ.  

ಮಹಾಮಂಟಪ, ಅರ್ಧ ಮಂಟಪ ಹಾಗೂ ಗರ್ಭಗುಡಿಯನ್ನು ಈ ದೇಗುಲ ಹೊಂದಿದೆ. ಗರ್ಭಗುಡಿಯಲ್ಲಿ ಶಿವ ಲಿಂಗರೂಪದಲ್ಲಿ ನೆಲೆಸಿದ್ದಾನೆ. ಅದರ ಮುಂದೆ ನಂದಿ ವಿರಾಜಮಾನನಾಗಿದ್ದಾನೆ.  ದೇವಾಲಯದೊಳಗಿನ ಕಂಬಗಳಲ್ಲಿ ಅನೇಕ ಕೆತ್ತನೆಗಳನ್ನು ಕಾಣಬಹುದಾಗಿದೆ. ಹಿಂದೆ ರಾಜಮನೆತನದವರು ಈ ದೇವಾಲಯವನ್ನು ಖಾಸಗಿ ಸಮಾರಂಭಗಳಿಗಾಗಿ ಬಳಸುತ್ತಿದ್ದರಂತೆ.  ಈ ದೇವಸ್ಥಾನದ ಆವರಣದಲ್ಲಿರುವ ವಿಶ್ವವಿಖ್ಯಾತ ಕಲ್ಲಿನ ರಥ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದು.  ಕಲ್ಲಿನಲ್ಲಿ ಕೆತ್ತಲಾಗಿರುವ ಶಿಲ್ಪಕಲಾಕೃತಿಗಳು, ಕಲ್ಲಿನ ರಥ ನಿಜಕ್ಕೂ ಒಂದು ಅಪರೂಪ, ಅದು³ತ, ಶಿಲ್ಪಕಲಾ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. 

ತಲುಪುವ ಮಾರ್ಗ 
 ವಿಮಾನದ ಮೂಲಕ ಬರುವವರಿಗೆ ಹಂಪಿಗೆ ಸಮೀವಿರುವ   ಬಳ್ಳಾರಿಯ ಜಿಂದಾಲ್‌ ವಿಮಾನ ನಿಲ್ದಾಣ. ಇದು ಅಲ್ಲಿಂದ ಬಸ್‌ ಅಥವಾ ಟ್ಯಾಕ್ಸಿ ಮೂಲಕ ಹಂಪಿ ತಲುಪಬಹುದು.  ರೈಲಿನಲ್ಲಿ ಹೋಗುವುದಾದರೆ ಹೊಸಪೇಟೆ ಜಂಕ್ಷನ್‌ ನಲ್ಲಿ ಇಳಿಯಬೇಕು. ಇದು ಹಂಪಿಯಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಬಸ್‌ ಮೂಲಕ ಹೋಗುವುದಾದರೆ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯ.

ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next