ಹೊಸಪೇಟೆ: ದೇಶದಲ್ಲಿ ಕೊರೊನಾ ಲಸಿಕೆ100 ಕೋಟಿ ಗಡಿ ದಾಟಿದ ಹಿನ್ನೆಲೆಯಲ್ಲಿವಿಶ್ವ ವಿಶ್ವಪರಂಪರೆ ತಾಣ ಹಂಪಿ ಸ್ಮಾರಕಗಳಿಗೆಗುರುವಾರ ರಾತ್ರಿ ವಿದ್ಯುದೀಪಾಲಂಕಾರ ಮಾಡಲಾಯಿತು.
ವಿದ್ಯುತ್ ದೀಪಗಳಿಂದಕಂಗೊಳಿಸುತ್ತಿದ್ದ ಹಂಪಿ ಸ್ಮಾರಕಗಳನ್ನು ಕಂಡುಪ್ರವಾಸಿಗರು ಕೂಡ ಖುಷಿಯಾದರು.ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನಯಶಸ್ವಿಯಾದ ಹಿನ್ನೆಲೆಯಲ್ಲಿ ಸ್ಮಾರಕಗಳಿಗೆವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ದೇಶದಲ್ಲಿ 100 ಕೋಟಿಗೂ ಅಧಿ ಕ ವ್ಯಾಕ್ಸಿನ್‌ನೀಡಿದ ಹಿನ್ನಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಸ್ಮಾರಕಗಳಿಗೆ ವಿದ್ಯುತ್‌ದೀಪಾಲಂಕಾರ ಮಾಡಿತ್ತು. ಹಂಪಿಯವಿಜಯ ವಿಠಲ ದೇವಾಲಯ, ಆನೆಲಾಯ,ಸಂಗೀತ ಮಂಟಪ, ಕಡಲೆಕಾಳು ಗಣೇಶಮಂಟಪಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ವಿಜಯ ವಿಠಲ ದೇವಾಲಯದ ಆವರಣದಲ್ಲಿನ ಕಲ್ಲಿನತೇರಿಗೆ ದೀಪಾಲಂಕಾರ ಮಾಡಲಾಗಿತ್ತು.ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದಹಂಪಿ ಸ್ಮಾರಕಗಳು ಕಂಗೊಳಿಸಿದವು.ಹಂಪಿ ಸ್ಮಾರಕಗಳು ದೀಪಾಲಂಕಾರದಲ್ಲಿ ಝಗಮಗಿಸಿದವು.
ಹಂಪಿ ಉತ್ಸವದಲ್ಲಿಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರಮಾಡಲಾಗುತ್ತದೆ. ಲಸಿಕಾ ಅಭಿಯಾನಯಶಸ್ವಿ ಹಿನ್ನೆಲೆಯಲ್ಲಿ ಸ್ಮಾರಕಗಳಿಗೆ ಎರಡನೇಬಾರಿ ದೀಪಾಲಂಕಾರ ಮಾಡಲಾಯಿತು.