ಆಲೂರು : ಕೆಲವು ರಾಜಕೀಯ ಮುಖಂಡರು ತಾಲ್ಲೂಕಿನ ಹಂಪನಕುಪ್ಪೆ ಗ್ರಾಮವನ್ನು ಕಿರಗಡಲು ಗ್ರಾಮದ ದಾಖಲೆಯಿಂದ ತಗೆದು ಕಂದಾಯ ಗ್ರಾಮವನ್ನಾಗಿ ಮಾಡಲು ಹೊರಟಿರುವುದನ್ನ ವಿರೋಧಿಸಿ ಕಿರಗಡಲು ಗ್ರಾಮಸ್ಥರು ತಹಶಿಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು.
ಕದಾಳು ಗ್ರಾಮ ಪಂಚಾಯಿತಿ ಸದಸ್ಯ ಶಾಂತಪ್ಪ ಮಾತನಾಡಿ ಹಿಂದಿನಿಂದಲೂ ಹಂಪನಕುಪ್ಪೆ,ಸಿಂಗೇನಹಳ್ಳಿ ಕೊಪ್ಪಲು,ಹಾಗೂ ದೇವರುಮನೆ ಕೊಪ್ಪಲು ಕಿರಗಡಲು ಗ್ರಾಮದ ದಾಖಲೆ ಗ್ರಾಮಗಳಾಗಿದ್ದು ಕಿರಗಡಲು ಗ್ರಾಮದಲ್ಲಿರುವ ಪಂಚಾಲಿಂಗೇಶ್ವರ ಸ್ವಾಮಿ ಈ ಗ್ರಾಮಗಳ ಅರಾದ್ಯ ದೈವವಾಗಿದ್ದು ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬದಲು ಜನಸಂಖ್ಯೆ ಅಧಾರದ ಮೇಲೆ ತಾಲ್ಲೂಕಿನ ಕಿರಗಡಲು ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿತ್ತು ಇದನ್ನು ಸೈರಿಸಿಕೊಳ್ಳಲಾಗದ ಕೆಲವು ರಾಜಕೀಯ ಮುಖಂಡರು ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾಡುವ ಉದ್ದೇಶದಿಂದ ಹಂಪನಕುಪ್ಪೆ ಗ್ರಾಮವನ್ನು ಕಂದಾಯ ಗ್ರಾಮ ಮಾಡಿ ಕಿರಗಡಲು ಗ್ರಾಮದ ದಾಖಲೆಯಿಂದ ಕಿತ್ತು ಹಾಕಲು ಹೊರಟಿರುವುದು ಸರಿಯಾದ ಕ್ರಮವಲ್ಲ ಇದು ಯಥಾಸ್ಥತಿ ಮುಂದುವರಿಯಬೇಕು ಎಂದರು.
ಗ್ರಾಮದ ಹಿರಿಯ ಮುಖಂಡ ಕಿರಣ್ ಕಿರಗಡಲು ಮಾತನಾಡಿ ನೂರಾರು ವರ್ಷಗಳಿಂದ ಹಂಪನಕುಪ್ಪೆ ಗ್ರಾಮವನ್ನ ಕಿರಗಡಲು ಗ್ರಾಮದ ದಾಖಲೆಯಿಂದ ಕಿತ್ತಾಕಿ ಕಂದಾಯ ಗ್ರಾಮವನ್ನು ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಇದು ರಾಜಕೀಯ ಗಿಮಿಕ್ ಕಿರಗಡಲು ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ಹಾಗೆಯೇ ಉಳಿಯಬೇಕು ಹಂಪನಕುಪ್ಪೆ ಹಾಗೂ ಕಿರಗಡಲು ಗ್ರಾಮಗಳು ಸಹೋದರ ಸಂಬಂದಗಳಂತದ್ದು ಅವುಗಳನ್ನು ಬೇರ್ಪಡಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.
ಇದನ್ನೂ ಓದಿ : ಮಹಿಳೆ, ಪುರಷ ರಿಗೆ ಸಮಾನ ಅವಕಾಶ ಕೊಟ್ಟಿದ್ದೆ ಸಾವಿತ್ರಿ ಬಾಯಿ ಫುಲೆ : ಕೆ. ಮಲ್ಲಿಕಾರ್ಜುನ
ಗ್ರಾಮದ ಹಿರಿಯ ಮುಖಂಡ ರುದ್ರೇಗೌಡ ಮಾತನಾಡಿ ದೇವರುಮನೆ ಕೊಪ್ಪಲು,ಸಿಂಗೇನಹಳ್ಳಿ,ಹಾಗೂಹಂಪನಕುಪ್ಪೆ ಗ್ರಾಮಗಳು ಕಿರಗಡಲು ಗ್ರಾಮದ ದಾಖಲೆಯಲ್ಲಿದ್ದು ಹಂಪನಕುಪ್ಪೆ ಗ್ರಾಮವನ್ನು ಕಂದಾಯ ಗ್ರಾಮ ಮಾಡಿ ಕಿರಗಡಲು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪಾಳ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾಡಲು ಹುನ್ನಾರ ಮಾಡಿದ್ದಾರೆ ಇದು ಸರಿಯಾದುದಲ್ಲ ತಕ್ಷಣ ಶಾಸಕರು ಯಥಾಸ್ಥಿತಿ ಕಾಪಾಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮುಂದಿನ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಾಂತಪ್ಪ,ರುದ್ರೇಗೌಡ,ಕಿರಣ್,ಆಶೋಕ್,ಶ್ರೀಧರ್,ಈರೇಗೌಡ,ಮಲ್ಲೇಶ್ ಗೌಡ,ಹಾಗೂ ಇತರರು ಉಪಸ್ಥಿತರಿದ್ದರು.