ಜೆರುಸಲೇಂ: ಸಂಘರ್ಷ ಪೀಡಿತ ಗಾಜಾಪಟ್ಟಿಯಲ್ಲಿ ಆಸ್ಪತ್ರೆಗಳ ಹೆಸರು ಹೇಳಿಕೊಂಡು ಹಮಾಸ್ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎನ್ನುವ ಇಸ್ರೇಲ್ ವಾದಕ್ಕೆ ಪುಷ್ಟಿ ಸಿಕ್ಕಿದೆ. ಗಾಜಾದ ಅತಿ ದೊಡ್ಡ ಆಸ್ಪತ್ರೆ ಅಲ್-ಶಿಫಾ ಹಾಗೂ ಇತರ ಆಸ್ಪತ್ರೆ ಗಳಲ್ಲಿ ಶೋಧದ ವೇಳೆ ರೈಫಲ್‌ಗಳು, ಮದ್ದು ಗುಂಡುಗಳು ಪತ್ತೆಯಾಗಿವೆ.
ಅಲ್- ಶಿಫಾ ಆಸ್ಪತ್ರೆಯ ಎಂಆರ್‌ಐ ಲ್ಯಾಬ್‌ನಲ್ಲಿ ಬ್ಯಾಗ್ ಒಂದು ಪತ್ತೆಯಾಗಿದ್ದು ಅದರಲ್ಲಿ ಹಮಾಸ್ ಉಗ್ರ ಸಂಘಟನೆಯ ಸಮ ವಸ್ತ್ರ, ಗನ್, ಬುಲೆಟ್ಸ್ ಸಿಕ್ಕಿದೆ. ಮತ್ತೂಂ ದೆಡೆ ಲ್ಯಾಪ್‌ಟಾಪ್ ಒಂದು ಸಿಕ್ಕಿದ್ದು ಅದರಲ್ಲಿ ಇಸ್ರೇಲಿನ ಒತ್ತೆಯಾಳುಗಳ ಫೋಟೋ ಗಳಿರು ವುದನ್ನೂ ಇಸ್ರೇಲ್ ಬಹಿರಂಗ ಪಡೆಸಿದೆ.
ಅಲ್ ಶಿಫಾ ಆಸ್ಪತ್ರೆ ಸೇರಿದಂತೆ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಆಸ್ಪತ್ರೆಗಳ ಮೇಲೂ ಇಸ್ರೇಲ್‌ಪಡೆಗಳು ಬಿರುಸಿನ ದಾಳಿ ನಡೆಸಿದ್ದು, ನೆಲ ಮಾಳಿಗೆಯನ್ನೂ ಬಿಡದಂತೆ ಇಂಚಿಂಚೂ ಶೋಧ ನಡೆಸಿವೆ.
ದಕ್ಷಿಣ ಗಾಜಾದತ್ತ ಇಸ್ರೇಲ್ ಕಾರ್ಯಾಚರಣೆ: ದಕ್ಷಿಣ ಗಾಜಾದಲ್ಲಿರುವ ನಾಗರಿಕರನ್ನು ಕೂಡಲೇ ಪ್ರದೇಶ ತೊರೆಯುವಂತೆ ಇಸ್ರೇಲ್ ಪಡೆಗಳು ಕೇಳಿವೆ. ಉಗ್ರರನ್ನು ಎಲ್ಲಿದ್ದರೂ ಮಟ್ಟಹಾಕುತ್ತೇವೆ. ಇದೀಗ ದಕ್ಷಿಣ ಗಾಜಾದಲ್ಲಿ ಅಡಗಿದ್ದರೂ ಬಿಡುವುದಿಲ್ಲ ಅದಕ್ಕೂ ಮುನ್ನ ನಾಗರಿಕರು ಪಾರಾಗಿ ಎಂದು ಹೇಳಿದೆ.
ಇನ್ನೊಂದೆಡೆ ಜಪಾನ್ ರಾಜಧಾನಿ ಟೋಕ್ಯೋದಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಮುಂದೆ ಹಾಕಲಾಗಿದ್ದ ತಾತ್ಕಾಲಿಕ ತಡೆ ಗೋಡೆಗೆ ಕಾರು ಗುದ್ದಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಬಂಧಿಸಲಾಗಿದೆ.
ಹಮಾಸ್ ರಾಜಕೀಯ ನಾಯಕನ ನಿವಾಸ ಧ್ವಂಸ
ಹಮಾಸ್‌ನ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಎಂಬಾತನ ನಿವಾಸದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಬೇರೆ-ಬೇರೆ ದೇಶಗಳಲ್ಲಿರುವ ಹಮಾಸ್‌ಗೂ ಪ್ರಮುಖ ನಾಯಕ ಎನ್ನಲಾಗಿರುವ ಆತನ ನಿವಾಸವನ್ನು ಉಗ್ರರ ಮೂಲಸೌಕರ್ಯವನ್ನಾಗಿ ಬಳಸಲಾಗುತ್ತಿತ್ತು ಅದಕ್ಕಾಗೇ ಕಟ್ಟಡ ಪುಡಿಗಟ್ಟಿದ್ದೇವೆ ಎಂದು ಧ್ವಂಸದ ವೀಡಿಯೋವನ್ನೂ ಇಸ್ರೇಲ್ ಹಂಚಿಕೊಂಡಿದೆ.