Advertisement

ಭಟ್ಕಳಮಕ್ಕಿ ಜಿರ್ಬ ಜೆಡ್ಡು ನಿವಾಸಿಗಳಿಗೆ ರಸ್ತೆ ಸಂಪರ್ಕ

07:15 AM Sep 10, 2017 | |

ಕುಂದಾಪುರ:  ಹಳ್ಳಿಹೊಳೆ ಭಟ್ಕಳಮಕ್ಕಿ ಜಿರ್ಬ ಜೆಡ್ಡು ನಿವಾಸಿಗಳಿಗೆ ರಸ್ತೆ ಸಂಪರ್ಕ ಒದಗಿಸುವಂತೆ ಕೋರಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಕಮಿಷನರ್‌ ಅವರಿಗೆ ಮನವಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಕುಂದಾಪುರ ತಹಶೀಲ್ದಾರ್‌ ಜಿ.ಎಂ. ಬೋರ್ಕರ್‌ ಅವರು ಹಳ್ಳಿಹೊಳೆಗೆ ಭೇಟಿ ನೀಡಿ ರಸ್ತೆ ಸಂಪರ್ಕ ಒದಗಿಸಬೇಕಾದ ಸ್ಥಳ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ  ಅವರು ಬಡ ದಲಿತ ಕುಟುಂಬದ ಪೋಲಿಯೋ ರೋಗ ಪೀಡಿತ ಹನ್ನೊಂದು ವರ್ಷದ ಬಾಲಕ ಹಾಗೂ ಎರಡು ಕಾಲಿನ ಸ್ವಾಧೀನವನ್ನು ಕಳೆದುಕೊಂಡು ಬದುಕುತ್ತಿರುವ ವಯೋವೃದ್ಧ ದಲಿತ ಮಹಿಳೆಯ ಯೋಗಕ್ಷೇಮ ವಿಚಾರಿಸಿದರು. ಈ ಭಾಗದ ಜನರಿಗೆ ರಸ್ತೆ ಸಂಪರ್ಕವೇ ಇಲ್ಲದಿರುವುದರಿಂದ ಕಾಮಗಾರಿ ಅಧ‌ìಕ್ಕೆ ನಿಂತಿರುವ  ಗ್ರಾ.ಪಂ.ನಿಂದ ಮಂಜೂರಾದ ಮನೆ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಹೋಗಲು ಎದುರಿಸುತ್ತಿರುವ ಸಮಸ್ಯೆ ಹಾಗೂ ಈ ಪರಿಸರದ ಜನರು ದಿನ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕರ್ನಾಟಕ ರಾಜ್ಯ ದ.ಸಂ.ಸ.ಯ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಅವರು ತಹಸೀಲ್ದಾರರ ಗಮನಕ್ಕೆ ತಂದರು.

ಸಮಸ್ಯೆಗಳ ನೈಜ ಪರಿಸ್ಥಿಯನ್ನು ಮನಗಂಡ ತಹಶೀಲ್ದಾರರು ಸಹಾಯಕ ಕಮಿಷನರೊಂದಿಗೆ ಚರ್ಚಿಸಿ ಅತೀ ಶೀಘ್ರದಲ್ಲಿ ರಸ್ತೆ ಸಂಪರ್ಕ ಒದಗಿಸಲು ಕಾನೂನಾತ್ಮಕವಾದ ಎಲ್ಲಾ ರೀತಿಯ ಪ್ರಯತ್ನ ಕೈಗೊಳ್ಳುವುದಾಗಿ ತಿಳಿಸಿದರು. ಈಗಾಗಲೆ ಸಹಾಯಕ ಕಮಿಷನರ್‌ ನೇತೃತ್ವದಲ್ಲಿ ರಸ್ತೆ ಸಂಪರ್ಕ ಒದಗಿಸಲು ಸರ್ವೆ ನಡೆಸಿ ಸ್ಥಳ ಗುರುತಿಸಲಾಗಿದೆ. ರಸ್ತೆ ನಿರ್ಮಿಸಲು ಆಕ್ಷೇಪಣೆ ವ್ಯಕ್ತಪಡಿಸುತ್ತಿರುವವರ ಜಮೀನಿನೊಂದಿಗೆ ಸರಕಾರಿ ಹೆಚ್ಚುವರಿ ಜಮೀನು ಇರುವುದು ಸರ್ವೆ ಅಳತೆಯಿಂದ ಗೊತ್ತಾಗಿದ್ದು ಮಾನವೀಯ ನೆಲೆಯಲ್ಲಿ ಸಹಕರಿಸುವಂತೆ ತಿಳಿಸಲಾಗಿದೆ. ಒಪ್ಪದಿದ್ದಲ್ಲಿ ಕಾನೂನು ರೀತಿ ಕ್ರಮ ಜರುಗಿಸಿ ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಒದಗಿಸಲಾಗುವುದು ಎಂದರು ತಿಳಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಸರ್ವೆ ಸೂಪರ್‌ ವೈಸರ್‌ ಪುರುಷೋತ್ತಮ್‌, ಭೂ ಮಾಪಕ ರಜನೀಷ್‌, ತಹಶೀಲ್ದಾರ್‌  ಸಹಾಯಕ ಸುಬ್ರಹ್ಮಣ್ಯ, ಸ್ಥಳಿಯ ಹೋರಾಟಗಾರ ಶೇಖರ, ರಂಜನ್‌ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next