Advertisement
ಈ ವಾರ ನೆತನ್ಯಾಹು ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ನ್ಯಾಯಾಂಗ ಸುಧಾರಣೆಗಳಿಗೆ ಚಾಲನೆ ನೀಡಲಿದೆ. ಈ ಸುಧಾರಣೆಗಳು ಇಸ್ರೇಲ್‌ನ ಪ್ರಜಾಪ್ರಭುತ್ವವನ್ನು ತೀವ್ರವಾಗಿ ದುರ್ಬಲಗೊಳಿಸಲಿದೆ ಎನ್ನುವುದು ಜನರ ಆತಂಕ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಯಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಏನಾದರಾಗಲೀ ಸುಧಾರಣೆ ಶತಃಸಿದ್ಧ ಎಂದು ಪಟ್ಟುಹಿಡಿದು ಕುಳಿತಿದೆ.
ಜನರಿಗೆ ಆತಂಕ ಮೂಡಿಸಿರುವುದು ಎರಡು ಮುಖ್ಯ ಸುಧಾರಣೆಗಳು. ನ್ಯಾಯಾಧೀಶರ ಆಯ್ಕೆ ಸಮಿತಿಯಲ್ಲಿ ಸರ್ಕಾರಕ್ಕೆ ಇನ್ನು ಗರಿಷ್ಠ ಹಿಡಿತವಿರುತ್ತದೆ. ಹಾಗೆಯೇ ಇಸ್ರೇಲ್‌ನ ಮೂಲಭೂತ ಕಾನೂನುಗಳಿಗೆ ಮಾಡುವ ಯಾವುದೇ ತಿದ್ದುಪಡಿಯನ್ನು ರದ್ದುಪಡಿಸುವ ಅಧಿಕಾರ ಇನ್ನು ಅಲ್ಲಿನ ಸರ್ವೋಚ್ಚ ಪೀಠಕ್ಕೆ ಇರುವುದಿಲ್ಲ. ಇದನ್ನು ಜಾರಿ ಮಾಡುವುದಕ್ಕೆ ನೆತನ್ಯಾಹು ಸರ್ಕಾರ ಹೊರಟಿದೆ.