Advertisement
ಓಂಕಾರೇಶ್ವರಿ 2ನೇ ಅಡ್ಡರಸ್ತೆಯಲ್ಲಿ ಶೋಭಾ ಎಂಬುವವರ ಮನೆಯಲ್ಲಿ ಮುಂಜಾನೆ ಸುಮಾರು 4:30ರ ವೇಳೆಗೆ ಮನೆ ಮಂದಿ ಮಲಗಿದ್ದ ಸಮಯದಲ್ಲಿ ಮನೆಯ ಹಂಚುಗಳು ಬೀಳುತ್ತಿದ್ದ ಶಬ್ದಗಳಿಗೆ ಎಚ್ಚೆತ್ತು ಬೆಳಕು ಹಾಕಿ ನೋಡುವಾಗ ಮನೆಯ ಹಂಚು- ಪಕ್ಕಾಸುಗಳು ಒಂದೊಂದೇ ಶಿಥಿಲಗೊಂಡು ಕೆಳಗೆ ಬೀಳುತ್ತಿರುವುದನ್ನು ಕಂಡು ಭಯಬೀತರಾದ ಕುಟುಂಬ ತಕ್ಷಣವೇ ಮಕ್ಕಳೂಂದಿಗೆ ಹೊರಗೆ ಬರುತ್ತಿದ್ದ ಸಂದರ್ಭ ಒಂದೇ ಬಾರಿ ಮನೆಯ ಭಾಗಶಃ ಛಾವಣಿ ಕುಸಿದು ಬಿದ್ದಿದ್ದು ಮನೆಮಂದಿಯನ್ನು ರಕ್ಷಿಸುವಷ್ಟರಲ್ಲಿ ಸುಮಾರು 70 ವರ್ಷ ಪ್ರಾಯದ ಉಮ್ಮಕ್ಕ ಅವರ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಅವರು ಗಂಭೀರವಾಗಿ ಗಾಯಗೊಂಡರು.
Related Articles
Advertisement
ಅವಘಡದಿಂದಾಗಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗ್ರಾಮಕರಣಿಕ ಮೋಹನ್ ಸಹಾಯಕ ಪುರುಷೋತ್ತಮ್ ಅವರು ಸ್ಥಳಕ್ಕಾಗಮಿಸಿ ವರದಿ ಸಂಗ್ರಹಿಸಿದ್ದಾರೆ. ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಸದಸ್ಯರುಗಳಾದ ಮೋಹನ್‌ದಾಸ್, ಅನಿಲ್ ಸೀತಾರಾಮ್, ಜ್ಯೋತಿ ಕುಲಾಲ್, ವಿನೋದ್ ಎಸ್. ಸಾಲ್ಯಾನ್ ಅವರು ಸ್ಥಳೀಯರೊಂದಿಗೆ ತಾತ್ಕಾಲಿಕ ಪರಿಹಾರ ನೀಡಲು ಶ್ರಮಿಸಿದ್ದಾರೆ.