ಹೊಸದಿಲ್ಲಿ: ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್-ಎಲ್+ಕ್ಯಾರ್(38)+ಟಿ ಒಕ್ಕೂಟಕ್ಕೆ 5 ರಾಕೆಟ್ ಅಭಿವೃದ್ಧಿಪಡಿಸುವ ಅವಕಾಶ ಲಭ್ಯವಾಗಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‌ಎಸ್‌ಐಎಲ್)
ನೊಂದಿಗೆ 860 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಮೂಲಕ ಎಚ್‌ಎಎಲ್ ಕಂಪೆನಿಯು ಪೂರ್ಣ ಪ್ರಮಾಣದಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್ (ಪಿಎಸ್‌ಎಲ್‌ವಿ) ಉತ್ಪಾದನ ರಂಗಕ್ಕೆ ಪ್ರವೇಶಿಸಿದಂತಾಗಿದೆ.
ಒಪ್ಪಂದದ ಪ್ರಕಾರ, ಎಚ್‌ಎಎಲ್ 5 ಪಿಎಸ್‌ಎಲ್‌ವಿ ರಾಕೆಟ್ ನಿರ್ಮಿಸಲಿದೆ. 2 ವರ್ಷಗಳೊಳಗಾಗಿ ಮೊದಲ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಪಾಲುದಾರರೊಂದಿಗೆ ಸೇರಿ ಸಂಪೂರ್ಣವಾಗಿ ಜಿಎಸ್‌ಎಲ್‌ವಿ-ಎಂಕೆ 3 ರಾಕೆಟ್ ಅನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನೂ ಎನ್‌ಎಸ್‌ಐಎಲ್ ಹಾಕಿಕೊಂಡಿದೆ.
ಶೇ.8ರ ಪಾಲು ಹೊಂದುವ ಗುರಿ: ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಪ್ರಸ್ತುತ ಭಾರತದ ಬಾಹ್ಯಾಕಾಶ ವಲಯದ ಪಾಲು ಶೇ.2ರಷ್ಟಿದೆ. ಇಸ್ರೋ ಜತೆ ಖಾಸಗಿ ವಲಯವೂ ಕೈಜೋಡಿಸಿ ಶ್ರಮಪಟ್ಟರೆ ಇದನ್ನು ಶೇ.8ಕ್ಕೇರಿಸಬಹುದಾಗಿದೆ ಎಂದು ಇಂಡಿಯನ್ ನ್ಯಾಶನಲ್ ಸ್ಪೇಸ್ ಪ್ರೊಮೋಶನ್ ಆ್ಯಂಡ್ ಆಥರೈಸೇಶನ್ ಸೆಂಟರ್ ಮುಖ್ಯಸ್ಥ ಪವನ್ ಕುಮಾರ್ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ದಲ್ಲೇ ಹೊಸ ಬಾಹ್ಯಾಕಾಶ ನೀತಿ ಅನಾವರಣ ಗೊಳ್ಳಲಿದ್ದು, ಖಾಸಗಿ ಸಂಸ್ಥೆಗಳು ಎದುರಿಸು ತ್ತಿರುವ ಅಡ್ಡಿ ಹಾಗೂ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರ ಒದಗಿಸಲಾಗುತ್ತದೆ.