Advertisement

ಎಚ್‌ಎಎಲ್‌ ಯುದ್ಧ ವಿಮಾನ ಮೊದಲ ಬಾರಿಗೆ ಪ್ರದರ್ಶನ 

01:00 PM Feb 11, 2023 | Team Udayavani |

ಬೆಂಗಳೂರು: ಪ್ರತಿಷ್ಠಿತ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ., (ಎಚ್‌ಎಎಲ್‌) ಇದೇ ಮೊದಲ ಬಾರಿಗೆ “ಏರೋ ಇಂಡಿಯಾ ಶೋ- 2023’ರಲ್ಲಿ ತರಬೇತಿ ಯುದ್ಧ ವಿಮಾನ “ಹಿಂದೂಸ್ತಾನ್‌ ಲೀಡ್‌ ಇನ್‌ ಫೈಟರ್‌ ಟ್ರೈನರ್‌- 42′ (ಎಚ್‌ಎಲ್‌ಎಫ್ಟಿ) ಪ್ರದರ್ಶಿಸಲಿದೆ.

Advertisement

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಮುಂದಿನ ತಲೆಮಾರಿನ ಸೂಪರ್‌ಸಾನಿಕ್‌ ತರಬೇತಿ ಯುದ್ಧವಿಮಾನವು “ಆತ್ಮನಿರ್ಭರ’ ಪರಿಕಲ್ಪನೆ ಅಡಿ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಲಿದೆ. ಸಂಪೂರ್ಣ ಸಾಮರ್ಥ್ಯದೊಂದಿಗೆ ಇದೇ ಮೊದಲ ಬಾರಿಗೆ ಇದು ಪ್ರದರ್ಶನ ನೀಡುತ್ತಿದೆ.

ಈ ಎಚ್‌ಎಲ್‌ಎಫ್ಟಿ-42 ಎಲೆಕ್ಟ್ರಾನಿಕ್‌ ವಾರ್‌ಫೇರ್‌, ಇನ್‌ಫ್ರಾರೆಡ್‌ ಸರ್ಚ್‌ ಆಂಡ್‌ ಟ್ರ್ಯಾಕ್‌ (ಐಆರ್‌ಎಸ್‌ಟಿ) ಮತ್ತಿತರ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇದರ ಜತೆಗೆ ಆತ್ಮನಿರ್ಭರ ಪರಿಕಲ್ಪನೆಯಲ್ಲಿ “ಪ್ರಚಂಡ’ ಹೆಲಿಕಾಪ್ಟರ್‌ ತಂಡ ಸೇರಿದಂತೆ ವಿವಿಧ ಪ್ರಕಾರಗಳ 15 ಹೆಲಿಕಾಪ್ಟರ್‌ಗಳ ಪ್ರದರ್ಶನ ಕೂಡ ಈ ಬಾರಿಯ “ಏರೋ ಇಂಡಿಯಾ ಶೋ’ದ ಪ್ರಮುಖ ಆಕರ್ಷಣೆ ಆಗಿರಲಿದೆ. ಇದರಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌), ಹಗುರ ಯುದ್ಧ ವಿಮಾನ (ಎಲ್‌ಸಿಎಚ್‌), ಲಘು ಬಹುಪಯೋಗಿ ಹೆಲಿಕಾಪ್ಟರ್‌ (ಎಲ್‌ಯುಎಚ್‌) ಹೆಲಿಕಾಪ್ಟರ್‌ ಗಳು ಇರಲಿವೆ. ಇನ್ನು ಎರಡು ಆಸನವುಳ್ಳ ಲಘು ಯುದ್ಧ ವಿಮಾನ (ಎಲ್‌ಸಿಎ), ಹಾಕ್‌- ಐ, ಇಂಟರ್‌ಮೀಡಿಯಟ್‌ ಜೆಟ್‌ ಟ್ರೈನರ್‌ (ಐಜೆಟಿ), ಹಿಂದೂಸ್ತಾನ್‌ ಟರ್ಬೋ ಟ್ರೈನರ್‌- 40 (ಎಚ್‌ಟಿಟಿ) ಯುದ್ಧ ವಿಮಾನ ಕೂಡ ಪ್ರದರ್ಶನ ನೀಡಲಿವೆ. ಈ ಮಧ್ಯೆ ಮಳಿಗೆಗಳಲ್ಲಿ ಎಚ್‌ಎಎಲ್‌ ಮಳಿಗೆಯು ಈವರೆಗೆ ವೈಮಾನಿಕ ಕ್ಷೇತ್ರದಲ್ಲಿ ತನ್ನ ಕೊಡುಗೆಗಳನ್ನು ಪ್ರದರ್ಶಿಸಲಿದೆ. ಎಚ್‌ಎಲ್‌ ಎಫ್ಟಿ- 42, ಎಲ್‌ಸಿಎ ಮಾಕ್‌- 2, ಭಾರತೀಯ ಬಹುಪಯೋಗಿ ಹೆಲಿಕಾಪ್ಟರ್‌ (ಐಎಂಆರ್‌ಎಚ್‌), ಎಎಲ್‌ಎಚ್‌, ದೇಶೀಯ ನಿರ್ಮಿತ ತೇಜಸ್‌, ಮಾನವರಹಿತ ವಾಹನ ಮತ್ತಿತರ ತಂತ್ರಜ್ಞಾನಗಳು ಕೂಡ ಇಲ್ಲಿ ವೀಕ್ಷಕರನ್ನು ಆಕರ್ಷಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಸುಧಾರಿತ ಲಘು ಹೆಲಿಕಾಪ್ಟರ್‌ ಮಾರಿಷಸ್‌ಗೆ ಹಸ್ತಾಂತರ : ಎಚ್‌ಎಎಲ್‌ ಯಶಸ್ವಿಯಾಗಿ ತಯಾರಿಸಿದ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಅನ್ನು ಶುಕ್ರವಾರ ಮಾರಿಷಿಸ್‌ಗೆ ಹಸ್ತಾಂತರಿಸಿತು. ಮಾರಿಷಿಸ್‌ ಸರ್ಕಾರದ ಹೆಲಿಕಾಪ್ಟರ್‌ ವಿಭಾಗದಲ್ಲಿ ಎಚ್‌ ಎಎಲ್‌ನ ಪ್ರಧಾನ ವ್ಯವಸ್ಥಾಪಕ ನಿಖೀಲ್‌ ದ್ವಿವೇದಿ ಎಎಲ್‌ಎಚ್‌ಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಮಾರಿಷಿಸ್‌ ಪೊಲೀಸ್‌ ಆಯುಕ್ತ ಎ.ಕೆ. ದೀಪ್‌ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ಎಚ್‌ಎಎಲ್‌ ನ ನಿರ್ದೇಶಕ (ಕಾರ್ಯಾಚರಣೆ) ಇ.ಪಿ. ಜಯದೇವ ಇತರರಿದ್ದರು.

Advertisement

ಈ ವೇಳೆ ಮಾತನಾಡಿದ ಇ.ಪಿ. ಜಯದೇವ, “ನಿಗದಿತ ಅವಧಿಗೂ ಮೊದಲೇ ಎಎಲ್‌ಎಚ್‌ ಅನ್ನು ಮಾರಿಷಿಸ್‌ಗೆ ಹಸ್ತಾಂತರಿಸಲಾಗಿದೆ. ರಕ್ಷಣಾ ರಫ್ತು ವಿಸ್ತರಿಸುವುದು ಭಾರತದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ಮಾರಿಷಿಸ್‌ಗೆ ಎಎಲ್‌ಎಚ್‌ ಹಸ್ತಾಂತರ ಅದರ ಒಂದು ಭಾಗವಾಗಿದೆ. ಈ ಮೂಲಕ ನೆರೆ ರಾಷ್ಟ್ರಗಳೊಂದಿಗಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next