Advertisement

Replace; ಮಾಲ್ದೀವ್ಸ್‌ನಲ್ಲಿ ಸೈನಿಕರ ಜಾಗಕ್ಕೆ ಎಚ್‌ಎಎಲ್‌ ಸಿಬಂದಿ ನಿಯೋಜನೆ

01:41 AM May 12, 2024 | Team Udayavani |

ಮಾಲೆ: ಮಾಲ್ದೀವ್ಸ್‌ನಲ್ಲಿರುವ 76 ಸೈನಿಕರ ಬದಲಿಗೆ ಅಷ್ಟೇ ಮಂದಿ ಎಚ್‌ಎಎಲ್‌ನ ಸಿಬಂದಿಯನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ ಎಂದು ಮಾಲ್ದೀವ್ಸ್‌ ವಿದೇಶಾಂಗ ಸಚಿವ ಮೂಸಾ ಜಮೀರ್‌ ಹೇಳಿದ್ದಾರೆ. ಮಾಲ್ದೀವ್ಸ್‌ನಲ್ಲಿ ಭಾರತ ನಿಯಂತ್ರಣ ಮಾಡುತ್ತಿರುವ ಏರ್‌ಬೇಸ್‌ಗಳಲ್ಲಿ ಕೆಲಸ ಮಾಡಲು ಈ ಸಿಬಂದಿಯನ್ನು ಕಳುಹಿಸಲಾಗಿದೆ.

Advertisement

ಆರೋಗ್ಯ ಮತ್ತು ತುರ್ತು ಸೇವೆ ಒದಗಿಸಲು ಹೆಲಿಕಾಪ್ಟರ್‌ ಮತ್ತು ಡಾರ್ನಿಯರ್‌ ವಿಮಾನಗಳನ್ನು ಭಾರತ ಮಾಲ್ದೀವ್ಸ್‌ಗೆ ನೀಡಿದೆ. ಇವುಗಳನ್ನು ನಿಯಂತ್ರಣ ಮಾಡಲು ಇಷ್ಟು ದಿನ ಸೈನಿಕರನ್ನು ನಿಯೋಜಿಸಲಾಗಿತ್ತು.  ಆದರೆ ಉಭಯ ದೇಶಗಳ ನಡುವೆ ಫೆಬ್ರವರಿಯಲ್ಲಿ ನಡೆದ ಒಪ್ಪಂದದಂತೆ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಒಪ್ಪಿಕೊಂಡಿತ್ತು. ಇದರ ಅನ್ವಯ 76 ಸೈನಿಕರನ್ನು ಮರಳಿ ಕರೆಸಿಕೊಂಡಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next