Advertisement

ಬ್ರೇಕ್‌ ಅಪ್‌ ಕೆ ಬಾದ್‌ ಈ ಹೇರ್‌ಸ್ಟೈಲ್‌ ಮಾಡಿ

03:45 AM Apr 05, 2017 | Harsha Rao |

ನಮ್ಮಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಉಡುಗೆ, ಆಭರಣಗಳನ್ನು ತೊಡುವ ಪರಿಪಾಠವಿದೆಯಷ್ಟೆ. ಮದುವೆ ಸಮಾರಂಭಕ್ಕೆ ರೇಷ್ಮೆ ಸೀರೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಕಾಟನ್‌ ಸೀರೆ, ಪಿಕ್‌ನಿಕ್‌ ಮುಂತಾದೆಡೆ ತೆರಳುವಾಗ ತ್ರೀಫೋರ್ತ್‌ ಅಥವಾ ಜೀನ್ಸ್‌ ಹೀಗೆ… ಯಾವುದೇ ಸಂಭ್ರಮವನ್ನು ಆಚರಿಸುವ ಸಲುವಾಗಿ ನಾವು ಅದಕ್ಕೆಂದೇ ಪ್ರತ್ಯೇಕ ದಿರಿಸು, ಮೇಕಪ್‌, ಕೇಶವಿನ್ಯಾಸ ಮುಂತಾದವನ್ನು ಕಾದಿರಿಸುತ್ತೇವೆ. ಅದೇ ರೀತಿ ದುಃಖ ಮತ್ತು ಕಷ್ಟಕರ ಸನ್ನಿವೇಶ ಓದಗಿದ ಸಂದರ್ಭಗಳಲ್ಲೂ ಫ್ಯಾಷನ್‌  ಬಳಕೆಗೆ ಬರುತ್ತದೆ ಎಂದರೆ ನಂಬುವಿರಾ? ಈ ವಿಚಾರ ಅಚ್ಚರಿಯೆನಿಸಿದರೂ ನಿಜ. 
ಯುವಪೀಳಿಗೆ ಎದುರಿಸುತ್ತಿರುವ ಅನೇಕ ಗಂಭೀರ ಸಮಸ್ಯೆಗಳಲ್ಲಿ ಬ್ರೇಕ್‌ಅಪ್‌ ಸಮಸ್ಯೆಯೂ ಒಂದು. ಜೀವನದಲ್ಲಿ ಪ್ರಿಯಕರ ಕೈಕೊಟ್ಟಾಗ, ಲವ್‌ ಬ್ರೇಕ್‌ಅಪ್‌ ಆದವರಿಗೆಂದೇ ಒಂದು ಕೇಶ ವಿನ್ಯಾಸ ಮುಡಿಪಾಗಿದೆ. ಅದನ್ನೇ “ಬ್ರೇಕ್‌ಅಪ್‌ ಹೇರ್‌ ಡು’ ಎಂದು ಕರೆಯುತ್ತಾರೆ.

Advertisement

ಸದ್ಯಕ್ಕೆ ಫ್ಯಾಷನ್‌ ಲೋಕದಲ್ಲಿರುವ ಟ್ರೆಂಡ್‌ ಎಂದರೆ ಈ ಬ್ರೇಕ್‌ಅಪ್‌ ಹೇರ್‌ ಡು. ಹಾಲಿವುಡ್‌ ನಟಿಯರಿಂದಾಗಿ ಈ ಕೇಶವಿನ್ಯಾಸ ಅಭಿಮಾನಿಗಳ ಫೇವರೆಟ್‌ ಆಗಿಬಿಟ್ಟಿದೆ. ಪ್ರಿಯಕರನ ಜೊತೆ ಬ್ರೇಕ್‌ಅಪ್‌ ಆದ ಕೂಡಲೆ ಹಳೆ ಸಂಬಂಧವನ್ನುಸಂಪೂರ್ಣವಾಗಿ ತೊರೆದ ಸಂಕೇತವಾಗಿ ಬ್ರೇಕ್‌ಅಪ್‌ ಹೇರ್‌ ಡು ನಿಂದ ಮೇಕ್‌ಓವರ್‌ ಮಾಡಿಕೊಂಡು ಮೂವ್‌ಆನ್‌ ಆಗುತ್ತಿ¨ªಾರೆ ತಾರೆಯರು.

ಈ ಕೇಶವಿನ್ಯಾಸದಲ್ಲಿ ಹೇರ್‌ಕಟ್‌ ಮಾತ್ರವಲ್ಲ, ಹೇರ್‌ ಕಲರ್‌ ಕೂಡ ಮಾಡಿಕೊಳ್ಳುತ್ತಿ¨ªಾರೆ. ಅದರಲ್ಲೂ ಹಿಂದೆಂದೂ ಬಳಸದೇ ಇದ್ದಂಥ ಬಣ್ಣಗಳನ್ನು ತಮ್ಮ ಕೂದಲಿಗೆ ಹಚ್ಚಿ ಟ್ರೆಂಡ್‌ ಸೆಟ್‌ ಮಾಡುತ್ತಿ¨ªಾರೆ. ಈ ವಿಷಯದಲ್ಲಿ ಪಾಪ್‌ ಗಾಯಕಿಯರಾದ ರಿಹಾನ್ನ ಮತ್ತು ಕೇಟಿ ಪೆರ್ರಿ ತುಂಬಾ ಫೇಮಸ್‌. ಗುಲಾಬಿ, ನೀಲಿ, ಕೆಂಪು, ಹಸಿರು, ನೇರಳೆ, ಹಳದಿ, ಕಪ್ಪು, ಸ್ವರ್ಣ, ಹೀಗೆ ತಲೆಕೂದಲಿನ ಬಣ್ಣಹಲವು ಬಾರಿ ಬದಲಾಯಿಸಿ¨ªಾರೆ. ಪ್ರತಿಬಾರಿ ಬ್ರೇಕ್‌ಅಪ್‌ ಆದಾಗ ಬ್ರೇಕ್‌ಅಪ್‌ ಸಾಂಗ್‌ ಬರೆದು ಹಾಡುವುದಲ್ಲದೆ ಹೊಸ ಬ್ರೇಕ್‌ಅಪ್‌ ಹೇರ್‌ ಡು ಮಾಡಿಸಿ ಫ್ಯಾಷನ್‌ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದರು.

ಕಷ್ಟಪಟ್ಟು ಬೆಳೆಸಿದ ತಲೆಕೂದಲನ್ನು ಶಾರ್ಟ್‌ ಆಗಿ ಕತ್ತರಿಸಿಬಿಟ್ಟರೆ ಅದು ಮತ್ತೆ ಉದ್ದ ಬೆಳೆಯಲು ತುಂಬಾ ಸಮಯ ಬೇಕಾಗುತ್ತದೆ. ಆದ್ದರಿಂದ ಹಲವರು ಹೇರ್‌ಕಟ್‌ ಬದಲಿಗೆ ಹೇರ್‌ಕಲರ್‌ ಆಯ್ಕೆ ಮಾಡುತ್ತಾರೆ. ಜಡೆ ಬದಲಿಗೆ ಜುಟ್ಟು, ಜುಟ್ಟು ಬದಲಿಗೆ ತುರುಬು, ತುರುಬು ಬದಲಿಗೆ ಬಾಬ್‌ ಕಟ್‌. ಹೀಗೆ ಹೊಸ ಪ್ರಯೋಗಗಳನ್ನು ಮಾಡಿ ನೋಡುತ್ತಾರೆ. 
ಹೊಸ ಜೀವನ, ಹೊಸ ಆಕಾಂಕ್ಷೆ, ಹೊಸ ಹೇರ್‌ ಡು! ಈ ಸ್ಟೈಲ್‌ ಕೇವಲ ಪ್ರಿಯಕರನ ಜೊತೆ ಬ್ರೇಕ್‌ಅಪ್‌ ಆದಾಗ ಮಾತ್ರವಲ್ಲ ಹೆರಿಗೆ ಆದ ನಂತರ, ಹೊಸ ಉದ್ಯೋಗಕ್ಕೆ ಸೇರಿದಾಗ, ಹೊಸನಗರಕ್ಕೆ ಸ್ಥಳಾಂತರ ಮಾಡಿದಾಗ, ಅಥವಾ ಹಳೆಯ ಯಾವುದೇ ವಿಚಾರವನ್ನುಮರೆತು ಹೊಸವಿಚಾರಗಳನ್ನು ಸ್ವೀಕರಿಸಲು ಹೊರಟಾಗಲೂ ಅನುಸರಿಸಬಹುದು.
ಉದ್ದ ಕೂದಲನ್ನು ಕತ್ತರಿಸಿ ಪಿಕ್ಸಿಬಾಬ…, ಕ್ರುಕಟ್‌, ಸೈಡ್‌ ಬ್ಯಾಂಗ್ಸ್‌, ಮಂಕಿ ಫ್ರಿಂಜ…, ಲೇಯರ್‌x ಬಾಬ…, ಷೇವ್‌xಕ್ರಾಪ್‌, ಅಸ್ಸಿಮ್ಮೆಟ್ರಿಕಲ್‌ಹೇರ್‌, ಮೆಸ್ಸಿ ಕಟ್‌ ಹೀಗೆ ಹತ್ತು ಹಲವಾರು ತರಹದ ಶಾರ್ಟ್‌ಹೇರ್‌ಕಟ್‌ಗಳಿವೆ.

ತಲೆಯ ಮೇಲಿಂದ ಭಾರವನ್ನು ಅಥವಾ ದೊಡ್ಡ ಹೊರೆಯನ್ನು ಕೆಳಗಿಳಿಸಿದಂತೆ ಆಗುತ್ತದೆ ಅನ್ನೋ ಭಾವನೆ ಹುಟ್ಟುವ ಕಾರಣ ಮಹಿಳೆಯರು ಬ್ರೇಕ್‌ ಅಪ್‌ ಬಳಿಕ ತಲೆಕೂದಲು ಕತ್ತರಿಸಲು ಮುಂದಾಗುತ್ತಾರೆ. ಈ ರೀತಿ ಪ್ರಯೋಗಗಳನ್ನು ಮಾಡುವ ಮುನ್ನ ತಮ್ಮ ಹೇರ್‌ ಸ್ಟೈಲಿಸ್ಟ್‌ ಬಳಿ ತೆರಳಿ ತಮ್ಮ ಮುಖಕ್ಕೆ ಹೊಂದುವಂಥ ಹೇರ್‌ಕಟ್‌ ಯಾವುದೆಂಬುದರ ಕುರಿತು ಸಲಹೆ ಪಡೆಯುವುದು ಉತ್ತಮ. ಇದಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಹಲವು ಆ್ಯಪ್‌ಗ್ಳು ಬಂದಿವೆ. ಇದರಲ್ಲಿ ನಿಮ್ಮ ಮುಖದ ಚಿತ್ರವನ್ನು ಅಪ್‌ಲೋಡ್‌ ಮಾಡಿ ನಿಮಗೆ ಯಾವ ಹೇರ್‌ ಸ್ಟೈಲ್‌ ಸೂಕ್ತವೆಂಬುದನ್ನು ಅದರಲ್ಲಿ ನೋಡಿ ಕಂಡುಕೊಳ್ಳಬಹುದು. 

Advertisement

– ಅದಿತಿಮಾನಸ. ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next